ಸರ್ಕಾರದಿಂದ ಗುಡ್‌ನ್ಯೂಸ್‌: ಭದ್ರಾವತಿ ವಿಶ್ವೇಶ್ವರಯ್ಯ ಕಾರ್ಖಾನೆ VISL ಉಳಿಸಲು ನಿರ್ಣಯ

By Sathish Kumar KHFirst Published Feb 16, 2023, 2:11 PM IST
Highlights

ಭದ್ರಾವತಿಯ ವಿಐಎಸ್‌ಎಲ್‌ ಕೈಗಾರಿಕೆ ಮುಚ್ಚಲು ಅವಕಾಶ ಕೊಡಲ್ಲ. ಮೊದಲು ಕಾರ್ಖಾನೆ ಮುಚ್ಚಲು ಬಂದಿರುವ ಆದೇಶಕ್ಕೆ ತಡೆಯಾಜ್ಞೆ (Stay Order) ಕೊಡಬೇಕು. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.

ಬೆಂಗಳೂರು (ಫೆ.16): ರಾಜ್ಯದ ಹೆಮ್ಮೆಯಾಗಿರುವ ಹಾಗೂ ಸ್ವಾತಂತ್ರ್ಯದ ನಂತರ ದೇಶದಲ್ಲಿ ಸೃಷ್ಟಿಯಾಗಿದ್ದ ಕೈಗಾರಿಕಾ ಕ್ರಾಂತಿಯ ವೇಳೆ ಭದ್ರಾವತಿಯಲ್ಲಿ ಆರಂಭಿಸಲಾಗಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್‌)ಯನ್ನು ಮುಚ್ಚಲು ಬಿಡುವುದಿಲ್ಲ ಎಂದು ವಿಧಾನಸಭಾ ಅಧಿವೇಶನದಲ್ಲಿ ಸರ್ವಪಕ್ಷಗಳ ನಾಯಕರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಸಂಗಮೇಶ ಅವರು, ಭದ್ರಾವತಿ (Visvesvaraya Iron and Steel Plant -VISL) ಕಾರ್ಖಾನೆ ಬಂದ್ ಆಗುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದರು. ಈ ಕಂಪನಿ ಉಳಿಸಲು ಒಂದು ಸರ್ವಾನುಮತದಿಂದ ನಿರ್ಣಯ ಮಾಡಬೇಕು ಎಂದು ಆಗ್ರಹಿಸಿದರು. ಇನ್ನು ಶಾಸಕ ಸಂಗಮೇಶ (MLA Sangamesh) ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yadiyurappa) ಕೂಡ ವಿಐಎಸ್‌ಎಲ್‌ ಉಳಿಸುವಂತೆ ಆಗ್ರಹ ವ್ಯಕ್ತಪಡಿಸಿದರು. ಕೂಡಲೇ ಕಂಪನಿ ಉಳಿಸಲು ನಿರ್ಣಯ ಮಾಡುವಂತೆ ಮನವಿ ಮಾಡಿದರು. 

ಶಿವಮೊಗ್ಗ: ವಿಐಎಸ್‌ಎಲ್‌ಗೆ ಶಾ​ಶ್ವತ ಬೀಗ: ಉಕ್ಕಿನ ನಗರಿಗೆ ಕಾರ್ಮೋಡ

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai)  ಮಾತನಾಡಿ, ಭದ್ರಾವತಿಯ ವಿಐಎಸ್‌ಎಲ್‌ ಕೈಗಾರಿಕೆ ಮುಚ್ಚಲು ಅವಕಾಶ ಕೊಡಲ್ಲ. ಮೊದಲು ಕಾರ್ಖಾನೆ ಮುಚ್ಚಲು ಬಂದಿರುವ ಆದೇಶಕ್ಕೆ ತಡೆಯಾಜ್ಞೆ (Stay Order) ಕೊಡಬೇಕು. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸಂಸದ ರಾಘವೇಂದ್ರ (MP Raghavendra) ಅವರ ನೇತೃತ್ವದಲ್ಲಿ ಈಗಾಗಲೇ ಮನವಿ ನೀಡಲಾಗಿದೆ. ಕಾರ್ಖಾನೆ ಬಂದ್‌ ಮಾಡುವುದಕ್ಕೆ ತಡೆಯಾಜ್ಞೆ ಕೊಟ್ಟರೆ ಜನರ ಆತಂಕ ದೂರವಾಗುತ್ತದೆ. ಈಗಾಗಲೇ ಕೇಂದ್ರಕ್ಕೂ ಸಹ ಬರೆದಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಕೇಂದ್ರ ಸರ್ಕಾರ ಕೊಟ್ಟಿದೆ ಎಂದು ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಲು ಆಕ್ಷೇಪ: ರಾಜ್ಯಪಾಲರ ಭಾಷಣ ಕುರಿತು ಚರ್ಚೆ ಮಾಡಲು ಮುಂದಾದ ಮಾಜಿ ಸಿಎಂ ಕುಮಾರಸ್ವಾಮಿ. (Ex CM Kuamaraswamy) ಕುಮಾರಸ್ವಾಮಿ ಭಾಷಣಕ್ಕೆ ಮುನ್ನ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ. ವಿಧಾನಸಭೆಯಲ್ಲಿ ತೌಡು ಕುಟ್ಟುವ ಕೆಲಸ ಆಗ್ತಿದೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲಿಗೆ ಹೋಗಿ ಏನ್ ಮಾಡಬೇಕು ಅಂತ ಹೇಳಿರುವುದಾಗಿ ಪತ್ರಿಕೆಯಲ್ಲಿ ವರದಿಯಾಗಿದೆ. ಇಂತಹ ಹೇಳಿಕೆ ನೀಡಿದರೆ ಸದನದ ಗೌರವ ಏನಾಗಬೇಡ. ನೀವು ಮಾಜಿ ಮುಖ್ಯಮಂತ್ರಿ ಆಗಿದ್ದು, ಇಂತಹ ಹೇಳಿಕೆ ಕೊಡುವುದು ಸರಿಯಲ್ಲ. ಇದರಿಂದ ಸದನದ ಸದಸ್ಯರ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

VISL ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ ಕೇಂದ್ರ ಸರ್ಕಾರ!

ಆದರೆ, ಈ ಹೇಳಿಕೆ ತಾವು ನೀಡಿಲ್ಲ ಎಂದ ಕುಮಾರಸ್ವಾಮಿ. ನಾನು ಹೇಳಿಲ್ಲ - ಸಿದ್ಧರಾಮಯ್ಯ ಚರ್ಚೆ ಮಾಡಿದಾಗ ಈ ರೀತಿಯ ಮಾತು ಬಂದಿದೆ. ವಿಧಾನಸಭಾ ಕಲಾಪದಲ್ಲೇ ಇದು ಚರ್ಚೆಯಾಗಿದೆ ಎಂದರು.

ಭದ್ರಾವತಿ (ಫೆ.15) : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಕುರಿತು ಕೇಂದ್ರ ಸಚಿವರು ಸೋಮವಾರ ಸ್ಪಷ್ಟಪಡಿಸಿರುವ ಹಿನ್ನೆಲೆ ಕಾರ್ಮಿಕ ವಲಯದಲ್ಲಿ ಕಾರ್ಮೋಡ ಆವರಿಸಿಕೊಂಡಿದೆ. ಈ ನಡುವೆ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಮಂಗಳವಾರ 27ನೇ ದಿನ ಪೂರೈಸಿದೆ.ಕಾರ್ಖಾನೆ ಮುಚ್ಚುವ ಆದೇಶದ ವಿಚಾರ ತಿಳಿಸಿದ ತಕ್ಷಣ ಜ.16ರಿಂದ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದಾರೆ. ಹೋರಾಟಕ್ಕೆ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ ಗುರೂಜಿ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್‌, ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ಗಣ್ಯರು ಬೆಂಬಲ ಸೂಚಿಸಿದ್ದಾರೆ.

click me!