SSLC ಪರೀಕ್ಷೆಯಲ್ಲಿ ಇನ್ಮುಂದೆ 35 ಅಲ್ಲ 30 ಅಂಕ ಪಡೆದರೆ ಪಾಸ್, ಸರ್ಕಾರದ ನಿರ್ಧಾರ

Published : Jul 24, 2025, 10:47 PM IST
SSLC exam

ಸಾರಾಂಶ

ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಇದುವಗೆ ಪಾಸ್ ಆಗಲು ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆಯಬೇಕಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಕೇವಲ 30 ಅಂಕ ಪಡೆದರೆ ಪಾಸ್ ಎಂದಿದೆ. ಸರ್ಕಾರ ಉತ್ತೀರ್ಣ ಅಂಕ ಕಡಿತಗೊಳಿಸಿದೆ.

ಬೆಂಗಳೂರು (ಜು.24) ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಎಸ್‌ಎಸ್ಎಲ್‌ಸಿ ಪರೀಕ್ಷೆ ಹಾಗೂ ಉತ್ತೀರ್ಣ ಅಂಕಗಳಿಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಇನ್ನು ಮುಂದೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಪಾಸ್ ಮಾರ್ಕ್ 35 ಅಲ್ಲ. ಕೇವಲ 30 ಅಂಕ ಪಡೆದರೆ ಸಾಕು. ವಿದ್ಯಾರ್ಥಿಯನ್ನು ಉತ್ತೀರ್ಣ ಮಾಡಲು ಸರ್ಕಾರ ಮಹತ್ವದ ತಿದ್ದುಪಡಿ ಮಾಡಿದೆ. ಹೊಸ ನೀತಿ ಪ್ರಕಾರ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಪ್ರತಿ ವಿಷಯದಲ್ಲಿ 30 ಅಂಕ ಪಡೆದರೆ ಸಾಕು, ವಿದ್ಯಾರ್ಥಿಗಳು ಪಾಸ್ ಎಂದು ನಿರ್ಧರಿಸಲಾಗುತ್ತದೆ.

206 ಅಂಕ ಪಡೆದರೆ ಪಾಸ್

ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಓವರ್ ಅಲ್ ಅಗ್ರಿಗೇಟ್ ಶೇಕಡಾ 33 ಪಾಸಿಂಗ್ ಅಂಕಕ್ಕೆ ಕಡಿತ ಮಾಡಲಾಗಿದೆ.ಹೀಗಾಗಿ ಇದೀಗ 625ಕ್ಕೆ 206 ಅಂಕ ಪಡೆದ ವಿದ್ಯಾರ್ಥಿಗಳನ್ನು ಪಾಸ್ ಎಂದು ಘೋಷಿಸಲಾಗುತ್ತದೆ. ಈ ಹಿಂದೆ ಓವರ್ ಆಲ್ ಪಾಸಿಂಗ್ ಶೇಕಡಾ 35 ಇತ್ತು. ಹೀಗಾಗಿ ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆದರೆ ಮಾತ್ರ ಪಾಸ್ ಆಗುತ್ತಿತ್ತು. ಆದರ ಇದೀಗ ಪ್ರತಿ ವಿಷಯದಲ್ಲಿ 30 ಅಂಕ ಪಡೆದರೆ ಸಾಕು. ಒಟ್ಟು ಪಾಸಿಂಗ್ ಅಗ್ರೇಗೇಟ್ ಶೇಕಡಾ 33 ಬರಬೇಕು.

ಅಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ

ಸಿಬಿಎಸ್ಇ ಮಾಡಲ್ ನಲ್ಲಿ ಇದೇ ಮಾದರಿ ಇದೆ. ಹೀಗಾಗಿ ರಾಜ್ಯ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಪ್ರಸ್ತಾವನೆಗೆ ಅಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಈ ಕುರಿತು ಅಕ್ಷೇಪ ಸಲ್ಲಿಸಿಕೆ ಅವಕಾಶ ನೀಡಲಾಗಿದೆ. 

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿಯಾಮಳಿ 1966ಕ್ಕೆ ಸರ್ಕಾರ ತಿದ್ದುಪಡಿ ತಂದಿದೆ. ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನ ಹಾಗೂ ಬಾಹ್ಯ ಪರೀಕ್ಷೆ ಸೇರಿ ಒಟ್ಟಾರೆ ಸರಾಸರಿ ಶೇಕಡಾ 33ರಷ್ಟು ಅಂಕಗಳನ್ನು ಪಡೆದರೆ ಪಾಸ್ ಎಂದು ನಿರ್ಧರಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಕ್ತಿ ಯೋಜನೆಯಡಿ 600 ಕೋಟಿಗೂ ಹೆಚ್ಚು ಮಹಿಳೆಯರ ಬಸ್ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ
ಡಿ.ಕೆ.ಶಿವಕುಮಾರ್‌ ಒಂದು ಬಾರಿ ಸಿಎಂ ಆಗೇ ಆಗುತ್ತಾರೆ: ಶಾಸಕ ಎಸ್‌.ಟಿ.ಸೋಮಶೇಖರ್‌