
ಮಂಗಳೂರು(ಜ.12): ಪಶ್ಚಿಮದ ರಾಷ್ಟ್ರಗಳ ರಾಷ್ಟ್ರೀಯತೆ ಇತರ ದೇಶಗಳಿಗೆ ಸೂಕ್ತವಲ್ಲ. ಭಾರತದ ರಾಷ್ಟ್ರೀಯತೆ ಎಂದರೆ ಹಿಂದುತ್ವ, ಹಿಂದೂ ರಾಷ್ಟ್ರ ಎಂಬ ವಿಚಾರಗಳೇ ಮುನ್ನೆಲೆಗೆ ಬರುತ್ತವೆ ಎಂದು ಭಾರತೀಯ ಗುಪ್ತಚರ ಸಂಸ್ಥೆ 'ರಾ' ಮಾಜಿ ನಿರ್ದೇಶಕ ವಿಕ್ರಮ್ ಸೂದ್ ಅಭಿಪ್ರಾಯಪಟ್ಟರು.
ಮಂಗಳೂರು ಲಿಟ್ ಫೆಸ್ಟ್ 7ನೇ ಆವೃತ್ತಿಯ ಮೊದಲ ದಿನ ಶನಿವಾರದ ಎರಡನೇ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿರೂಪಣಾ ಕಥಾನಕಗಳು ಅಥವಾ ನರೇಟಿವ್ ಅನ್ನುವುದು ಒಂದು ಬಗೆಯ ಪ್ರಚಾರ ಸಮರದ ಕಲೆಯಾಗಿದೆ. ಇದನ್ನು ರಚನಾತ್ಮಕ ಅಥವಾ ವಿಘಟನಾತ್ಮಕ ಉದ್ದೇಶಗಳಿಗೆ ಬಳಸಲು ಸಾಧ್ಯವಿದೆ. ಬಹುತೇಕ ಸಂದರ್ಭಗಳಲ್ಲಿ ರಚನಾತ್ಮಕ ಉದ್ದೇಶಗಳಿಗಿಂತ ವಿಭಜನಾತ್ಮಕ ಉದ್ದೇಶಗಳಿಗೆ ಬಳಕೆಯಾಗುವುದೇ ಹೆಚ್ಚು ಎಂದರು.
ಸಿಎಎ ಜಾರಿ ವಿಚಾರ, ಮೋದಿ ಸರ್ಕಾರ ಮುಸ್ಲಿಂ ವಿರೋಧಿ ಎಂಬ ಅಪಪ್ರಚಾರ, ಕಾಶ್ಮೀರದ ಮಾನವ ಹಕ್ಕುಗಳ ವಿಚಾರಗಳಲ್ಲಿ ಸರ್ಕಾರದ ವಿರುದ್ಧ ನಡೆಸಲಾದ ಅಪಪ್ರಚಾರಗಳು ಇದಕ್ಕೆ ಉದಾಹರಣೆ. ಇದಕ್ಕೆ ಬಳಸಿದ ಟೂಲ್, ಮತ್ತು ವಿಧಾನಗಳನ್ನು ಗಮನಿಸಬೇಕು ಎಂದರು.
ಹೃದಯಾಘಾತದ ಸಾವು ತಪ್ಪಿಸಲು ಹಬ್ ಆಡ್ ಸ್ಪೋಕ್ ಮಾದರಿ ಉತ್ತಮ: ಸಂಸದ ಡಾ.ಸಿ.ಎನ್. ಮಂಜುನಾಥ್
ಇಂಟರ್ನೆಟ್, ಟಿವಿ, ರೇಡಿಯೋ- ಸಂವಹನದ ವಿವಿಧ ವ್ಯವಸ್ಥೆಗಳನ್ನು ಬಳಸಿಕೊಂಡು ಪ್ರಚಾರ ಮತ್ತು ಅಪಪ್ರಚಾರಕ್ಕೆ ನರೇಟಿವ್ ಗಳನ್ನು ಬಳಸಲಾಗುತ್ತಿದೆ ಎಂದರು. ಡೋನ್ ನಂತಹ ಆಧುನಿಕ ತಂತ್ರಜ್ಞಾನದ ಮೂಲಕ ಮಿಲಿಟರಿ ಶಕ್ತಿ ವರ್ಧನೆ ಮಾಡಿಕೊಳ್ಳುವುದು ಒಂದು ಬಗೆಯಾದರೆ, ಆಹಾರದ ಕೊರತೆ ನೀಗಲು ಕೃತಕ ಆಹಾರ ನೀಡಲಾಗುತ್ತಿದೆ ಎಂಬುದು ಒಂದು ಬಗೆಯ ನರೇಟಿವ್, ಜನಸಂಖ್ಯೆ ಕಡಿಮೆ ಮಾಡಲು ಕೋವಿಡ್ ಅಸ್ತವನ್ನು ಬಳಕೆ ಮಡಲಾಗಿದೆ ಎನ್ನುವುದೂ ಒಂದು ನರೇಟಿವ್. ಆದರೆ ಇವೆಲ್ಲ ಎಷ್ಟು ಶಕ್ತಿಶಾಲಿ ಎಂಬುದು ಪರಿಗಣನೆಗೆ ಬರುತ್ತದೆ ಎಂದರು.
ಇನ್ನೊಬ್ಬರನ್ನು ಕೌಂಟರ್ ಮಾಡಬಹುದು. ಸೋಶಿಯಲ್ ಮೀಡಿಯಾದ ಬಳಕೆ ಮತ್ತು ದುರ್ಬಳಕೆ ಕೂಡ ಇದೇ ಉದ್ದೇಶದಿಂದ ಮಾಡಲಾಗುತ್ತದೆ. ಗ್ರಹಿಕೆಯನ್ನು ಆಧರಿಸಿದ ಸತ್ಯದ ಪ್ರತಿಪಾದನೆಯೇ ನರೇಟಿವ್ ಎಂದು ವಿಕ್ರಮ್ ಸೂದ್ ವಿವರಿಸಿದರು. ಆರ್ಗನೈಸರ್ ಪತ್ರಿಕೆಯ ಮಾಜಿ ಸಂಪಾದಕ ಹಾಗೂ ಸಂವಾದ ಪತ್ರಿಕೆಯ ಹಾಲಿ ಸಂಪಾದಕ ಪ್ರಶಾಂತ್ ವೈದ್ಯರಾಜ್ ಸಂವಾದ ನಿರ್ವಹಿಸಿದರು.
ಚಿಲಿಪಿಲಿ- ಮಕ್ಕಳ ಚಟುವಟಿಕೆಯ ಹರಟೆ ಕಟ್ಟೆ
ಮಂಗಳೂರು: ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿ ಸಂದರ್ಭದಲ್ಲಿ ಶನಿವಾರ ಆಯೋಜಿಸಿದ ಚಿಲಿಪಿಲಿ- ಮಕ್ಕಳ ಚಟುವಟಿಕೆ ಕಾರ್ಯಕ್ರಮದಲ್ಲಿ ಕೆನರಾ ಕನ್ನಡ ಮಾಧ್ಯಮ ಶಾಲೆಯ 80 ಮಂದಿ ಮಕ್ಕಳು ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಜೆಸಿಸಿ ಕಾರ್ಕಳ ಶಾಲೆಯ ಶಿಕ್ಷಕಿ ವಂದನಾ ರೈ ನಡೆಸಿಕೊಟ್ಟರು.
ಹೊಸತನಕ್ಕೆ ತೆರೆದುಕೊಳ್ಳದಿದ್ದರೆ ಉಳಿಗಾಲವಿಲ್ಲ: ರವಿ ಹೆಗಡೆ
ಮಕ್ಕಳಿಗೆ ಜೀವನದನೈತಿಕ ಮೌಲ್ಯಗಳನ್ನು ಕಲಿಸುವ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಹಿರಿಯರಿಗೆ ಗೌರವ ನೀಡುವುದು, ಮನೆಯಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಜವಾಬ್ದಾರಿಯುತ ಮನೋಭಾವ ಬೆಳೆಸುವುದು ಹೇಗೆ ಎಂಬ ವಿಷಯಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಮಾತ್ರವಲ್ಲದೆ ಮಕ್ಕಳಿಗೆ ಮೊಬೈಲ್ ಫೋನ್ ಅನ್ನು ಕೇವಲ ಅಗತ್ಯವಿದ್ದಾಗ ಮಾತ್ರ ಬಳಸಲು ಹಾಗೂ ಉತ್ತಮ ಮಕ್ಕಳಾಗಲು ಪ್ರತಿಜ್ಞೆ ಮಾಡುವಂತೆ ಪ್ರೇರೇಪಿಸಿದರು. ಮಕ್ಕಳಿಗೆ ವಿವಿಧ ಬಗೆಯ ಮನೋಲ್ಲಾಸ ಆಟಗಳನ್ನು ಪರಿಚಯಿಸಿದರು. ಮಕ್ಕಳೊಂದಿಗೆ ಮಕ್ಕಳಾಗಿ ನಲಿದರು, ಕುಣಿದು ಕುಪ್ಪಳಿಸಿದರು. ಲಿಟ್ ಫೆಸ್ಟ್‌ನ ಪ್ರಧಾನ ಆಕರ್ಷಣೆಯಲ್ಲಿ ಹರಟೆ ಕಟ್ಟೆಯೂ ಒಂದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ