ರಾಜ್ಯದಲ್ಲಿ ಆಡಳಿತ ಮಾಡುತ್ತಿರುವುದು ಕಾಂಗ್ರೆಸ್ ಸರಕಾರ. ಗ್ಯಾರಂಟಿ ಯೋಜನೆಗಳನ್ನ ಸಿದ್ದರಾಮಯ್ಯ ಸರ್ಕಾರ ಪೂರೈಸಲು ಆಗುತ್ತಿಲ್ಲ. ಮುಂದೆ ಈ ಯೋಜನೆ ಪೂರೈಸಲು ಆಗೊಲ್ಲ ಎಂಬ ಅರ್ಥದಲ್ಲಿ ಹೇಳಿದ್ದೇನೆ ಅದರಲ್ಲಿ ತಪ್ಪೇನಿದೆ? ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸಮರ್ಥಿಸಿಕೊಂಡರು.
ಕೊಪ್ಪಳ (ಜೂ.19): ಕೆಲಸ ಮಾಡಲು ಸಮರ್ಥನಿದ್ದಾಗ ಅವನು 'ಲಾಯಕ್ ಇದ್ದಾನೆ' ಎಂದು ಹೇಳುತ್ತೇವೆ. ಅದೇ ರೀತಿ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿ ಅದನ್ನೂ ಪೂರೈಸಲಾಗದೆ, ಜನರ ತಲೆಯ ಮೇಲೆ ಬೆಲೆ ಏರಿಕೆ ಭಾರ ಹಾಕಿದ್ದರಿಂದ ಜನರು ಆಡುಭಾಷೆಯಲ್ಲಿ 'ನಾಲಾಯಕ್' ಎಂದು ಹೇಳಿದ್ದೇನೆ ಎಂದು ಶಾಸಕ ಜನಾರ್ದನ ರೆಡ್ಡಿ ಸಿಎಂ ವಿರುದ್ಧ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಇಂದು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು. ರಾಜ್ಯದಲ್ಲಿ ಆಡಳಿತ ಮಾಡುತ್ತಿರುವುದು ಕಾಂಗ್ರೆಸ್ ಸರಕಾರ. ಗ್ಯಾರಂಟಿ ಯೋಜನೆಗಳನ್ನ ಸಿದ್ದರಾಮಯ್ಯ ಸರ್ಕಾರ ಪೂರೈಸಲು ಆಗುತ್ತಿಲ್ಲ. ಮುಂದೆ ಈ ಯೋಜನೆ ಪೂರೈಸಲು ಆಗೊಲ್ಲ ಎಂಬ ಅರ್ಥದಲ್ಲಿ ಹೇಳಿದ್ದೇನೆ ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
undefined
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲು ನಾಲಾಯಕ್: ಶಾಸಕ ಜನಾರ್ದನ ರೆಡ್ಡಿ
ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಮುಂದಿನ ದಿನಗಳಲ್ಲಿ ಜನರೇ ಈ ಸರ್ಕಾರವನ್ನು ಅಧಿಕಾರ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದೇನೆ. ಇದನ್ನು ಬೇರೆ ಬೇರೆ ರೀತಿ ಅರ್ಥೈಸಿಕೊಳ್ಳಲಾಗಿದೆ. 'ನನ್ನನ್ನು ಇಲ್ಲಿಂದ ಕಳುಹಿಸುತ್ತೇನೆ' ಎಂದು ಹೇಳಿದ್ದಾರೆ. ಈ ನಾಡು, ಈ ಭೂಮಿ ಪ್ರತಿಯೊಬ್ಬ ಕನ್ನಡಿಗನಿಗೂ ಸಂಬಂಧಿಸಿದ್ದು. ಹಾಗೆಲ್ಲ ಹುಚ್ಚುಚ್ಚಾಗಿ ಮಾತನಾಡಿದರೆ ಅಂತವರಿಗೆ ತಲೆ ಕೆಟ್ಟಿದೆ ಎಂದೇ ಅರ್ಥ. ನಾನೇನಾದರೂ ತಪ್ಪು ಮಾತನಾಡಿದ್ದರೆ ಅವರಿಗೆ ನನ್ನ ವಿರುದ್ಧ ಪ್ರತಿಭಟನೆ ಮಾಡುವ ಹಕ್ಕಿದೆ ಎಂದರು.
'ನಾನೀಗ ಕೇಂದ್ರ ಸಚಿವ..' ದರ್ಶನ್ ಬಂಧನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಚ್‌ಡಿಕೆ
ಇನ್ನು ಸಚಿವ ಶಿವರಾಜ ತಂಗಡಗಿ 'ಜನಾರ್ದನ ರೆಡ್ಡಿ ಮಣ್ಣಿನ ಕಳ್ಳ' ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಜನಾರ್ದನ ರೆಡ್ಡಿ ಅವರು, ಅವನು ವಯಸ್ಸಿನಲ್ಲಿ ನನಗಿಂತ ಚಿಕ್ಕವನು, ಯಾವಾಗಲೂ ತಮ್ಮ ಎಂದೇ ಕರೆಯುತ್ತಿರುತ್ತೇನೆ. ಆ ಮಣ್ಣಿನಿಂದಲೇ ಅವನು ಫಸ್ಟ್ ಟೈಂ ಎಂಎಲ್‌ಎ ಆಗಿದ್ದಾನೆ. ಮಣ್ಣು ಭೂತಾಯಿ ಬಗ್ಗೆ ಅಷ್ಟು ಹೀನಾಯವಾಗಿ ಮಾತನಾಡೋದು ಬೇಡ. ನನ್ನ ಮೇಲಿನ ಸುಳ್ಳು ಕೇಸ್‌ಗಳನ್ನು 13 ವರ್ಷಗಳಿಂದ ಪ್ರೂವ್ ಮಾಡಲು ಆಗುತ್ತಿಲ್ಲ ಎಂದು ತಿರುಗೇಟು ನೀಡಿದರು.