ಗಣೇಶ ವಿಸರ್ಜನೆ ವೇಳೆ ಎರಡು ಗ್ರಾಮಗಳ ಜನರು ಪರಸ್ಪರ ಬಡಿದಾಡಿಕೊಂಡ ಘಟನೆ ಆನೇಕಲ್ ತಾಲ್ಲೂಕಿನ ಚಿನ್ನಯ್ಯನ ಪಾಳ್ಯ ಹಾಗೂ ಸಿದ್ದನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಆನೇಕಲ್ (ಸೆ.24): ಗಣೇಶ ವಿಸರ್ಜನೆ ವೇಳೆ ಎರಡು ಗ್ರಾಮಗಳ ಜನರು ಪರಸ್ಪರ ಬಡಿದಾಡಿಕೊಂಡ ಘಟನೆ ಆನೇಕಲ್ ತಾಲ್ಲೂಕಿನ ಚಿನ್ನಯ್ಯನ ಪಾಳ್ಯ ಹಾಗೂ ಸಿದ್ದನಪಾಳ್ಯ
ಗ್ರಾಮದಲ್ಲಿ ನಡೆದಿದೆ.
ಗಣೇಶ ವಿಸರ್ಜನೆ ಮಾಡಿ ವಾಪಸ್ಸು ಬರುತ್ತಿದ್ದ ಚಿನ್ನಯ್ಯನಪಾಳ್ಯ ಯುವಕರ ತಂಡ. ಈ ವೇಳೆ ದಾರಿ ಮಧ್ಯೆ ವಿನಾಯಕ ಗೆಳೆಯರ ಬಳಗದ ಯುವಕರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ. ಜಗಳ ವಿಕೋಪಕ್ಕೆ ತಿರುಗಿ ದೊಣ್ಣೆಗಳನ್ನು ಹಿಡಿದು ಪರಸ್ಪರ ಬಡಿದಾಡಿಕೊಂಡ ಗ್ರಾಮಸ್ಥರು. ಗಲಾಟೆಯಲ್ಲಿ ಎರಡೂ ಕಡೆಯವರಿಗೆ ಗಂಭೀರ ಗಾಯಗಳಾಗಿವೆ.
undefined
ಗಾಯಾಳುಗಳನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ದೌಡಾಯಿಸಿದ ಆನೇಕಲ್ ಪೊಲೀಸರು. ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಗ್ರಾಮಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಬೂದಿಮುಚ್ಚಿದ ಕೆಂಡದಂತಾಗಿರುವ ಗ್ರಾಮಗಳು. ಎರಡು ಕಡೆಯ ಗ್ರಾಮಸ್ಥರು ಠಾಣೆಯ ಮೆಟ್ಟಿಲೇರಿದ್ದಾರೆ. ಠಾಣೆ ಮುಂದೆ ಜಮಾಯಿಸಿರುವ ಗ್ರಾಮಸ್ಥರು. ಯಾವುದೇ ಅಹಿತಕರ ನಡೆಯದಂತೆ ಬಿಗಿ ಭದ್ರತೆ ಕೈಗೊಂಡಿರುವ ಪೊಲೀಸರು.
ವಿಜಯಪುರ: ಹರಾಜಿನಲ್ಲಿ ಬರೋಬ್ಬರಿ ₹1.50 ಲಕ್ಷಕ್ಕೆ ಗಣೇಶನ ಲಡ್ಡು ಸೇಲ್!