ಮಿರಾಕಲ್ ಎಂಬಂತೆ ವೆಂಟಿಲೇಟರ್ ನಿಂದ ಹೊರಬಂದು ಡಿಸ್ಚಾರ್ಜ್ ಆಗಿದ್ದ ಎಸ್ಎಂ ಕೃಷ್ಣ

By Naveen Kodase  |  First Published Dec 10, 2024, 8:06 AM IST

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾದರು. 93 ವರ್ಷ ವಯಸ್ಸಿನ ಕೃಷ್ಣ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.


ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ರಾಜ್ಯಪಾಲರಾಗಿದ್ದ ಎಸ್. ಎಂ. ಕೃಷ್ಣ ಇಂದು ಬೆಳಗ್ಗೆ 2.30ಕ್ಕೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು. 

ಶ್ವಾಸಕೋಶದ ಸೋಂಕಿನಿಂದಾಗಿ ಸುದೀರ್ಘವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಎಸ್ ಎಂ ಕೃಷ್ಣ ಅವರಿಗೆ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗಿತ್ತು. ಇನ್ನು ವೆಂಟಿಲೇಟರ್‌ ಅಳವಡಿಸಿದ ಬಳಿಕ ಎಸ್ ಎಂ ಕೃಷ್ಣ ಚೇತರಿಸಿಕೊಳ್ಳೋದು ಕಷ್ಟ ಎನ್ನುವುದು ವೈದ್ಯರ ಭಾವನೆಯಾಗಿತ್ತು. ಆದರೆ 93ನೇ ವಯಸ್ಸಿನಲ್ಲೂ ಚೇತರಿಸಿಕೊಂಡು ವೆಂಟಿಲೇಟರ್‌ನಿಂದ ಹೊರಬದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. 

Tap to resize

Latest Videos

ಮಾಜಿ ಸಿಎಂ ಎಸ್‌ಎಂ ಕೃಷ್ಣ ವಿಧಿವಶ

ಮಣಿಪಾಲ್ ಆಸ್ಪತ್ರೆಯಲ್ಲಿ ಸುದೀರ್ಘ ಸಮಯದಿಂದಲೂ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಎಂ ಕೃಷ್ಣ ಅವರು ಪವಾಡಸದೃಶ ರೀತಿಯಲ್ಲಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಎಸ್ ಎಂ ಕೃಷ್ಣ ಅವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯವರು. ಎಸ್ ಎಂ ಕೆ ರಾಜ್ಯ ರಾಜಕಾರಣ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಮಂಗಳವಾರವಾದ ಇಂದು ಸದಾಶಿವನಗರದ  ಅವರ ನಿವಾಸದಲ್ಲಿ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. 

click me!