
ವಿಧಾನಸಭೆ (ಮಾ.17): ಸರ್ಕಾರದಲ್ಲಿ 8-9 ತಿಂಗಳಿಂದ ಕಚೇರಿಗೆ ಬಾರದ ಐಎಎಸ್ ಅಧಿಕಾರಿಗಳು ಇದ್ದಾರೆ. ಅವರ ಬಗ್ಗೆ ಹಾಜರಾತಿ ಸಹಿತ ದಾಖಲೆ ನೀಡುತ್ತೇನೆ. ಅಂತಹವರ ಮೇಲೆ ಕ್ರಮ ಆಗಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಉತ್ತರ ಸಿಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿ, ಇವರಿಗೆ ಗಾಲ್ಫ್ ಆಡೋಕೆ ಸಮಯ ಇರುತ್ತದೆ. ಆದರೆ ಕಚೇರಿಗೆ ಬರಲು ಆಗಲ್ಲ. 8-9 ತಿಂಗಳಿಂದಲೂ ಕಚೇರಿಗೆ ಬಾರದ ಐಎಎಸ್ ಅಧಿಕಾರಿಗಳು ಇದ್ದಾರೆ. ಆ ಬಗ್ಗೆ ದಾಖಲೆ ಒದಗಿಸುತ್ತೇನೆ ಎಂದು ಹೇಳಿದರು.
ಅಧಿವೇಶನದಲ್ಲಿ ಕಳೆದ ಒಂದು ವಾರದಿಂದ ಎಚ್ಚರಿಕೆ ನೀಡುತ್ತಿದ್ದೀರಿ. ಅಂತಿಮವಾಗಿ ಇಂದು ಬಿಸಿ ಮುಟ್ಟಿಸಿದ್ದೀರಿ. 2-3 ಮಂದಿಯನ್ನು ಅಮಾನತು ಮಾಡಬೇಕು. ಆಗ ಮಾತ್ರ ಇವರಿಗೆ ಬುದ್ದಿ ಬರುತ್ತದೆ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.
ಐಎಎಸ್ ಎಂದರೆ ಐಯಮ್ ಸಾರಿ ಎಂಬಂತಾಗಿದೆ. ನೀವು ಪೀಠದ ಗೌರವ ಕಾಪಾಡಬೇಕು. ಸದನಕ್ಕೆ ಅಗೌರವ ತೋರುವವರು. ಕಚೇರಿಗೆ ಬಾರದವರಿಗೆ ಶಿಕ್ಷೆ ಹಾಕಬೇಕು ಎಂದು ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ