ವಿಧಾನಸಭೆ: ಆಟೋ ಚಾಲಕರಿಗೆ ನಿಗಮ ಸ್ಥಾಪಿಸಿ: ಜಗದೀಶ್ ಶೆಟ್ಟರ್‌

By Kannadaprabha NewsFirst Published Feb 16, 2023, 8:01 AM IST
Highlights

ಅಸಂಘಟಿತ ವಲಯದಲ್ಲಿ ಶ್ರಮಿಸುತ್ತಿರುವ ಆಟೋ ಚಾಲಕರ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ನಿಗಮ ರಚನೆ ಮಾಡಿ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಸದಸ್ಯ ಜಗದೀಶ್‌ ಶೆಟ್ಟರ್‌ ಆಗ್ರಹಿಸಿದ್ದಾರೆ.

ವಿಧಾನಸಭೆ (ಫೆ.16) : ಅಸಂಘಟಿತ ವಲಯದಲ್ಲಿ ಶ್ರಮಿಸುತ್ತಿರುವ ಆಟೋ ಚಾಲಕರ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ನಿಗಮ ರಚನೆ ಮಾಡಿ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಸದಸ್ಯ ಜಗದೀಶ್‌ ಶೆಟ್ಟರ್‌ ಆಗ್ರಹಿಸಿದ್ದಾರೆ.

ಬುಧವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ(Uttara karnataka) ಭಾಗದ ಸಮಸ್ಯೆಗಳ ಕುರಿತು ಸದನದಲ್ಲಿ ಬೆಳಕು ಚೆಲ್ಲಿದರು. ಮಹದಾಯಿ ಯೋಜನೆ(Mahadayi project) ಅನುಷ್ಠಾನ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೊಜನೆ(Hubballi-ankola railway projecct), ಸ್ಕ್ರಾಪ್‌ ಆಗಿರುವ ಬಸ್‌ಗಳ ಜಾಗಕ್ಕೆ ಹೊಸ ಬಸ್‌ಗಳ ಸೇರ್ಪಡೆ ಸೇರಿದಂತೆ ಹಲವು ವಿಷಯಗಳಲ್ಲಿ ಸಮಸ್ಯೆ ಮತ್ತು ಅವುಗಳಿಗೆ ಪರಿಹಾರಗಳನ್ನು ತಿಳಿಸಿ ಸದನದ ಪ್ರಶಂಸೆಗೊಳಗಾದರು.

ಕಾಂಗ್ರೆಸ್‌ ಮಾಡಿದ ರಾಡಿ ನಮಗೆ ಸರಿಪಡಿಸಲು ಆಗುತ್ತಿಲ್ಲ; ಜಗದೀಶ್ ಶೆಟ್ಟರ್

ಚರ್ಚೆಯ ವೇಳೆ ರಾಜ್ಯದಲ್ಲಿನ ಆಟೋ ಚಾಲಕರ ಕುರಿತು ಪ್ರಸ್ತಾಪಿಸಿದ ಜಗದೀಶ್‌ ಶೆಟ್ಟರ್‌(Jagadish shettar), ರಾಜ್ಯದಲ್ಲಿ ಸುಮಾರು 10 ಲಕ್ಷ ಆಟೋ ಚಾಲಕ(Auto dri er)ರಿದ್ದಾರೆ. ಅವರು ಅಸಂಘಟಿತ ವಲಯಕ್ಕೆ ಬರಲಿದ್ದು, ಇಎಸ್‌ಐ, ಪಿಂಚಣಿ ಸೇರಿದಂತೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಎಲ್ಲಾ ಜಾತಿಯವರು ಆಟೋ ಚಾಲಕರಿದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕವಾದ ನಿಗಮ ರಚನೆ ಮಾಡಬೇಕು. ಈ ಮೂಲಕ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಾಯುವ್ಯ, ಈಶಾನ್ಯ ಸಾರಿಗೆ, ಬಿಎಂಟಿಸಿ ನಷ್ಟದಲ್ಲಿದೆ. ಈ ಸಂಸ್ಥೆಗಳನ್ನು ಲಾಭದತ್ತ ಕೊಂಡೊಯ್ಯುವ ನಿಟ್ಟಿಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಅದಷ್ಟುಬೇಗ ವರದಿ ತರಿಸಿಕೊಂಡು ಅನುಷ್ಠಾನಗೊಳಿಸಬೇಕು. ಒಂಬತ್ತು ಲಕ್ಷ ಕಿ.ಮೀ. ಓಡಾಡಿರುವ ಬಸ್‌ಗಳನ್ನು ಸ್ಕ್ರಾಪ್‌ಗೆ (ಗುಜರಿ) ಹಾಕಬೇಕು ಎಂಬ ನಿಯಮ ಇದೆ. ಆದರೆ, ರಾಜ್ಯದಲ್ಲಿ ಒಂಭತ್ತು ಲಕ್ಷ ಕಿ.ಮೀ.ಗಿಂತ ಹೆಚ್ಚು ಕ್ರಮಿಸಿರುವ ಬಸ್‌ಗಳು 2621 ಇದ್ದು, 12 ಲಕ್ಷ ಕಿ.ಮೀ.ಗಿಂತ ಹೆಚ್ಚು ಓಡಿರುವ ಬಸ್‌ಗಳು 1400 ಇವೆ. ಹೀಗಾಗಿ ತಕ್ಷಣ ಅಗತ್ಯಕ್ಕಿಂತ ಹೆಚ್ಚು ಕಿ.ಮೀ. ಓಡಿರುವ ಬಸ್‌ಗಳನ್ನು ಸ್ಕ್ರಾಪ್‌ಗೆ ಹಾಕಬೇಕು ಮತ್ತು ಹೊಸ ಬಸ್‌ಗಳನ್ನು ರಸ್ತೆಗಿಳಿಸಬೇಕು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಎಲೆಕ್ಟ್ರಿಕ್‌ ಬಸ್‌ ಎಷ್ಟುಓಡಿಸಲಾಗುತ್ತದೆ ಎಂಬುದರ ಮಾಹಿತಿಯನ್ನು ನೀಡಬೇಕು ಎಂದರು.

ಕಿಮ್ಸ್‌ ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ಜೀವನನಾಡಿಯಾಗಿದೆ. ಸಂಸ್ಥೆಯಲ್ಲಿ ಹಲವು ಸೌಲಭ್ಯಗಳ ಕೊರತೆ ಇದ್ದು, ತಕ್ಷಣ ಅವುಗಳನ್ನು ನಿವಾರಿಸಬೇಕು. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ನಂಜುಂಡಪ್ಪ ವರದಿಯನ್ವಯ ನೀಡುತ್ತಿರುವ ಅನುದಾನದಲ್ಲಿ ಎಷ್ಟುವೆಚ್ಚವಾಗಿದೆ? ಎಷ್ಟರ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆÜ ಸೇರಿದಂತೆ ಇತರೆ ವಿಷಯಗಳ ಕುರಿತು ಪರಾಮರ್ಶೆ ನಡೆಸಬೇಕು. ತಾಲೂಕುಗಳು ಅಭಿವೃದ್ಧಿ ಬಗ್ಗೆ ತಿಳಿಯಲು ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಹೇಳಿದರು.

ಶೆಟ್ಟರ್‌ ಪ್ರಚಾರಕ್ಕೆ ಬಂದ ಪಟಪಟ ಪಾರ್ವತಿ!

ಮಹದಾಯಿ ಯೋಜನೆ ತ್ವರಿತವಾಗಿ ಕಾರ್ಯಗತಗೊಳಿಸಬೇಕು

ಹಲವು ವರ್ಷಗಳ ಹೋರಾಟದ ಫಲವಾಗಿ ಮಹದಾಯಿ ಯೋಜನೆ ಜಾರಿಗೆ ಇದ್ದ ಅಡ್ಡಿಗಳು ದೂರವಾಗುತ್ತಿದ್ದು, ತ್ವರಿತವಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್‌ ಶೆಟ್ಟರ್‌ ಸಲಹೆ ನೀಡಿದರು.

ರಾಜ್ಯ ಸರ್ಕಾರವು ಯೋಜನೆ ಸಂಬಂಧ ಡಿಪಿಆರ್‌ ಸಿದ್ಧ ಪಡಿಸಿರುವುದಕ್ಕೆ ಗೋವಾ ಸರ್ಕಾರವು ಆಕ್ಷೇಪಿಸಿ ಸುಪ್ರೀಂಕೋರ್ಚ್‌ ಮೊರೆ ಹೋಗಿತ್ತು. ಆದರೆ, ನ್ಯಾಯಾಲಯವು ರಾಜ್ಯದ ಪರ ತೀರ್ಪು ನೀಡಿದ್ದು, ಪರಿಸರ, ಅರಣ್ಯ ಇಲಾಖೆಯ ಒಪ್ಪಿಗೆ ತೆಗೆದು ಮುಂದುವರಿಯುವಂತೆ ತಿಳಿಸಿದೆ. ಹೀಗಾಗಿ ಸರ್ಕಾರವು ಯೋಜನೆಯ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

click me!