ಅಂಗನವಾಡಿ ಚಾವಣಿ ಕುಸಿದು ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ 6ನೇ ವಾರ್ಡ್ ಮಹೆಬೂಬ್ ನಗರದ 11 ನೇ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.
ಕೊಪ್ಪಳ (ಸೆ.23): ಅಂಗನವಾಡಿ ಚಾವಣಿ ಕುಸಿದು ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ 6ನೇ ವಾರ್ಡ್ ಮಹೆಬೂಬ್ ನಗರದ 11 ನೇ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.
ಅಮನ್,ಮನ್ವಿತ್, ಮದ೯ನ್, ಸುರಕ್ಷಾ ಗಾಯಗೊಂಡಿರುವ ಮಕ್ಕಳು. ನಾಲ್ವರು ಮಕ್ಕಳಿಗೆ ತಲೆ ಮತ್ತು ಕಾಲುಗಳಿಗೆ ಗಾಯವಾಗಿದೆ. ತಕ್ಷಣ ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಅಂಗನವಾಡಿಗೆ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಬಂದಿದ್ದರು. ಕೊಠಡಿಯೊಳಗೆ ಕುಳಿತಿದ್ದ ವೇಳೆ ಏಕಾಏಕಿ ಕುಸಿದುಬಿದ್ದ ಚಾವಣಿ. ಮಕ್ಕಳ ತಲೆ ಬಿದ್ದ ಮೇಲೆ ದಿಕ್ಕಪಾಲಾಗಿ ಓಡಿದ ಮಕ್ಕಳು. ನಾಲ್ವರು ಮಕ್ಕಳಿಗೆ ತಲೆ, ಕಾಳುಗಳ ಮೇಲೆ ಬಿದ್ದಿದಿದ್ದರಿಂದ ಗಾಯಗೊಂಡು ನೋವಿನಿಂದ ನರಳಾಡಿದ ಮಕ್ಕಳು. ಘಟನೆ ಬಳಿಕ ನಗರಸಭೆ ಅಧ್ಯಕ್ಷ, ಸದಸ್ಯರು, ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
undefined
ತುಂಗಭದ್ರಾ ಡ್ಯಾಂಗೆ ಇಂದು ಸಿಎಂ ಬಾಗಿನ: ಇತಿಹಾಸದಲ್ಲಿ ಇದೇ ಮೊದಲು..!
ನಿರ್ಮಾಣ ಮಾಡಿದ 7 ವರ್ಷಗಳಲ್ಲೇ ಕುಸಿದುಬಿದ್ದ ಕಟ್ಟಡ: ಅಂಗನವಾಡಿ ಕಟ್ಟಡ ಏಳು ವರ್ಷಗಳ ಹಿಂದೆಯಷ್ಟೇ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದ ನಿರ್ಮಾಣ ಮಾಡಿದ ಏಳೇ ವರ್ಷಗಳಲ್ಲಿ ಚಾವಣಿ ಕುಸಿದಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಂಬಂಧ ಸೂಕ್ತ ಕ್ರಮ ಒತ್ತಾಯಿಸಿದ ಪೋಷಕರು. ಸದ್ಯ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.