ಸಂಘ ಪರಿವಾರದ ಭೂಮಿ ಹಿಂಪಡೆತಕ್ಕೆ ಕೋಟ ಆಕ್ರೋಶ

By Kannadaprabha NewsFirst Published Jun 11, 2023, 12:30 AM IST
Highlights

ಹಿಂದೂ, ಮುಸ್ಲಿಮರು, ಕ್ರೈಸ್ತರು, ಪಾರ್ಸಿ, ಜೈನರನ್ನು ಸಮಾನವಾಗಿ ನೋಡುವುದಾಗಿ ಹೇಳುವ ಸರ್ಕಾರ ತಾರತಮ್ಯ ಧೋರಣೆ ಹೊಂದಿರಬಾರದು. ಸಂಘ ಪರಿವಾರದವರಿಗೆ ಕೊಟ್ಟ ಭೂಮಿಯನ್ನು ವಾಪಸ್‌ ಪಡೆಯುತ್ತೇವೆ ಎನ್ನುವ ಸರ್ಕಾರದ ಧೋರಣೆ ಹೇಗೆ ಸರಿಯಾಗುತ್ತದೆ? ಹಾಗಿದ್ದರೆ ಹಿಂದೂಗಳು ಕಡಿಮೆ ಸಮಾನರೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ 

ಬೆಂಗಳೂರು(ಜೂ.11): ಎಲ್ಲಾ ಧರ್ಮ, ಸಮುದಾಯಗಳು ಸಮಾನ ಎನ್ನುವ ರಾಜ್ಯದ ನೂತನ ಕಾಂಗ್ರೆಸ್‌ ಸರ್ಕಾರಕ್ಕೆ ಹಿಂದೂಗಳು ಕಡಿಮೆ ಸಮಾನ ಆಗುವುದು ಹೇಗೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.

ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದೂ, ಮುಸ್ಲಿಮರು, ಕ್ರೈಸ್ತರು, ಪಾರ್ಸಿ, ಜೈನರನ್ನು ಸಮಾನವಾಗಿ ನೋಡುವುದಾಗಿ ಹೇಳುವ ಸರ್ಕಾರ ತಾರತಮ್ಯ ಧೋರಣೆ ಹೊಂದಿರಬಾರದು. ಸಂಘ ಪರಿವಾರದವರಿಗೆ ಕೊಟ್ಟ ಭೂಮಿಯನ್ನು ವಾಪಸ್‌ ಪಡೆಯುತ್ತೇವೆ ಎನ್ನುವ ಸರ್ಕಾರದ ಧೋರಣೆ ಹೇಗೆ ಸರಿಯಾಗುತ್ತದೆ? ಹಾಗಿದ್ದರೆ ಹಿಂದೂಗಳು ಕಡಿಮೆ ಸಮಾನರೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಪುತ್ತೂರು ಘಟನೆ: ಹಲ್ಲೆ ಮಾಡುವ ಅಧಿಕಾರ ಪೊಲೀಸರಿಗಿಲ್ಲ, ಕೋಟ ಶ್ರೀನಿವಾಸ ಪೂಜಾರಿ

ಭ್ರಷ್ಟಾಚಾರ ಅಕ್ರಮಗಳ ಕುರಿತ ತನಿಖೆಯನ್ನು ರಾಜ್ಯ ಸರ್ಕಾರವು ತಮ್ಮ ಇಲಾಖೆಯಿಂದಲೇ ಆರಂಭಿಸಲಿ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಎಸ್‌ಸಿಗೆ ಶೇ.15ರ ಬದಲಾಗಿ ಶೇ.17ರಷ್ಟುಮೀಸಲಾತಿ ನೀಡಿದ್ದು ಬಿಜೆಪಿ ಸರ್ಕಾರ. ಎಸ್‌ಟಿಗೆ ಶೇ.3ರಿಂದ ಶೇ.7ರಷ್ಟುಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ. ಜಿಜ್ಞಾಸೆಗಳು ಇರಬಹುದು. ಆದರೆ, ಸಮಾಜದ ಕಟ್ಟಕಡೆಯ ಮನುಷ್ಯ ಮುಖ್ಯವಾಹಿನಿಗೆ ಬರಬೇಕು ಎಂಬ ಕಾರಣಕ್ಕಾಗಿ ಒಳಮೀಸಲಾತಿಯನ್ನು ಸರ್ಕಾರ ಪ್ರಕಟಿಸಿದೆ ಎಂದು ತಿಳಿಸಿದರು.

ಬಾಬಾಸಾಹೇಬ ಡಾ.ಬಿ.ಆರ್‌.ಅಂಬೇಡ್ಕರ್‌ ವಿಚಾರದ ಪ್ರತಿಪಾದನೆ, ಭಾಷಣ ಮಾಡುವುದು ಬೇರೆ. ಹೆಸರನ್ನು ಘೋಷಣೆ ಮಾಡುವುದು ಬೇರೆ. ಅಂಬೇಡ್ಕರ್‌ ಅವರು ಭೇಟಿ ನೀಡಿದ ಜಗತ್ತಿನ ಎಲ್ಲ ಸ್ಥಳಗಳನ್ನು ಅಭಿವೃದ್ಧಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಬಿಜೆಪಿ ವಿರೋಧಿಸುತ್ತದೆ. ಬಾಂಬ್‌ ಹಾಕುವವರ ಜೊತೆ, ದೇಶ ವಿರೋಧಿ ಘೋಷಣೆ ಕೂಗುವವರ ಜತೆ ನಮ್ಮ ರಾಜ್ಯ ಇಲ್ಲ. ಪಾಕಿಸ್ತಾನಕ್ಕೆ ಜಯವಾಗಲಿ ಎನ್ನುವರ ಜತೆ ನಮ್ಮ ರಾಜ್ಯ ಇಲ್ಲ. ಭಯೋತ್ಪಾದಕತೆಯನ್ನು ಬಿಜೆಪಿ ವಿರೋಧಿಸುತ್ತದೆ ಎಂದರು.

click me!