ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರರನ್ನ ಬಲಿಪಶು ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಜನಾರ್ದನರೆಡ್ಡಿ ತಿಳಿಸಿದರು.
ಕೊಪ್ಪಳ (ಜು.6): ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರರನ್ನ ಬಲಿಪಶು ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಜನಾರ್ದನರೆಡ್ಡಿ ತಿಳಿಸಿದರು.
ಇಂದು ಗಂಗಾವತಿಯಲ್ಲಿ ತ್ರೈಮಾಸಿಕ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಹಗರಣದ ಸತ್ಯಾಸತ್ಯತೆ ಯಾಕೆ ಹೊರಗಡೆ ಬರ್ತಾ ಇಲ್ಲ. ತನಿಖೆ ಯಾಕೆ ಇಷ್ಟು ವಿಳಂಬ ಆಗುತ್ತಿದೆ. 180 ಕೋಟಿ ಹಣ ಯಾವ ಯಾವ ಅಕೌಂಟ್‌ಗಳಿಗೆ ಹೋಗಿದೆ ಎಂದು ಹೇಳುವುದಕ್ಕೆ ಇಷ್ಟು ದಿನ ಬೇಕಾ? ಎಂದು ಪ್ರಶ್ನಿಸಿದರು.
undefined
ಈ ಹಗರಣದಲ್ಲಿ ಕೇವಲ ನಾಗೇಂದ್ರ ರಾಜೀನಾಮೆ ತೆಗೆದುಕೊಂಡ ಮಾತ್ರಕ್ಕೆ ಮುಗಿಯಿತು ಅಂದುಕೊಂಡರಾ? ಈ ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಬಿಜೆಪಿ ಇಷ್ಟಕ್ಕೆ ಸುಮ್ಮನಾಗೋದಿಲ್ಲ. ಈ ಬಗ್ಗೆ ವಿಧಾನಸೌಧದಲ್ಲಿಯೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವದಂತಿಗಳಿಗೆ ತೆರೆ; ಲಾಲ್ ಕೃಷ್ಣ ಅಡ್ವಾಣಿ ಆರೋಗ್ಯದ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ
ಇನ್ನು ಸಿಎಂ ಬದಲಾವಣೆ ವಿಚಾರ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆರಂಭವಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಗೇಡಿನ ವಿಚಾರ. ಇಡೀ ದೇಶದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಗೌರವ, ಘನತೆ ಕಳೆದುಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.