Breaking News: ಅಂಬೇಡ್ಕರ್ ಭಾವಚಿತ್ರ ತುಳಿದು ಅವಮಾನ; ನಾಲ್ವರು ಕಿಡಿಗೇಡಿಗಳು ಅರೆಸ್ಟ್

By Ravi Janekal  |  First Published Jan 4, 2025, 7:01 PM IST

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕಲ್ಕೋರಾ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಅಪ್ರಾಪ್ತರು.


ಬೀದರ್ (ಜ.4): ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಬಾಬಾ ಸಾಹೇಬ್ ಡಾ ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಘಟನೆ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಕಲ್ಕೋರಾ ಗ್ರಾಮದಲ್ಲಿ ನಡೆದಿದ್ದು ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಮೂವರು ಅಪ್ರಾಪ್ತ ಬಾಲಕರಾಗಿದ್ದಾರೆ. ಆರೋಪಿಗಳೆಲ್ಲರೂ ಕಲ್ಕೋರಾ ಗ್ರಾಮದ ಯುವಕರು ಎನ್ನಲಾಗಿದೆ. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿ ಅದರ ವಿಡಿಯೋ ರೀಲ್ಸ್ ಮಾಡಿದ್ದ ಕಿರಾತಕರು ಬಳಿಕ ಅದರ ಇನ್‌ಸ್ಟಾಗ್ರಾಮ್‌ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. . mrk_777_king5 ಇನ್‌ಸ್ಟಾಗ್ರಾಮ್ ಐಡಿ ಮೂಲಕ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿ. ಇದು ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Tap to resize

Latest Videos

ಅಂಬೇಡ್ಕರ್‌ಗೆ ಅಮಿತ್‌ ಶಾ ಅವಮಾನ: ದಲಿತ ಸಂಘಟನೆಗಳಿಂದ ಪ್ರತಿಭಟನೆ, ವಿಜಯಪುರ ಬಂದ್!

ವಿಡಿಯೋದಲ್ಲಿ ಸೆರೆಯಾಗಿರುವಂತೆ, ಆಕ್ರೋಶಗೊಂಡಿರುವ ಕಿರಾತಕರು, ಅಂಬೇಡ್ಕರ್ ಭಾವಚಿತ್ರವನ್ನು ನೆಲ್ಲಕ್ಕೆ ಹಾಕಿದ್ದಾರೆ. ಬಳಿಕ ಭಾವಚಿತ್ರದ ಮೇಲೆ ಕಾಲಿಟ್ಟು ಹರಿದಿದ್ದಾರೆ. ಈ ಘಟನೆ ಬಳಿಕ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಸದ್ಯ, ಘಟನೆ ಸಂಬಂಧ ಆರೋಪಿಗಳ ವಿರುದ್ಧ ಕಲಂ 189(2), 353(2), 298, 190 ಬಿಎನ್‌‌ಎಸ್‌ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಮುಡಬಿ ಪೊಲೀಸರು ಸದ್ಯ ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆಗೊಳಪಡಿಸಿರುವ ಪೊಲೀಸರು.

click me!