Congress guarantee: 11ರಿಂದ ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಫ್ರೀ; ಆದ್ರೂ ಸಿಗುತ್ತೆ ಟಿಕೆಟ್!

By Kannadaprabha News  |  First Published Jun 5, 2023, 5:29 AM IST

ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲ ಮಹಿಳೆಯರಿಗೂ ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆ ಜೂ.11ರಿಂದ ಜಾರಿಯಾಗಲಿದ್ದು, ಮಹಿಳೆಯರಿಗೆ ಪ್ರಯಾಣದ ವೇಳೆ ನೀಡುವ ಮಾದರಿ ಟಿಕೆಟ್‌ ಬಗ್ಗೆ ಸಿದ್ಧತೆಗಳು ಶುರುವಾಗಿವೆ.


ಬೆಂಗಳೂರು (ಜೂ5) : ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲ ಮಹಿಳೆಯರಿಗೂ ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆ ಜೂ.11ರಿಂದ ಜಾರಿಯಾಗಲಿದ್ದು, ಮಹಿಳೆಯರಿಗೆ ಪ್ರಯಾಣದ ವೇಳೆ ನೀಡುವ ಮಾದರಿ ಟಿಕೆಟ್‌ ಬಗ್ಗೆ ಸಿದ್ಧತೆಗಳು ಶುರುವಾಗಿವೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ(KSRTC BMTC) ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳು ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಎಲ್ಲಿಂದ ಎಲ್ಲಿವರೆಗೆ ಪ್ರಯಾಣ ಮಾಡಲಿದ್ದಾರೆ ಎಂಬ ಬಗ್ಗೆ ಟಿಕೆಟ್‌ ನೀಡಲಿದ್ದಾರೆ. ಆದರೆ, ‘ಮಹಿಳಾ ಪ್ರಯಾಣಿಕರ ಉಚಿತ ಚೀಟಿ- ಶಕ್ತಿ ಯೋಜನೆ’ ಹೆಸರು ನಮೂದಿಸುವುದರಿಂದ ಮಹಿಳಾ ಪ್ರಯಾಣಿಕರು ಯಾವುದೇ ಶುಲ್ಕ ಭರಿಸಬೇಕಾಗಿಲ್ಲ.

Tap to resize

Latest Videos

ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಬಸ್‌ ನಲ್ಲಿ ಫ್ರೀ, ಯಾವುದೇ ಕಂಡೀಶನ್ ಇಲ್ಲ: ಸಾರಿಗೆ ಸಚಿವ ರೆಡ್ಡಿ

ಬಿಎಂಟಿಸಿಯು ಶಾಂತಿನಗರ ಟಿಟಿಎಂಸಿ ಬಸ್‌ ನಿಲ್ದಾಣದಿಂದ ಕೆಂಪೇಗೌಡ ಬಸ್ಸು ನಿಲ್ದಾಣದವರೆಗೆ ಪ್ರಯಾಣ ಮಾಡುವ ಮಹಿಳೆಗೆ ನೀಡುವ ಮಾದರಿ ಟಿಕೆಟನ್ನು ಶನಿವಾರ ಬಿಡುಗಡೆ ಮಾಡಿದೆ. ಈ ಟಿಕೆಟ್‌ ಮಾದರಿ ಇನ್ನೂ ಅಂತಿಮವಾಗಿಲ್ಲ. ಟಿಕೆಟ್‌ನಲ್ಲಿ ಯಾವ್ಯಾವ ಮಾಹಿತಿ ನಮೂದಿಸಬೇಕು ಎಂಬ ಬಗ್ಗೆ 3-4 ಮಾದರಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಂತಿಮವಾಗಿ ಸೂಕ್ತವಾದದ್ದನ್ನು ಆಯ್ಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಉಚಿತ ಪ್ರಯಾಣವಾದರೂ ಮಹಿಳೆಯರಿಗೆ ಟಿಕೆಟ್‌ ನೀಡುವುದರಿಂದ ಎಷ್ಟುಮಂದಿ ಪ್ರಯಾಣ ಮಾಡಿದರು, ಎಷ್ಟುಕಿ.ಮೀ. ದೂರ ಪ್ರಯಾಣ ಮಾಡಿದರು ಎಂಬಿತ್ಯಾದಿ ಲೆಕ್ಕಗಳು ನಿಗಮದ ಅಂದಾಜಿಗೆ ಸಿಗಲಿವೆ. ಸರ್ಕಾರ ಹಾಗೂ ನಿಗಮಗಳ ನಡುವಿನ ಆರ್ಥಿಕ ಹೊಂದಾಣಿಕೆಗಳಿಗೆ ಇವು ಪೂರಕವಾಗಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

2 ಸಾವಿರ ನೋಟು ಸ್ವೀಕರಿಸಬೇಡಿ ಎಂದ ಬಿಎಂಟಿಸಿ: ಪ್ರಯಾಣಿಕರ ಆಕ್ರೋಶ

ಏನಿದು ಶಕ್ತಿ ಯೋಜನೆ?

ರಾಜ್ಯ ಸರ್ಕಾರದ ಎಲ್ಲಾ ಸಾರಿಗೆ ನಿಗಮಗಳ ಸಾಮಾನ್ಯ, ತಡೆ-ರಹಿತ ಹಾಗೂ ವೇಗದೂತ ಬಸ್ಸುಗಳಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ನೌಕರರು, ಮಹಿಳೆಯರು, ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಪ್ರತಿಯೊಬ್ಬರಿಗೂ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಈ ಸೌಲಭ್ಯ ಹೊರ ರಾಜ್ಯದ ಮಹಿಳೆಯರು ಪಡೆಯುವಂತಿಲ್ಲ. ಹೀಗಾಗಿ ಸೂಕ್ತ ಪಾಸು ವ್ಯವಸ್ಥೆ ಮಾಡಿ, ಪಾಸು ತೋರಿಸಿದವರಿಗೆ ಹಣ ಪಡೆಯದೆ ಟಿಕೆಟ್‌ ನೀಡುವ ವ್ಯವಸ್ಥೆ ಜಾರಿ ಮಾಡಲು ಸಾರಿಗೆ ನಿಗಮಗಳು ಲೆಕ್ಕಾಚಾರ ಹಾಕುತ್ತಿವೆ. ಆದರೆ, ಯಾವೊಂದೂ ಅಂತಿಮಗೊಂಡಿಲ್ಲ. ಅಂತಿಮವಾದ ಬಳಿಕ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

click me!