ಸಂಸದೆ ಪ್ರಿಯಾಂಕಾ ಜಾರಕಿಹೊಳಿ-ಗೌತಮ್ ನಿಶ್ಚಿತಾರ್ಥ: ಇಬ್ಬರಲ್ಲಿ ಅತಿಹೆಚ್ಚು ಶಿಕ್ಷಣ ಪಡೆದವರಾರು? ಆಸ್ತಿ ಎಷ್ಟಿದೆ?

Published : Oct 24, 2026, 02:08 PM IST
Priyanka Jarkiholi Engagement

ಸಾರಾಂಶ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಯುವ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಶೈಕ್ಷಣಿಕ ಅರ್ಹತೆ ಏನು? ಅವರ ಹೆಸರಿನಲ್ಲಿರುವ ಒಟ್ಟು ಆಸ್ತಿ ಮತ್ತು ಸಾಲ ಎಷ್ಟು? ಇನ್ನು ಪ್ರಿಯಾಂಕ ಅವರ ಶೈಕ್ಷಣಿಕ ಅರ್ಹತೆಯೇನು ಎಂಬುದರ ವಿವರ ಇಲ್ಲಿದೆ.

ದೇಶದ 18ನೇ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಅತ್ಯಂತ ಕಿರಿಯ ಸಂಸದೆಯಾಗಿ ಸಂಸತ್ ಪ್ರವೇಶಿಸಿ ಇಡೀ ದೇಶದ ಗಮನ ಸೆಳೆದವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿ (Priyanka Jarkiholi). ಇದೀಗ ಅವರು ರಾಯಚೂರು ಮೂಲದ ಉದ್ಯಮಿಯನ್ನು ಮದುವೆಯಾಗುತ್ತಿದ್ದು, ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ.ಆದರೆ, ಪ್ರಿಯಾಂಕ ಜಾರಕಿಹೊಳಿ ಹಾಗೂ ಅವರ ಬಾವಿ ಗಂಡನ ಶೈಕ್ಷಣಿಕ ಅರ್ಹತೆ ಮತ್ತು ಆಸ್ತಿ ಎಷ್ಟಿದೆ? ಎಂಬುದನ್ನು ಇಲ್ಲಿ ತಿಳಿಯೋಣ.

ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿಯಾಗಿರುವ 27 ವರ್ಷದ ಪ್ರಿಯಾಂಕಾ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಭರ್ಜರಿ ಜಯ ದಾಖಲಿಸಿದ್ದರು. ರಾಜಕೀಯಕ್ಕೆ ಎಂಟ್ರಿ ಕೊಟ್ಟ ಅಲ್ಪಾವಧಿಯಲ್ಲೇ ಭಾರಿ ಜನಪ್ರಿಯತೆ ಗಳಿಸಿರುವ ಪ್ರಿಯಾಂಕಾ ಜಾರಕಿಹೊಳಿ ಅವರ ಶೈಕ್ಷಣಿಕ ಅರ್ಹತೆ ಏನು? ಅವರ ಬಳಿ ಎಷ್ಟು ಆಸ್ತಿ ಇದೆ? ಎಂಬ ಕುತೂಹಲ ಸಹಜವಾಗಿಯೇ ಸಾರ್ವಜನಿಕರಲ್ಲಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರ ಸಂಪೂರ್ಣ ವಿವರ ಇಲ್ಲಿದೆ.

ಪ್ರಿಯಾಂಕಾ ಜಾರಕಿಹೊಳಿ ಅವರ ಶೈಕ್ಷಣಿಕ ಅರ್ಹತೆ:

  • ಪ್ರಿಯಾಂಕಾ ಜಾರಕಿಹೊಳಿ ಅವರು ಉನ್ನತ ಶಿಕ್ಷಣ ಪಡೆದಿದ್ದಾರೆ.
  • ಪದವಿ: ಎಂಬಿಎ (Master of Business Administration - MBA)
  • ವಿಶ್ವವಿದ್ಯಾಲಯ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU - Visvesvaraya Technological University)
  • ತೇರ್ಗಡೆಯಾದ ವರ್ಷ: 2021

ಉನ್ನತ ಶಿಕ್ಷಣ ಪೂರೈಸಿದ ಬಳಿಕ ಅವರು ಉದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಹಲವು ಕಂಪನಿಗಳಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ (MD) ಹಾಗೂ ಪಾಲುದಾರರಾಗಿ (Partner) ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಪ್ರಿಯಾಂಕಾ ಜಾರಕಿಹೊಳಿ ಒಟ್ಟು ಆಸ್ತಿ ಮತ್ತು ಸಾಲ:

ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿರುವ ಪ್ರಕಾರ, ಪ್ರಿಯಾಂಕಾ ಜಾರಕಿಹೊಳಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ:

ಒಟ್ಟು ಆಸ್ತಿ (Total Assets): ₹9,11,57,625 (ಅಂದಾಜು ₹9.11 ಕೋಟಿಗೂ ಅಧಿಕ)

ಒಟ್ಟು ಸಾಲ/ಹೊಣೆಗಾರಿಕೆ (Liabilities): ₹1,57,43,768 (ಅಂದಾಜು ₹1.57 ಕೋಟಿಗೂ ಅಧಿಕ)

27ರ ಹರೆಯದಲ್ಲೇ ಉನ್ನತ ಶಿಕ್ಷಣ ಮುಗಿಸಿ, ವ್ಯಾಪಾರ-ವಹಿವಾಟಿನ ಜೊತೆಗೆ ರಾಜಕೀಯ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಪ್ರಿಯಾಂಕಾ ಜಾರಕಿಹೊಳಿ, ಇಂದು ಯುವ ಜನತೆಗೆ ಹಾಗೂ ಮಹಿಳೆಯರಿಗೆ ರಾಜಕೀಯದಲ್ಲಿ ಹೊಸ ಪ್ರೇರಣೆಯಾಗಿದ್ದಾರೆ.

ಭಾವಿ ಗಂಡನ ಶೈಕ್ಷಣಿಕ ಅರ್ಹತೆಯೇನು?

ಪ್ರಿಯಾಂಕಾ ಜಾರಕಿಹೊಳಿ ಅವರ ಕೈಹಿಡಿಯಲಿರುವ ಭಾವಿ ಗಂಡನ ಹೆಸರು ಗೌತಮ್ ಪಾಟೀಲ್. ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ಮೂಲದವರಾಗಿದ್ದಾರೆ. ಗೌತಮ್ ಅವರ ತಂದೆ ನಿವೃತ್ತ ಆರ್‌ಟಿಒ (RTO) ಅಧಿಕಾರಿಯಾಗಿದ್ದು, ಸಣ್ಣ ಉದ್ಯಮಗಳೊಂದಿಗೆ ಉನ್ನತ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ವರನ ಕುಟುಂಬದ ಕುರಿತು ಹೆಚ್ಚಿನ ವಿವರಗಳನ್ನು ಜಾರಕಿಹೊಳಿ ಕುಟುಂಬ ಸದ್ಯಕ್ಕೆ ಬಹಿರಂಗಪಡಿಸಿಲ್ಲ. ಇನ್ನು ರಾಜಕಾರಣದಲ್ಲಿ ಕೌಟುಂಬಿಕವಾಗಿ ಕೆಲವು ವಿರೋಧಗಳಿದ್ದರೂ, ಕೌಟುಂಬಿಕ ಕಾರ್ಯಕ್ರಮವಾದ ಮನೆ ಮಗಳು ಪ್ರಿಯಾಂಕ ಅವರ ನಿಶ್ಚಿತಾರ್ಥಕ್ಕಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಪ್ರಿಯಾಂಕಾ ಅವರ ಸಹೋದರ ರಾಹುಲ್ ಜಾರಕಿಹೊಳಿ ಎಲ್ಲರೂ ಒಟ್ಟಾಗಿ ಭಾಗಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು to ಬಂಡೀಪುರ, ಹಂಪಿ ಸೇರಿ ಪ್ರಮುಖ ತಾಣಕ್ಕೆ ಪ್ರವಾಸಿ ರೈಲು, ಟಿಕೆಟ್ ಬೆಲೆ ಎಷ್ಟು?
ದಕ್ಷಿಣದ ಏಕೈಕ ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ಯಾನ ಮರು ಆರಂಭ, ಬೆಂಗಳೂರಲ್ಲಿ ಸಿಎಂ ಚಾಲನೆ, ಟಿಕೆಟ್‌ ಸೋಲ್ಡ್ ಔಟ್!