ಬೆಂಗಳೂರು: 50,000 ಕ್ಕೂ ಹೆಚ್ಚು ಜನರಿರುವ 5,480 ಪಿಜಿಗಳ ಪೈಕಿ 3,597 ಪೇಯಿಂಗ್ ಗೆಸ್ಟ್ ಅನಧಿಕೃತ!

Kannadaprabha News   | Kannada Prabha
Published : Oct 25, 2026, 10:23 AM IST
Bengaluru PGs

ಸಾರಾಂಶ

ಬೆಂಗಳೂರಿನಲ್ಲಿರುವ ಒಟ್ಟು 5,480 ಪಿಜಿಗಳ ಪೈಕಿ ಶೇ.66ರಷ್ಟು ಅನಧಿಕೃತವಾಗಿವೆ ಎಂದು ಜಿಬಿಎ ಆಡಿಟ್ ವರದಿ ಬಹಿರಂಗ.. ಹೈಕೋರ್ಟ್ ಸೂಚನೆ ಮೇರೆಗೆ ಪರಿಶೀಲನೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಇದರಿಂದ 50,000ಕ್ಕೂ ಹೆಚ್ಚು ನಿವಾಸಿಗಳ ಮೇಲೆ ಪರಿಣಾಮ ಬೀರಲಿದೆಯೇ?

ಬೆಂಗಳೂರು (ಅ.25): ನಗರದಲ್ಲಿ ಕಾರ್ಯಾಚರಿಸುತ್ತಿರುವ 5,480 ಪೇಯಿಂಗ್ ಗೆಸ್ಟ್(Paying Guest) ಕೇಂದ್ರಗಳ (PG) ಪೈಕಿ 3,597 (ಶೇ.66ರಷ್ಟು) ಅನಧಿಕೃತವಾಗಿವೆ ಎಂದು ಜಿಬಿಎ(GBA Report) ಇತ್ತೀಚೆಗೆ ನಡೆಸಿದ ಪಿ.ಜಿ ಪರಿಶೀಲನೆಯ ಆಡಿಟ್ ವರದಿಯಲ್ಲಿ ಕಂಡು ಬಂದಿದೆ.

ಹೈಕೋರ್ಟ್ ಸೂಚನೆ ಹಿನ್ನೆಲೆ ಬೆಂಗಳೂರು ಪಿಜಿಗಳ ಪರಿಶೀಲನೆ

ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಪಾಲಿಕೆಯ ಎಂಜಿನಿಯರ್‌ಗಳು ನಗರದಲ್ಲಿನ ಪಿಜಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2025ರ ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆ ಪ್ರಕಾರ, 40 ಅಡಿಗಿಂತ ಕಡಿಮೆ ಅಗಲದ ರಸ್ತೆ, ಬಿಲ್ಡಿಂಗ್ ಪ್ಲಾನ್ ಉಲ್ಲಂಘನೆ, ಜನವಸತಿ ಪ್ರದೇಶಗಳಲ್ಲಿನ ಪಿ.ಜಿ.ಗಳು ಹಾಗೂ ಬೇಸ್ಮೆಂಟ್‌ನಲ್ಲಿ ಕಿಚನ್ ಹೊಂದಿರುವ ಪಿ.ಜಿ.ಗಳಿಗೆ ಟ್ರೇಡ್ ಲೈಸನ್ ನೀಡುವಂತಿಲ್ಲ. ಇಂತಹ ಪಿ.ಜಿ.ಗಳು ಅನಧಿಕೃತ ವರ್ಗಕ್ಕೆ ಸೇರುತ್ತವೆ.

ಅನಧಿಕೃತ ಪಿಜಿ ನಡೆಸುವ ಮಾಲೀಕರಿಗೆ ನೋಟಿಸ್

ಜಿಬಿಎ ಆರೋಗ್ಯ ಇಲಾಖೆಯು ಪಿ.ಜಿ.ಗಳಿಗೆ ಪರವಾನಗಿ ನೀಡುತ್ತದೆ. ಅನಧಿಕೃತ ಪಿ.ಜಿ.ಗಳನ್ನು ನಡೆಸುತ್ತಿರುವವರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ. ಈ ಕುರಿತು ಜಿಬಿಎ ಮುಖ್ಯ ಆಯುಕ್ತರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಪಿ.ಜಿ.ಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಬೆಂಗಳೂರು ಪಿಜಿಗಳಲ್ಲಿದ್ದಾರೆ 50,000ಕ್ಕೂ ಹೆಚ್ಚು ಮಂದಿ!

ರಾಜ್ಯ ಮತ್ತು ಹೊರ ರಾಜ್ಯಗಳಿಂದ ಉದ್ಯೋಗ, ವ್ಯಾಸಂಗ ಮತ್ತಿತರ ಉದ್ದೇಶಗಳಿಗೆ ನಗರಕ್ಕೆ ಬಂದಿರುವ ಸುಮಾರು 50,000ಕ್ಕೂ ಹೆಚ್ಚು ಜನರು ಪಿ.ಜಿ.ಗಳಲ್ಲಿ ನೆಲೆಸಿದ್ದಾರೆ. ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾದರೆ ಜನರಿಗೆ ತೊಂದರೆಯಾಗುತ್ತದೆ. ಮತ್ತೊಂದೆಡೆ ಪೇಯಿಂಗ್ ಗೆಸ್ಟ್‌ಗಳು ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೂ ವಸತಿ ವರ್ಗದಲ್ಲೇ ತೆರಿಗೆ ಪಾವತಿ ಮತ್ತು ವಿದ್ಯುತ್ ಬಿಲ್ ಪಾವತಿಸುತ್ತಿವೆ. ಇದರಿಂದ ಪಾಲಿಕೆ ಮತ್ತು ಬೆಸ್ಕಾಂಗೆ ಕೋಟ್ಯಂತರ ರು. ಆದಾಯ ನಷ್ಟವಾಗುತ್ತಿದೆ ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.

ನಿಯಮ ಉಲ್ಲಂಘಿಸುವ ಪಿಜಿಗಳ ವಿರುದ್ಧ ಕ್ರಮ

ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಪೇಯಿಂಗ್ ಗೆಸ್ಟ್‌ಗಳ ವಿರುದ್ಧ ಕ್ರಮ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಈ ದೂರು ಆಧಾರಿಸಿ ಬೇರೆ ಬೇರೆ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದ್ದವು. ಎಫ್‌ಐಆರ್ ಪ್ರಶ್ನಿಸಿ ಪಿ.ಜಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಪಿ.ಜಿಗಳ ಸ್ಥಿತಿ ಗತಿ ಪರಿಶೀಲಿಸುವಂತೆ ಹೈಕೋರ್ಟ್ ಸೂಚಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಗ್ರಾಮಕ್ಕೆ ಬಂದಿದ್ದ ವೇಳೆ ಬಿಜೆಪಿ ಶಾಸಕನಿಗೆ ಬೆವರಿಳಿಸಿದ ಇಟಗಿ ಗ್ರಾಮಸ್ಥರು! ಅಸಲಿಗೆ ಅಲ್ಲಿ ನಡೆದಿದ್ದೇನು?
ಹೆಸರು ಪ್ರಿಯಾಂಕಾ ಅಲ್ವಾ, ಅವರು ಯಾವಾಗಲು ಕ್ಯಾತೆ ಸಚಿವ, ಒಕೆ ಅಲ್ಲ; ಆರ್ ಅಶೋಕ್ ಟಾಂಗ್