ಚಿಕ್ಕಮಗಳೂರು ಧ್ವಜ ಹಾರಾಟ ಬೆನ್ನಲ್ಲೇ ಕೊಪ್ಪಳದಲ್ಲೂ ಫ್ರೀ ಪ್ಯಾಲೆಸ್ತೇನ್ ಬರಹ!

By Suvarna News  |  First Published Sep 16, 2024, 2:09 PM IST

ಕೊಪ್ಪಳದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ವೇಳೆ ಬ್ಯಾನರ್‌ನಲ್ಲಿ 'ಫ್ರೀ ಪ್ಯಾಲೆಸ್ತೇನ್' ಬರಹ ಹಾಕಲಾಗಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ 


ಕೊಪ್ಪಳ ಸೆ.16):  ಕೊಪ್ಪಳದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ವೇಳೆ ಬ್ಯಾನರ್‌ನಲ್ಲಿ 'ಫ್ರೀ ಪ್ಯಾಲೆಸ್ತೇನ್' ಬರಹ ಹಾಕಲಾಗಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ 

ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆ ಶುಭ ಕೋರುವ ಬ್ಯಾನರ್ ನಗರದಲ್ಲೆಲ್ಲ ಹಾಕಲಾಗಿದೆ. ಇನ್ನೊಂದು ಕಡೆ ಬ್ಯಾನರ್‌ನಲ್ಲಿ ಫ್ರೀಪ್ಯಾಲೆಸ್ತೇನ್ ಬರಹ ಬೆಳಕಿಗೆ ಬಂದಿದೆ. ಈ ವಿಚಾರ ಹಿಂದೂ ಸಂಘಟನೆಗಳಿಗೆ ತಿಳಿಯುತ್ತಿದ್ದಂತೆ ಜಮಾಯಿದ ಕಾರ್ಯಕರ್ತರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ ಬಳಿಕ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬ್ಯಾನರ್‌ಗೆ ಪ್ಯಾಚ್ ಹಾಕಿದ್ದಾರೆ.

Tap to resize

Latest Videos

undefined

'ನಾಗಮಂಗಲ ಗಲಭೆ ವೇಳೆ ಮುಸ್ಲಿಮರ ಮೇಲೆ ಕ್ರಮ ಬೇಡ ಎಂಬ ಸೂಚನೆ ಕೊಟ್ಟಿತ್ತಾ ಸರ್ಕಾರ? ಸಿಟಿ ರವಿ ಹೇಳಿದ್ದೇನು?

ಚಿಕ್ಕಮಗಳೂರಿನಲ್ಲೂ ಪ್ಯಾಲೆಸ್ತೇನ್ ಧ್ವಜ ಹಾರಾಟ:

ಚಿಕ್ಕಮಗಳೂರು ನಗರದಲ್ಲಿ ಯುವಕರಿಬ್ಬರು ಭಾನುವಾರ ಪ್ಯಾಲೆಸ್ತೇನ್ ಧ್ವಜ ಹಿಡಿದು ಬೈಕ್‌ಮೇಲೆ ನಗರಾದ್ಯಂತ ಸಂಚಾರ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೆಎಂ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಬೈಕ್‌ ಮೇಲೆ ಧ್ವಜ ಹಿಡಿದು ಸಂಚರಿಸಿದ್ದ ಕಿಡಿಗೇಡಿಗಳು. ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದರು.  ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು. ಇದೀಗ ಮತ್ತೆ ಕೊಪ್ಪಳದಲ್ಲೂ ಫ್ರೀ ಪ್ಯಾಲೆಸ್ತೇನ್ ಎಂದು ಬರೆದಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!