ಗ್ಯಾರೆಂಟಿ ಕೊಡುತ್ತೇವೆಂದು ಖಜಾನೆ ಖಾಲಿ ಮಾಡಿದ ಕಾಂಗ್ರೆಸ್ ಸರ್ಕಾರ : ಬಿಎಸ್‌ವೈ ವಾಗ್ದಾಳಿ

By Ravi JanekalFirst Published Oct 15, 2023, 6:17 PM IST
Highlights

ಇಂದು ವಿಶ್ವ ಪ್ರಸಿದ್ಧ ಮೈಸೂರು ದಸರಾ ಹಬ್ಬ. ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಬೇಡುತ್ತಿರುವುದರೊಂದೇ. ಬರಗಾಲ ರಾಜ್ಯವನ್ನು ತಲ್ಲಣಗೊಳಿಸಿದೆ. ರೈತರಿಗೆ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಕಷ್ಟ ಕಳೆದು ನಾಡಿನ ಜನತೆಗೆ ಒಳಿತಾಗಬೇಕು ಎಂಬುದಾಗಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

ರಾಯಚೂರು (ಅ.15): ಇಂದು ವಿಶ್ವ ಪ್ರಸಿದ್ಧ ಮೈಸೂರು ದಸರಾ ಹಬ್ಬ. ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಬೇಡುತ್ತಿರುವುದರೊಂದೇ. ಬರಗಾಲ ರಾಜ್ಯವನ್ನು ತಲ್ಲಣಗೊಳಿಸಿದೆ. ರೈತರಿಗೆ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಕಷ್ಟ ಕಳೆದು ನಾಡಿನ ಜನತೆಗೆ ಒಳಿತಾಗಬೇಕು ಎಂಬುದಾಗಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

ಇಂದು ರಾಯಚೂರು ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‌ವೈ ತೀವ್ರ ಬರಗಾಲದಿಂದ ಬೆಳೆ ನಾಶವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ಈವರೆಗೆ ಪರಿಹಾರ ಕ್ರಮ ಕೈಗೊಂಡಿಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರತಿಯೊಬ್ಬರಿಗೆ ಪರಿಹಾರ ಕೊಡಬೇಕು. ಪರಿಹಾರ ಕೊಡಲು ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

'ಒಕ್ಕಲಿಗರು ಸಂಸ್ಕೃತಿಹೀನರು' ಎಂಬ ಕೆಎಸ್ ಭಗವಾನ್ ಹೇಳಿಕೆಗೆ ಮುಖ್ಯಮಂತ್ರಿ ಚಂದ್ರು ಆಕ್ಷೇಪ

ಖಜಾನೆ ಖಾಲಿ ಅಭಿವೃದ್ಧಿ ಶೂನ್ಯ:

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಗ್ಯಾರೆಂಟಿ ಕೊಡುತ್ತೇವೆಂದು ಖಜಾನೆ ಖಾಲಿ ಮಾಡಿದ್ದಾರೆ. ಈಗ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಹಣವಿಲ್ಲ. ನೀರಾವರಿ, ರಸ್ತೆ ಯೋಜನೆಗಳು ನಿಂತಲ್ಲೇ ನಿಂತಿವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳೂ ನಡೆಯುತ್ತಿಲ್ಲ. ಸರ್ಕಾರ ದಿವಾಳಿಯಾಗಿದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ ಎಂದರು. ಇನ್ನು ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಆಗದ ಹಿನ್ನೆಲೆ ಕಾಮಗಾರಿ ನಡೆಸಲು ಯಾರೂ ಮುಂದೆ ಬರುತ್ತಿಲ್ಲ. ಗುತ್ತಿಗೆದಾರರ ಸಂಘದ  ಅಧ್ಯಕ್ಷ ನಮ್ಮ ಅವಧಿಯಲ್ಲೂ ಆರೋಪ ಮಾಡಿದ್ರು. ಈಗಲೂ ನೇರವಾಗಿ ಆರೋಪ ಮಾಡ್ತಿದ್ದಾರೆ. ಕೆಲಸ ಕಾರ್ಯ ನಿಲ್ಲಿಸುತ್ತೇವೆ ಅಂತ ಹೇಳ್ತಿದ್ದಾರೆ‌. ಒಟ್ಟಿನಲ್ಲಿ ರಾಜ್ಯದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ ಎಂದರು.

ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿ ತೊಡಗಿಕೊಂಡಿದೆ ರಾಜ್ಯದಲ್ಲಿ ಒಂದಾದ ಮೇಲೊಂದರಂತೆ ಹಗರಣ ಬಯಲಿಗೆ ಬರ್ತಿವೆ. ಸಿಎಂ, ಡಿಸಿಎಂ ಇವುಗಳ ಬಗ್ಗೆ ಕ್ರಮಕೂಗೊಳ್ಳದೇ ಇರೋದು ದುರ್ದೈವ. ಐಟಿ ದಾಳಿಯಲ್ಲಿ ಅನೇಕ ಕಡೆಗಳಲ್ಲಿ ಕೋಟ್ಯಂತರ ಬೇನಾಮಿ ಹಣ ಸಿಕ್ಕಿದೆ. ಇತ್ತ ಕಲಾವಿದರಿಂದಲೂ ಸಹ ಕಮಿಷನ್ ಕೇಳುವ  ಕೀಳುಮಟ್ಟಕ್ಕೆ ಸರ್ಕಾರ ಬಂದಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ವಿಚಾರ ಪ್ರಸ್ತಾಪಿಸಿದ ಬಿಎಸ್‌ವೈ, 

ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ನಡೆದಿದೆ. ಬೇರೆ ಕಡೆಯಿಂದ ವಿದ್ಯುತ್ ಖರೀದಿ ಮಾಡಿ, ವಿದ್ಯುತ್ ಸಮಸ್ಯೆ ಸರಿದೂಗಿಸಬೇಕು. ಆದ್ರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ತಿಲ್ಲ. ವಿದ್ಯುತ್ ಸಮಸ್ಯೆ ಆದಾಗ ನಮ್ಮ ಅವಧಿಯಲ್ಲಿ ಹೆಚ್ಚುವರಿಯಾಗಿ ಖರೀದಿ ಮಾಡಿ ಸಮಸ್ಯೆ ಪರಿಹರಿಸಿದ್ವಿ. ಆದರೆ ಈ ಸರ್ಕಾರ ಜನರ ಹಿತ ಮರೆತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.

ಅಂಬಿಕಾಪತಿ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು?

ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ತನಿಖೆ ಆಗಬೇಕು. ಮುಂದಿನ ಚುನಾವಣೆಗೆ ಕಳಿಸಬೇಕಿದ್ದ ಹಣ ಎಂಬ ಮಾಹಿತಿ ಕೇಳಿಬಂದಿದೆ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಕಾಂಗ್ರೆಸ್ ಚುನಾವಣೆಗಾಗಿ 1000 ಕೋಟಿ ಹಣ ಸಂಗ್ರಹ ಎಂದು ಸಚಿವ ಜೋಶಿ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಜೋಶಿ ಅವರು  ಹಿರಿಯ ನಾಯಕರು. ಸರ್ಕಾರ ಹಣ ಸಂಗ್ರಹದಲ್ಲಿ ಯಾವ ರೀತಿ ತೊಡಗಿದೆ ಅನ್ನೋದನ್ನ ಹೇಳಿದ್ದಾರೆ ಎಂದರು.

ಮೈಸೂರು ದಸರಾ: 'ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು ಹಾಡಿಗೆ ತಲೆದೂಗಿದ ಸಿಎಂ

ಜಾತಿಗಣತಿಗೆ ನಮ್ಮ ತಕರಾರಿಲ್ಲ:

ಸರ್ಕಾರ ಜಾತಿಗಣತಿ ಕುರಿತಂತೆ ಯಾವುದೇ ತೀರ್ಮಾನ ತೆಗೆದುಕೊಂಡರೂ ನಮ್ಮದು ತಕರಾರಿಲ್ಲ. ಜಾತಿ -ಜಾತಿ ಮಧ್ಯೆ ಸಂಘರ್ಷ ಬರುತ್ತೆ ಎಂಬ ಕಾರಣಕ್ಕೆ ಈವರೆಗೆ ಆಗಿರ್ಲಿಲ್ಲ. ಸೂಕ್ತ ಚಿಂತನೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿ ಎಂದರು. ಮುಂದುವರಿದು ಲೋಕಸಭೆ‌ ಚುನಾವಣೆಯಲ್ಲಿ ನಮ್ಮ ಪಕ್ಷ 25 ಸ್ಥಾನ ಗೆಲ್ಲುವ ಗುರಿಯಿದೆ. ನಾನು ಅದಕ್ಕಾಗಿ ಶ್ರಮಿಸುವೆ. ರಾಜ್ಯಾದ್ಯಂತೆ ಓಡಾಡುವೆ. ಶೀಘ್ರದಲ್ಲೇ ರಾಜ್ಯಾಧ್ಯಕ್ಷರ ನೇಮಕವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ನಾನು ಓಡಾಡುತ್ತೇನೆ. ಪಕ್ಷ ಈ ಬಾರಿ 25 ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!