ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ 10ಕ್ಕೂ ಅಧಿಕ ನಕಲಿ ಆ್ಯಪ್‌ಗಳ ಹಾವಳಿ ಶುರುವಾಗಿದೆ. ಇವುಗಳನ್ನು ಡೌನ್‌ಲೋಡ್ ಮಾಡಿದ್ರೆ ನಿಮ್ಮ ಹಣ ಖೊತಾ ಆಗಲಿದೆ.
ಬೆಂಗಳೂರು (ಜು.16): ಕರ್ನಾಟಕ ಕಾಂಗ್ರೆಸ್ ಸರ್ಕಾರ 3ನೇ ಗ್ಯಾರಂಟಿಯಾಗಿ ಗೃಹಲಕ್ಷ್ಮಿ ಯೋಜನೆ (ಮನೆಯ ಒಡತಿಗೆ ಮಾಸಿಕ ತಲಾ 2000 ರೂ. ಹಣ ನೆರವು) ಜಾರಿಗೊಳಿಸಲಾಗುತ್ತಿದೆ. ಆದರೆ, ಯೋಜನೆ ಜಾರಿಗೂ ಮುನ್ನವೇ ಸ್ಮಾರ್ಟ್ ಫೋನ್‌ಗಳ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10ಕ್ಕೂ ಅಧಿಕ ನಕಲಿ ಗೃಹಲಕ್ಷ್ಮಿ ಆ್ಯಪ್‌ಗಳು ಹುಟ್ಟಿಕೊಂಡಿವೆ. ಇವುಗಳನ್ನು ಡೌನ್‌ಲೋಡ್ ಮಾಡಿದರೆ ನಿಮ್ಮ ಹಣ ವಂಚಕರ ಪಾಲೋಗೋದು ಗ್ಯಾರಂಟಿ ಆಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ 3ನೇ ಗ್ಯಾರಂಟಿ ಯೋಜನೆಯಾಗಿ ಮಹಿಳೆಯರಿಗೆ 2000 ರೂ. ಹಣವನ್ನು ನೀಡುವ "ಗೃಹಲಕ್ಷ್ಮಿ" ಯೋಜನೆಗನ್ನು ಜು.19ರಿಂದ ಜಾರಿಗೊಳಿಸಲಾಗುತ್ತಿದೆ. ಆದರೆ, ಸರ್ಕಾರ ಯೋಜನೆ ಜಾರಿಗೊಳಿಸುವುದಕ್ಕೂ ಮುನ್ನವೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಕಲಿ ಗೃಹಲಕ್ಷ್ಮಿ ಯೋಜನೆ ಆ್ಯಪ್‌ಗಳ ಹಾವಳಿ ಹೆಚ್ಚಾಗಿದೆ. ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ಭರ್ತಿ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣ ಆನ್‌ಲೈನ್ ವಂಚಕರ ಪಾಲಾಗಲಿದೆ.
ಗೃಹಲಕ್ಷ್ಮಿ ಯೋಜನೆಗೆ ಉಚಿತ ಅರ್ಜಿ ಸಲ್ಲಿಕೆ: ಮನೆ ಬಾಗಿಲಿಗೆ ಬರ್ತಾರೆ ಪ್ರಜಾಪ್ರತಿನಿಧಿಗಳು
ಸರ್ಕಾರದಿಂದ ಆ್ಯಪ್ ಬಿಡುಗಡೆ ಮಾಡಿಲ್ಲ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ 'ಗೃಹಲಕ್ಷ್ಮಿ ಯೋಜನೆ'ಗೆ ಸರ್ಕಾರದಿಂದ ಪ್ರತ್ಯೇಕವಾಗಿ ಅಪ್ಲಿಕೇಶನ್ (ಆ್ಯಪ್) ಸಿದ್ಧಪಡಿಸಲಾಗಿದೆ. ಆದರೆ, ಈವರೆಗೆ ಸರ್ಕಾರದಿಂದ ಆ್ಯಪ್ ಅನ್ನು ಬಿಡುಗಡೆ ಮಾಡಿಲ್ಲ. ಆದರೆ, ಈ ಯೋಜನೆಯ ಫಲಾನುಭವಿಗಳನ್ನೇ ಟಾರ್ಗೆಟ್ ಮಾಡಿರುವ ಆನ್‌ಲೈನ್ ವಂಚಕರು ಹತ್ತಾರು ನಕಲಿ ಆ್ಯಪ್‌ಗಳನ್ನು ಸಿದ್ಧಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ (Gruha Lakshmi Yojana app) ಹೆಸರಿನಲ್ಲಿ ಸುಮಾರು 10ಕ್ಕೂ ಅಧಿಕ ನಕಲಿ ಆ್ಯಪ್‌ಗಳು ಹುಟ್ಟಿಕೊಂಡಿದ್ದು, ಫಲಾನುಭವಿ ಮಹಿಳೆಯರನ್ನು ವಂಚಿಸಲು ಸಿದ್ಧಗೊಂಡಿವೆ. ಆದ್ದರಿಂದ ಸರ್ಕಾರದ ಪ್ರತಿಷ್ಠಿತ ಯೋಜನೆ ಜಾರಿಗೂ ಮುನ್ನವೇ ಗೃಹಲಕ್ಷ್ಮಿ ಯೋಜನೆಗೆ ನಕಲಿ ಅಫ್ಲೀಕೇಷನ್ ಹಾವಳಿ ಶುರುವಾಗಿದೆ.
ನಿಮ್ಮ ಹಣಕ್ಕೆ ಕನ್ನ ಬೀಳೋದು ಗ್ಯಾರಂಟಿ: ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸುವ ಭರದಲ್ಲಿ ನಕಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಖಾತೆಗೆ ಸರ್ಕಾರದಿಂದ ಹಣ ಬರುವುದಿರಲಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್‌ನಲ್ಲಿ ಈ ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿರುವ ನಕಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡ ನಂತರ, ಅಪ್ಪಿತಪ್ಪಿಯೂ ಮಾಹಿತಿ ಭರ್ತಿ ಮಾಡಲು ಹೋಗಬೇಡಿ. ಒಂದು ವೇಳೆ ಬ್ಯಾಂಕ್ ಖಾತೆ, ಆಧಾರ್‌ಕಾರ್ಡ್ ಮಾಹಿತಿ ಹಾಗೀ ಇತರೆ ವೈಯಕ್ತಿಕ ಮಾಹಿತಿ ಭರ್ತಿ ಮಾಡಿದ ತಕ್ಷಣವೇ ನಿಮಗೊಂದು ಒಟಿಪಿ (One time Password- OTP) ಬರುತ್ತದೆ. ಇನ್ನು ಒಟಿಪಿ ನಮೂದು ಮಾಡಿದ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣವೂ ಆನ್‌ಲೈನ್ ವಂಚಕರ ಪಾಲಾಗುತ್ತದೆ.
ಸಾರ್ವಜನಿಕರ ಸಮಸ್ಯೆ ತಪ್ಪಿಸಲು ಆ್ಯಪ್ ಅಭಿವೃದ್ಧಿ: ರಾಜ್ಯ ಸರ್ಕಾರದಿಂದ ಈಗಾಗಲೇ ಎರಡನೇ ಕಾಂಗ್ರೆಸ್ ಗ್ಯಾರಂಟಿಯಾಗಿ ಜಾರಿಗೊಳಿಸಲಾದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರಕ್ಕೆ ಸರ್ವರ್ ಸಮಸ್ಯೆ ಎದುರಾಗಿತ್ತು. ಇದರಿಂದ ಸಾರ್ವಜನಿಕ ಜನರಲ್ಲಿ ಗೊಂದಲ ಮೂಡಿತ್ತು. ಸರ್ಕಾರದ ಸೇವಾ ಸಿಂಧು ಪೋರ್ಟಲ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾಕೇಂದ್ರದಲ್ಲಿ ನೋಂದಣಿ ಮಾಡಲು ಪ್ರತಿನಿತ್ಯ ಜನರು ಸರದಿ ಸಾಲಿನಲ್ಲಿ ನಿಂತು ಹೈರಾಣಾಗಿದ್ದರು. ಈಗ ಗೃಹಲಕ್ಷ್ಮಿ ಯೋಜನೆಗೆ ಈ ಸಮಸ್ಯೆ ಉಂಟಾಗಬಾರದೆಂದು ಪ್ರತ್ಯೇಕ ಆ್ಯಪ್ ತಯಾರಿಸಲಾಗಿದೆ. ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಅಪ್ಲೀಕೇಶನ್‌ಗೆ ಗ್ರೀನ್ ಸಿಗ್ನಲ್ ದೊರೆತಿರುವ ಬೆನ್ನಲ್ಲಿಯೇ ಎಲ್ಲ ಸ್ಮಾರ್ಟ್ ಫೋನ್‌ಗಳ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಫೇಕ್ ಆಪ್ಸ್ (Google play store fake apps) ಹರಿದಾಡುತ್ತಿದೆ.
ಗೃಹ ಲಕ್ಷ್ಮಿ ಯೋಜನೆ ನಿಯಮದಲ್ಲಿ ಮತ್ತೆ ಬದಲಾವಣೆ, ಮಕ್ಕಳು ತೆರಿಗೆ ಕಟ್ಟಿದರೂ ತಾಯಿಗೆ 2,000 ರೂ ಖಚಿತ!
ಸೈಬರ್ ಕಳ್ಳರಿಂದ ಜನರಿಗೆ ಮೋಸ
ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಗಳ ಹೆಸರಿನಲ್ಲಿ 10ಕ್ಕೂ ಹೆಚ್ಚು ನಕಲಿ ಅ್ಯಪ್ ಗಳು ಕಾರ್ಯಾಚರಿಸುತ್ತಿದ್ದು, ಮೂಲಕ ಸೈಬರ್ ಕಳ್ಳರು ಸಾರ್ವಜನಿಕರಿಗೆ ಮೋಸ ಮಾಡುತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸುವಹಿಸಬೇಕು.
- ಅಕ್ಷಯ್ ಹಾಕೆ ಮಚ್ಚಿಂದ್ರ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ