
ಬೆಂಗಳೂರು (ಸೆ.30): ಉಪ ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಿನಾಂಕ 01-10-2024 ರಿಂದ ಫೇಸ್‌ಲೆಸ್, ಸಂಪರ್ಕರಹಿತ ಹಾಗೂ ಆನ್ಲೈನ್ ಮೂಲಕ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪಾಲಿಕೆಯಲ್ಲಿ ಪರೀಕ್ಷಾರ್ಥವಾಗಿ ಪ್ರಾರಂಭಿಸುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
1) ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರ ಕರಡು ಇ-ಖಾತಾವನ್ನು ಆನ್‌ಲೈನ್, www.bbmpeaasthi.karnataka.gov.in ನಲ್ಲಿ ರಚಿಸಿ, ಇರಿಸಲಾಗಿರುತ್ತದೆ.
2) ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ, ತಮ್ಮ ಸ್ವತ್ತಿನ ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿರತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬುಧವಾರ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ!
3) ನಾಗರೀಕರು ತಮ್ಮ ಸ್ವತ್ತಿನ ಅಂತಿಮ ಇ-ಖಾತಾವನ್ನು ಪಡೆಯಲು ಆನ್‌ಲೈನ್‌ಮೂಲಕ ಈ ಕೆಳಕಂಡ ಹೆಚ್ಚುವರಿ ಮಾಹಿತಿಗಳನ್ನು ಅಥವಾ ಕರಡು ಇ-ಖಾತಾದಲ್ಲಿರುವ ಅಂಶಗಳನ್ನು ಒಳಗೊಂಡಂತೆ, ಒದಗಿಸಬೇಕಾಗಿರುತ್ತದೆ.
ಆಧಾರ್ ಇ-ಕೆವೈಸಿ
ಸ್ವತ್ತಿನ ಜಿ.ಪಿ.ಎಸ್
ಸ್ವತ್ತಿನ ಪೋಟೋ
ಸ್ವತ್ತಿನ ನೋಂದಾಯಿತ ದಸ್ತಾವೇಜು
ಸ್ವತ್ತಿನ ಇ.ಸಿ ದಿನಾಂಕ 01-04-2004 ರಿಂದ ಈ ತಹಲ್‌ವರೆವಿಗೂ
ಬೆಸ್ಕಾಂ ಮೀಟರ್ ಸಂಖ್ಯೆ
ಎ-ಖಾತಾ ಎಂದು ಧೃಡೀಕರಿಸುವ ಸಂಬಂಧ ಹೆಚ್ಚುವರಿ ಇನ್ನಿತರೆ ದಾಖಲಾತಿಗಳು
4) ನಾಗರೀಕರು ಮೇಲಿನ ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ನಿಯಮಾವಳಂತೆ ಅಂತಿಮ ಇ-ಖಾತಾವನ್ನು ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಭೇಟಿ ಮಾಡಲು ಅವಕಾಶವಿರುತ್ತದೆ.
5) ಸ್ವತ್ತಿನ ಮಾಲೀಕರು ಅಂತಿಮ ಇ ಖಾತಾವನ್ನು ವಿತರಿಸದಂತೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ಕರಡು ಇ-ಖಾತಾವನ್ನು ರಚಿಸಿದ 7 ದಿನಗಳವರೆಗೆ ಆಕ್ಷೇಪಣೆ ಅವಧಿಯನ್ನು ನಿಗದಿಪಡಿಸಲಾಗಿದೆ. ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳು ಆಕ್ಷೇಪಣೆಯ ವಿಚಾರಣೆ ಕೈಗೊಂಡು ಆದ್ಯತಾನುಸಾರ ನಿರ್ಧರಿಸುತ್ತಾರೆ.
ಇದನ್ನೂ ಓದಿ: ನೀವು ಅಣಬೆ ಬೆಳೆದು ಹಣ ಗಳಿಸಬೇಕಾ? ಈ ಒಂದು ದಿನದ ತರಬೇತಿಗೆ ಹಾಜರಾಗಿ!
6) ಮೇಲಿನ ಕಾರ್ಯವಿಧಾನದಂತೆ ಅಂತಿಮ ಇ-ಖಾತಾವನ್ನು ವಿತರಿಸಲಾಗುತ್ತದೆ. ಮೇಲಿನ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ತರಬೇತಿ ವಿಡಿಯೋವನ್ನು ಪ್ರತ್ಯೇಕವಾಗಿ ಬಿಡುಗಡೆಗೊಳಿಸಲಾಗುವುದು.
7) ಬೃಹತ್ ಸ್ವರೂಪದಲ್ಲಿ ಇ-ಖಾತಾ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಾಗಿರುವುದರಿಂದ ಪರೀಕ್ಷಾರ್ಥವಾಗಿ ಪ್ರಾರಂಭಿಸುವ ಮೂಲಕ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು. ಬಿಬಿಎಂಪಿಯು ತಮಗೆ ಅತ್ಯಮೂಲ್ಯ ಸೇವೆ ನೀಡಲು ಸಹಕರಿಸಲು ಕೋರಿದೆ.
ಇ-ಖಾತಾ ಪಡೆಯುವ ವಿಧಾನಗಳು:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ