ಹೆದ್ದಾರೀಲಿ ನಿಯಮ ಉಲ್ಲಂಘನೆ ಪತ್ತೆಗೆ ಬರಲಿದೆ ಎಐ!

By Kannadaprabha News  |  First Published Jan 12, 2025, 8:50 AM IST

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಸಾರಿಗೆ ಮತ್ತು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೂ ಅವುಗಳ ಪತ್ತೆ ಅಸಾಧ್ಯವಾಗಿದೆ. ಅಲ್ಲದೆ, ಅವುಗಳಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾರ್ಯಾಚರಣೆ ನಡೆಸುವುದೂ ಸಾರಿಗೆ ಇಲಾಖೆಗೆ ಕಷ್ಟ ಸಾಧ್ಯವಾಗಿದೆ. 
 


ಗಿರೀಶ್ ಗರಗ

ಬೆಂಗಳೂರು(ಜ.12): ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಜೆ ಸಂಚರಿಸುವ ವಾಹನಗಳು ಸಾರಿಗೆ ಮತ್ತು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದನ್ನು ಪತ್ತೆ ಮಾಡುವ ಸಲುವಾಗಿ ತಂತ್ರಜ್ಞಾನದ ಮೊರೆ ಹೋಗುತ್ತಿರುವ ಸಾರಿಗೆ, ಹೆದ್ದಾರಿಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಯಾಮರಾ ಅಳವಡಿಕೆಗೆ ಯೋಜನೆ ರೂಪಿಸಿದೆ. 

Tap to resize

Latest Videos

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಸಾರಿಗೆ ಮತ್ತು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೂ ಅವುಗಳ ಪತ್ತೆ ಅಸಾಧ್ಯವಾಗಿದೆ. ಅಲ್ಲದೆ, ಅವುಗಳಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾರ್ಯಾಚರಣೆ ನಡೆಸುವುದೂ ಸಾರಿಗೆ ಇಲಾಖೆಗೆ ಕಷ್ಟ ಸಾಧ್ಯವಾಗಿದೆ. ಹೀಗಾಗಿ ತಂತ್ರಜ್ಞಾನದ ಬಳಕೆಗೆ ಸಾರಿಗೆ ಇಲಾಖೆ ಮುಂದಾಗಿದ್ದು, 5 ಜಿಲ್ಲೆಗಳಲ್ಲಿನ ಹೆದ್ದಾರಿಗಳಲ್ಲಿ ಎಐ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ಸ್ಥಳಗಳನ್ನೂ ಗುರುತಿಸಲಾಗಿದ್ದು, ಕ್ಯಾಮರಾ ಅಳವಡಿಸುವ ಮೂಲಕ ನಿಯಮ ಉಲ್ಲಂಘಿಸುವ ವಾಹನಗಳಿಗೆ ಆನ್ ಲೈನ್ ಮೂಲಕವೇ ದಂಡದ ರಶೀದಿ ನೀಡುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗುತ್ತಿದೆ. 

ನೇಮಕಾತಿ ಭ್ರಷ್ಟಾಚಾರ ತಡೆಗೆ ಎಐ: ಸಿಎಂ ಸಿದ್ದರಾಮಯ್ಯ

ಬ್ಲಾಕ್ ಸ್ಪಾಟ್‌ ಗಳಲ್ಲಿ ಅಳವಡಿಕೆ: 

ರಾಜ್ಯ ಸಾರಿಗೆ ಇಲಾಖೆ ಎಲ್ಲೆಲ್ಲಿ ಎಐ ಕ್ಯಾಮರಾ ಅಳವಡಿಸಬೇಕು ಎಂಬುದನ್ನು ಈಗಾಗಲೇ ನಿಗದಿ ಮಾಡಿದೆ. ಅದರಂತೆ ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಕೋಲಾರ ಮತ್ತು ರಾಮನಗರ ಜಿಲ್ಲೆ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುತಿಸಿರುವ ಅಪಘಾತ ಹೆಚ್ಚು ಸಂಭವಿಸುವ ಮತ್ತು ಸಾರಿಗೆ, ಸಂಚಾರಿ ನಿಯಮ ಹೆಚ್ಚು ಉಲ್ಲಂಘನೆಯಾಗುವ ಬ್ಲಾಕ್ ಸ್ಪಾಟ್‌ಗಳಲ್ಲಿ ಈ ಕ್ಯಾಮರಾ ಅಳವಡಿಸಲು ನಿಗದಿ ಮಾಡಲಾಗಿದೆ. ಅದರಂತೆ 5 ಜಿಲ್ಲೆಗಳ ಹೆದ್ದಾರಿಯಲ್ಲಿನ 20 ಬ್ಲಾಕ್ ಸ್ಪಾಟ್‌ಗಳಲ್ಲಿ ಕ್ಯಾಮರಾ ಅಳವಡಿಸಲಾಗುತ್ತದೆ. 

ಯಾವೆಲ್ಲ ಉಲ್ಲಂಘನೆಗಳ ಪತ್ತೆ?: 

ಎಐ ಆಧಾರಿತ ಕ್ಯಾಮರಾಗಳು ಹೆದ್ದಾರಿಗಳಲ್ಲಿ ನಿಗದಿಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳು, ಸಂಚಾರಿ ಸಿಗ್ನಲ್‌ಗಳಲ್ಲಿ ಕೆಂಪು ದೀಪವಿದ್ದರೂ ಚಲಿಸುವ ವಾಹನಗಳು, ದ್ವಿಚಕ್ರ ವಾಹನ ಸವಾರರು ಹೆಲೈಟ್ ಧರಿಸದಿರುವುದು, ಕಾರು ಸೇರಿ ಇನ್ನಿತರ ವಾಹನ ಚಾಲಕರು ಸೀಟ್ ಬೆಲ್ಟ್ ಹಾಕದಿರುವುದು, ಏಕಮುಖ ಸಂಚಾರ ದಲ್ಲಿ ವಾಹನ ಚಲಾಯಿಸುವುದು ಸೇರಿ ಮತ್ತಿತರ ಉಲ್ಲಂಘನೆಗಳನ್ನು ಪತ್ತೆ ಮಾಡಲಾಗುತ್ತದೆ. ಅಲ್ಲದೆ, ವಾಹನಗಳ ನೋಂದಣಿ ಫಲಕವನ್ನು ಕ್ಯಾಮರಾ ಸ್ಕ್ಯಾನ್ ಮಾಡಲಿದ್ದು, ಆ ನೋಂ ದಣಿ ಫಲಕ ಸರಿಯಾಗಿದೆಯೇ ಎಂಬುದನ್ನೂ ಪರಿಶೀಲಿಸಲಿದೆ. ಅಲ್ಲದೆ, ಯಾವುದಾದರೂ ಅಪರಾಧದಲ್ಲಿ ತೊಡಗಿರುವ ವಾಹನ ಪತ್ತೆಯಾದರೆ, ಅದರ ದೃಶ್ಯವನ್ನು ಸಂಬಂಧಪಟ್ಟವರಿಗೆ ಕಳುಹಿಸುವ ವ್ಯವಸ್ಥೆಯೂ ಎಐ ಕ್ಯಾಮರಾದಲ್ಲಿ ಅಳವಡಿಸಲಾಗುತ್ತದೆ. ಹೀಗೆ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗುವ ದೃಶ್ಯಗಳನ್ನು ಪರಿಶೀಲಿಸಲು ಮತ್ತು ಸ್ಟೋರ್ ಮಾಡಲು ಕಮಾಂಡ್ ಸೆಂಟರ್ ಸ್ಥಾಪಿಸಲಾಗುತ್ತದೆ. 

ಜಗತ್ತನ್ನೇ ಬದಲಿಸಲಿದೆ AI ತಂತ್ರಜ್ಞಾನ, 2025ರಲ್ಲಿ ಏನೇನು ಬದಲಾಗುತ್ತೆ?

ಒಂದು ವೇಳೆ ವಾಹನ ನಿಯಮ ಉಲ್ಲಂಘಿಸಿದರೆ ಆನ್‌ಲೈನ್ ಮೂಲಕವೇ ಇ-ಚಲನ್ ಸಿದ್ದಪಡಿಸಲಾಗುತ್ತದೆ ಹಾಗೂ ವಾಹನ ಮಾಲೀಕರಿಗೆ ಇ-ಮೇಲ್ ಅಥವಾ ಎಸ್‌ಎಂಎಸ್ ಮೂಲಕ ಅದನ್ನು ಕಳುಹಿಸಲಾಗುತ್ತದೆ. ಹೀಗೆ ಸಿದ್ದಪ ಡಿಸಲಾಗುವ ಇ-ಚಲನ್‌ಗಳನ್ನು ಕಮಾಂಡ್ ಸೆಂಟರ್‌ನಲ್ಲಿ ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ. ಎಷ್ಟು ಇ-ಚಲನ್‌ಗಳು ವಾಹನ ಮಾಲೀಕ ರಿಗೆ ತಲುಪಿವೆ, ಎಷ್ಟು ದಂಡ ವಸೂಲಿಯಾಗಿದೆ ಎಂಬುದು ಸೇರಿ ಮತ್ತಿತರ ವಿಚಾರಗಳ ಕುರಿತು ಪರಿಶೀಲಿಸಿ, ದಂಡ ವಸೂಲಿಯನ್ನು ವೇಗವಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

ಯಾವೆಲ್ಲ ಸ್ಥಳಗಳಲ್ಲಿ ಎಐ ಕ್ಯಾಮರಾ ಅಳವಡಿಕೆ?

• ಬೆಂಗಳೂರು ಗ್ರಾಮಾಂತರ: ದೇವಹಳ್ಳಿ-ಚಿಕ್ಕಬಳ್ಳಾಪುರ ರಸ್ತೆ, ನೆಲಮಂಗಲ, ದಾಬಸ್‌ಪೇಟೆ, ಹೊಸಕೋಟೆ, ಹೊಸಕೋಟೆ -ಗೌರಿಬಿದನೂರು ರಸ್ತೆ ಎಚ್-ಕ್ರಾಸ್, ದೊಡ್ಡಬಳ್ಳಾಪುರ 
• ಮೈಸೂರು: ಊಟಿ ರಸ್ತೆ, ಕಡಕೋಳ ಎಪಿಎಂಸಿ, ಟಿ.ನರಸೀಪುರ, ಮೈಸೂರು-ಎಚ್‌ಡಿ ಕೋಟೆ ರಸ್ತೆ, ಮೈಸೂರು-ಹುಣಸೂರು ರಸ್ತೆ
• ಕೋಲಾರ: ಕೋಲಾರ ನಗರ, ಕೋಲಾರ-ಬಂಗಾರಪೇಟೆ ರಸ್ತೆ, ಕೋಲಾರ-ಶ್ರೀನಿವಾಸಪುರ ರಸ್ತೆ 
• ತುಮಕೂರು: ಕುಣಿಗಲ್‌ ರಸ್ತೆ, ಶಿರಾ, ಕುಣಿಗಲ್-ತುಮಕೂರು ರಸ್ತೆಯ ಮರಳು ಕೆರೆ ಬಳಿ 
• ರಾಮನಗರ: ರಾಮನಗರ- ಚನ್ನಪಟ್ಟಣ ರಸ್ತೆ, ರಾಮನಗರ- ಕನಕಪುರ ರಸ್ತೆ, ಹಾರೋಹಳ್ಳಿ- ಸಾತನೂರು ರಸ್ತೆ

click me!