ಕಾವೇರಿ ವಿವಾದ: ಸೆ.26ರಂದು ಬೆಂಗಳೂರು ಬಂದ್‌, ಸೆ.29ರಂದು ಅಖಂಡ ಕರ್ನಾಟಕ ಬಂದ್?

By Gowthami K  |  First Published Sep 24, 2023, 1:10 PM IST

ಕಾವೇರಿ ನದಿ ನೀರು ವಿವಾದ ಹಿನ್ನೆಲೆ  ಶುಕ್ರವಾರ ಸೆ.29ರಂದು ಅಖಂಡ ಕರ್ನಾಟಕ ಬಂದ್‌ ಮಾಡಲು ಕರ್ನಾಟಕ ಒಕ್ಕೂಟದಿಂದ ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.


ಬೆಂಗಳೂರು (ಸೆ.24): ಕಾವೇರಿ ನದಿ ನೀರು ವಿವಾದ ಹಿನ್ನೆಲೆ ಮಂಗಳವಾರ ಬೆಂಗಳೂರು ಬಂದ್‌ ನಿರ್ಧಾರ ಬೆನ್ನಲ್ಲೇ ಶುಕ್ರವಾರ ಸೆ.29ರಂದು ಅಖಂಡ ಕರ್ನಾಟಕ ಬಂದ್‌ ಮಾಡಲು ಕರ್ನಾಟಕ ಒಕ್ಕೂಟದಿಂದ ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಈ ಬಗ್ಗೆ ನಾಳೆ ಸಭೆ ನಡೆಸಿ  ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬಂದ್‌ನಿಂದ ಯಾರಿಗೇನು ಲಾಭ, ಇದರಿಂದ ಬೆಂಗಳೂರಿನ ಘನತೆಗೆ ಧಕ್ಕೆ: ಡಿಕೆಶಿ

Tap to resize

Latest Videos

ಈ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್,  ಅಖಂಡ ಕರ್ನಾಟಕ ಬಂದ್ ಆಗಬೇಕು. ಯಾರನ್ನು ಬಿಡಂಗಿಲ್ಲ, ಎಲ್ಲರನ್ನೂ ಕಟ್ಟಿಕೊಂಡು ಹೋರಾಟ ಮಾಡಬೇಕು. ನಾಳೆ ಬೆಳಗ್ಗೆ ಕನ್ನಡ ‌ಮುಖಂಡರು ಸೇರಿ ಸಭೆ ಮಾಡ್ತಿವಿ. ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯುತ್ತೆ. 29 ರಂದು ಅಖಂಡ ಕರ್ನಾಟಕ ಬಂದ್ ಮಾಡುವ ಆಲೋಚನೆ ಇದೆ ಎಂದರು.

ಮಂಡ್ಯ ನಗರ, ಮದ್ದೂರು ಬಂದ್‌ ಭರ್ಜರಿ ಯಶಸ್ವಿ: ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ

ಇನ್ನು ಇದಕ್ಕೂ ಮುನ್ನ ಕಪ್ಪು ಪಟ್ಟಿ ಧರಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ  ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ಸಾರಾ ಗೋವಿಂದ್, ಕುಮಾರ್ ಸೇರಿದಂತೆ ಹಲವು ಕನ್ನಡಪರ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

click me!