ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಗುಡ್ ನ್ಯೂಸ್.. ಭತ್ಯೆ ಗಣನೀಯ ಹೆಚ್ಚಳ

Published : Oct 18, 2019, 08:27 PM ISTUpdated : Oct 18, 2019, 08:52 PM IST
ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಗುಡ್ ನ್ಯೂಸ್.. ಭತ್ಯೆ ಗಣನೀಯ ಹೆಚ್ಚಳ

ಸಾರಾಂಶ

ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್/ ಕಷ್ ಪರಿಹಾರ ಭತ್ಯೆ ಹೆಚ್ಚಳ/ ತಲಾ 1 ಸಾವಿರ ರೂ. ಏರಿಕೆ ಮಾಡಿದ ರಾಜ್ಯ ಸರ್ಕಾರ/ ನವೆಂಬರ್ 1 ರಿಂದಲೇ  ಹೊಸ ಪದ್ಧತಿ ಜಾರಿ

ಬೆಂಗಳೂರು[ಅ. 18]  ಐಪಿಎಸ್‌ ಅಧಿಕಾರಿ ರಾಘವೇಂದ್ರ ಎಚ್‌.ಔರಾದ್ಕರ್‌ ವರದಿಯನ್ವಯ ಪೊಲೀಸರ ವೇತನ ಪರಿಷ್ಕರಣೆ ಮಾಡಿ  ಇನ್ನೇನು ಕೈ ಸೇರಬೇಕು ಎನ್ನುವಷ್ಟರಲ್ಲಿ ದಿಢೀರನೇ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿ ಬ್ರೇಕ್‌ ಹಾಕಿತ್ತು. ಈ ಸುದ್ದಿ ಒತ್ತಟ್ಟಿಗೆ ಇರಲಿ. ಪೊಲೀಸ್ ಸಿಬ್ಬಂದಿಯ ನೋವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಅವರಿಗೆ ನೀಡುತ್ತಿದ್ದ ಕಷ್ಟ ಪರಿಹಾರ ಭತ್ಯೆ ಪರಿಷ್ಕರಿಸಿದೆ.

ವಿಶೇಷ ಭತ್ಯೆ ಜಾರಿ ಕ್ರಮಕ್ಕೆ ಹಸಿರು ನಿಶಾನೆ ತೋರಿದೆ. ಜಮೇದಾರ್ , ಮುಖ್ಯ ಪೇದೆ, ಸಹಾಯಕ ಸಬ್ ಇನ್ಸಪೆಕ್ಟರ್ , ಸಬ್ ಇನ್ಸ್ ಪೆಕ್ಟರ್   ಇದರ ಲಾಭ ಪಡೆದುಕೊಳ್ಳಲಿದ್ದಾರೆ.

ಪೊಲೀಸ್‌ ವೇತನ ಏರಿಕೆ ಜಾರಿಗೆ ದಿಢೀರ್‌ ತಡೆ!

ಮಾಸಿಕ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ನೀಡಿದ್ದು ಪೊಲೀಸ್ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದೆ. ಇನ್ನೊಂದು ಕಡೆ ಸರ್ಕಾರಿ ನೌಕರರ ಭತ್ಯೆ ಹೆಚ್ಚಳ ಪ್ರಸ್ತಾವನೆಗೂ ಅಂಕಿತ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲ ಕೆಲಸಗಳು ಮುಗಿದಿದ್ದು ಅಧಿಕೃತ ಆದೇಶವೊಂದೇ ಬಾಕಿ ಇದೆ.

ಪ್ರಮುಖ ಪಾಯಿಂಟ್ಸ್

ಡಿಸೆಂಬರ್ 1 ರ ಬದಲಾಗಿ ನವೆಂಬರ್ 1 ರಿಂದಲೇ ಪರಿಷ್ಕೃತ ಭತ್ಯೆ ಹೆಚ್ಚಳ ಜಾರಿ 

ಜಮೇದಾರ್/ ಅನುಯಾಯಿ- 1000 ರೂ. ಇದ್ದದ್ದು 2000ಕ್ಕೆ ಏರಿಕೆ
ಪೊಲೀಸ್ ಪೇದೆ 2000 ದಿಂದ 3000
ಮುಖ್ಯ ಪೇದೆ 1000 ದಿಂದ 2000
ಸಹಾಯಕ ಸಬ್ ಇನ್ಸ್ ಪೆಕ್ಟರ್ 1000 ದಿಂದ 2000
ಪೊಲೀಸ್   ಸಬ್ ಇನ್ಸ್ ಪೆಕ್ಟರ್1000 ದಿಂದ 2000   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!