ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಪ್ರತಾಪ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿ ಸಿ ಪಾಟೀಲ್ ದೊಡ್ಡ ಮಗಳ ಗಂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಾವಣೆಗೆರೆ (ಜು.8): ಮಾಜಿ ಸಚಿವ, ನಟ ಬಿ ಸಿ ಪಾಟೀಲ್ (B.C. Patil) ಅಳಿಯ (Son-in-Law) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿ ಸಿ ಪಾಟೀಲ್ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ (41) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ತಾಲೂಕು ಅರಕೆರೆ ಸಮೀಪದ ಫಾರೆಸ್ಟ್ ಸಮೀಪ ಕಾರು ನಿಲ್ಲಿಸಿ ಕಾರಿನಲ್ಲಿ ವಿಷ ಸೇವಿಸಿದ್ದಾರೆ. ವಿಷ ಸೇವನೆ ಮಾಡಿದ್ದು ವಿಷಯ ತಳಿದ ತಕ್ಷಣ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಯ್ತು. ಆದರೆ ಆಸ್ಪತ್ರೆಯಲ್ಲಿ ಮೃತಪಟ್ಟರು.
ಮದುವೆಯಾಗಿ 16 ವರ್ಷ ಕಳೆದರೂ ಮಕ್ಕಳಾಗಿರದ ಕೊರಗಿತ್ತು: ಅಳಿಯನ ಆತ್ಮಹತ್ಯೆ ಬಗ್ಗೆ ಬಿಸಿ ಪಾಟೀಲ್ ಪ್ರತಿಕ್ರಿಯೆ
ನಾನು ವಿಷ ಸೇವಿಸುವುದಾಗಿ ಮನೆಯವರಿಗೆ ಪೋನ್ ಮಾಡಿ ಮನೆಯವರಿಗೆ ಪ್ರತಾಪ್ ಕುಮಾರ್ ಹೇಳಿದ್ದರು. 3.30 ರ ಸುಮಾರಿಗೆ ಕಾರಿನಲ್ಲಿ ವಿಷ ಸೇವನೆ ಮಾಡಿದ್ದರು. ವಿಷಯ ತಿಳಿದ ತಕ್ಷಣ ಪೊಲೀಸರು ಹೊನ್ನಾಳಿ ಆಸ್ಪತ್ರೆಗೆ ದಾಖಲು ಮಾಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಯ್ತು. ಆದರೆ ಅಷ್ಟರಲ್ಲಾಗಲೇ ಅವರ ಸ್ಥಿತಿ ಗಂಭೀರವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಗಂಡು ಸಂತಾನವಿಲ್ಲದ್ದಕ್ಕೆ ಮಗಳನ್ನು ಹೆಂಡತಿ ತಮ್ಮನಿಗೆ ಕೊಟ್ಟಿದ್ದ ಬಿಸಿ ಪಾಟೀಲ್, ಮಗನಂತಿದ್ದ ಅಳಿಯ ಆತ್ಮಹತ್ಯೆ!
ಪ್ರತಾಪ್ ಕುಮಾರ್ ಬಿಸಿ ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯ ಪಾಟೀಲ್ ಅವರ ಗಂಡನಾಗಿದ್ದು, ಬಿಸಿ ಪಾಟೀಲ್ ಅವರ ಹೆಂಡತಿಯ ಸ್ವಂತ ತಮ್ಮನಾಗಿದ್ದಾರೆ. ತಮ್ಮ ಹಿರಿಯ ಮಗಳನ್ನು ಹೆಂಡತಿಯ ತಮ್ಮನಿಗೆ ಬಿಸಿ ಪಾಟೀಲ್ ಮದುವೆ ಮಾಡಿ ಕೊಟ್ಟಿದ್ದರು. ಅಂದರೆ ಅಕ್ಕನ ಮಗಳನ್ನೇ ಪ್ರತಾಪ್ ಕುಮಾರ್ ಮದುವೆ ಮಾಡಿಕೊಂಡಿದ್ದರು. ಅಳಿಯ ಮೃತಪಟ್ಟ ಮಾಹಿತಿ ತಿಳಿದು ಮರಣೋತ್ತರ ಪರೀಕ್ಷೆ ಹಿನ್ನೆಲೆ ಬಿ ಸಿ ಪಾಟೀಲ್ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ್ದಾರೆ.
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿ, ಹೊನ್ನಾಳಿ ಸಮೀಪದ ಫಾರೆಸ್ಟ್ ಬಳಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2.30 ಗಂಟೆಗೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಹೊನ್ನಾಳಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವಾಗಿದೆ. ಶಿವಮೊಗ್ಗ ಮುಖಾಂತರ ಹೊನ್ನಾಳಿಗೆ ಆಗಮಿಸಿ ನಂತರ ಬಸವಾಪಟ್ಟಣ ಹೋಗುತ್ತಿದ್ದರು. ವೈಯಕ್ತಿಕ ಕಾರಣದಿಂದ ವಿಷಸೇವೆನೆ ಮಾಡಿದ್ದಾರೆ. ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ. ಪ್ರಕರಣ ದಾಖಲಾದ ನಂತರ ಮುಂದಿನ ತನಿಖೆ ನಡೆಸಲಾಗುವುದು ಎಂದಿದ್ದಾರೆ.