ಚುನಾವಣಾ ವ್ಯವಸ್ಥೆ ಸರಿ ಇಲ್ದಿದ್ರೆ ಮೊದಲೇ ದೂರ ಇರ್ಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯಗೆ, ಮಹದೇವಪ್ಪ ಟಾಂಗ್‌!

Sathish Kumar KH   | Kannada Prabha
Published : Sep 21, 2026, 07:21 AM IST
HC Mahadevappa Siddaramaiah

ಸಾರಾಂಶ

ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇಂತಹ ಹೇಳಿಕೆ ನೀಡುವವರು ಮೊದಲೇ ಚುನಾವಣೆಯಿಂದ ದೂರ ಉಳಿಯಬೇಕಿತ್ತು ಎಂದು ಅವರು ಹೇಳಿದ್ದಾರೆ. ಅಲ್ಲದೆ, ತನಿಖಾ ಸಂಸ್ಥೆಗಳನ್ನು ರಾಜಕೀಯ ದಾಳವಾಗಿ ಬಳಸಬಾರದು ಎಂದು ಇ.ಡಿ ದಾಳಿಯನ್ನು ಖಂಡಿಸಿದ್ದಾರೆ.

ದಾವಣಗೆರೆ (ಸೆ.21): ಇತ್ತೀಚೆಗೆ ಚುನಾವಣೆ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳುವವರು ಮೊದಲೇ ಚುನಾವಣೆ ವ್ಯವಸ್ಥೆಯಿಂದ ದೂರ ಇರಬೇಕಿತ್ತು ಎನ್ನುವ ಮೂಲಕ ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ತಮ್ಮ ಆಪ್ತರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇತ್ತೀಚೆಗಿನ ಚುನಾವಣೆ ವ್ಯವಸ್ಥೆ ಹದಗೆಟ್ಟಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಈ ಹೇಳಿಕೆ ನೀಡಿರುವ ಸಿದ್ದರಾಮಯ್ಯನವರನ್ನೇ ನೀವು ಕೇಳಬೇಕು. ಈಗಾಗಲೇ ನಾವು ಇಂತಹ ವ್ಯವಸ್ಥೆಗೆ ಬಂದು ಬಿಟ್ಟಿದ್ದೇವೆ ಎಂದರು.

ಸಂವಿಧಾನ ಜಾರಿಗೆ ಬಂದಾಗಲೇ ಕೃಪಲಾನಿಯಂತವರು ಅಂಬೇಡ್ಕರ್‌ಗೆ ಪ್ರಶ್ನೆ ಮಾಡಿದ್ದರು. ಹಣ ಕೊಟ್ಟು ಮತ ಖರೀದಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದರು. ಇಂತಹ ಚಿಂತನೆಗಳು ಮುಂಚಿನಿಂದಲೂ ನಡೆದುಕೊಂಡು ಬಂದಿವೆ. ಇದು ಸುಧಾರಣೆ ಆಗಬೇಕಿದ್ದರೆ ಚುನಾವಣಾ ಆಯೋಗವೇ ಮಹತ್ವದ ಹೆಜ್ಜೆಗಳನ್ನು ಇಡಬೇಕು ಎಂದು ಅಭಿಪ್ರಾಯಪಟ್ಟರು.

ನನ್ನನ್ನೂ ಸೇರಿಸಿ ಜನರು ಬುದ್ಧಿ ಕಲಿಸಬೇಕು

ಹಣ ಹಾಕಿ ಚುನಾವಣೆ ಮಾಡಬಾರದು ಎಂಬ ವ್ಯವಸ್ಥೆ ಬರಬೇಕಿದ್ದರೆ, ನನ್ನನ್ನೂ ಸೇರಿಸಿ ಜನರು ಬುದ್ಧಿ ಕಲಿಸಬೇಕು. ಆಗ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ. ಹಾಗೆ ನೋಡಿದರೆ, ದುಡ್ಡು ಕೊಟ್ಟು, ಮತ ಹಾಕಿಸಿಕೊಳ್ಳುವ ರಾಜಕಾರಣಿಗಳಷ್ಟು ದೊಡ್ಡ ಭಿಕ್ಷುಕರು ಮತ್ತ್ಯಾರೂ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತನಿಖಾ ಸಂಸ್ಥೆಗಳು ರಾಜಕೀಯ ದಾಳವಾಗಿ ಬಳಕೆಯಾದರೆ ಪ್ರಜಾಪ್ರಭುತ್ವದ ಕತ್ತನ್ನೇ ಹಿಸುಕಿದಂತಾಗುತ್ತದೆ. ತನಿಖಾ ಸಂಸ್ಥೆಗಳು ರಾಜಕೀಯ ಪಕ್ಷಗಳ ದಾಳ ಆಗಿರಬಾರದು. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಿದಂತಾಗುತ್ತದೆ. ವಿಪಕ್ಷಗಳನ್ನು ಹಣಿಯಲಿಕ್ಕೆ ತನಿಖಾ ಸಂಸ್ಥೆಗಳನ್ನು ಯಾವುದೇ ಸರ್ಕಾರಗಳು ಬಳಕೆ ಮಾಡಿಕೊಳ್ಳಬಾರದು ಎಂದು ಸಚಿವ ಸತೀಶ ಜಾರಕಿಹೊಳಿ ಮನೆ, ಕಚೇರಿಗಳ ಮೇಲೆ ಇ.ಡಿ. ದಾಳಿ ಕುರಿತಂತೆ ಅವರು ಆಕ್ಷೇಪಿಸಿದರು.

ಸೈದ್ಧಾಂತಿಕ ವಿಚಾರ ಬಂದ್ರೆ ಅಧಿಕಾರ ನನ್ನ ಚಪ್ಪಲಿ ಇದ್ದಂತೆ!

ದಾವಣಗೆರೆ ಬಿಐಇಟಿ ಕಾಲೇಜಿನ ಎಸ್‌.ಎಸ್‌. ಮಲ್ಲಿಕಾರ್ಜುನ ಸಾಂಸ್ಕತಿಕ ಭವನದಲ್ಲಿ ನಡೆದ ಜಿಲ್ಲಾ ಛಲವಾದಿ ಮಹಾಸಭಾದ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಡಾ. ಎಚ್.ಸಿ.ಮಹೇದವಪ್ಪ, ಸೈದ್ಧಾಂತಿಕ ಅಂತಾ ಬಂದಾಗ ಅಧಿಕಾರ ಎಂಬುದು ನನ್ನ ಚಪ್ಪಲಿಯೆಂದೇ ನಾನು ಹೇಳಿದ್ದವನು. ನಾನು ಜೆಡಿಎಸ್‌ನಲ್ಲಿ ಇದ್ದಾಗ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರಹಾಕಿದ್ದರು. ನಾನು ಹುಬ್ಬಳ್ಳಿಗೆ ಅಹಿಂದಾ ಸಮಾವೇಶಕ್ಕೆ ಹೋಗುತ್ತಿದ್ದೆ. ಒಬ್ಬರ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿಕೆ ಕಳಿಸಿದ್ದರು ಎಂದು ಮೆಲಕು ಹಾಕಿದರು.

ಮಹದೇವಪ್ಪ ಒಳ್ಳೆಯ ನಾಯಕ, ಮಹದೇವಪ್ಪನವರನ್ನು ಕರೆಯಿರಿ, ಸಚಿವ ಸ್ಥಾನ ನೀಡುತ್ತೇನೆಂದು ಹೇಳಿ ಕಳಿಸಿದ್ದರು. ಆಗ ನಾನು ಸೈದ್ಧಾಂತಿಕತೆ ಅಂತಾ ಬಂದಾಗ ಅಧಿಕಾರ ಎಂಬುದು ನನ್ನ ಚಪ್ಪಲಿ ಅಂತಾ ಹೇಳಿದ್ದೆ. ನಮ್ಮ ಸಿದ್ಧಾಂತಕ್ಕೆ ನಾನು ಬದ್ಧರಾಗಿರಬೇಕು. ಅಂಬೇಡ್ಕರ್ ನಮಗೆ ಪ್ರಜಾಪ್ರಭುತ್ವ ಕೊಟ್ಟಿದ್ದು, ಈ ವಿಚಾರದಲ್ಲಿ ವಿಳಂಬ ಧೋರಣೆ ಹೊಂದಿದ್ದರು. ದೇಶಕ್ಕೆ ಪ್ರಜಾಪ್ರಭುತ್ವ ತಂದು ಕೊಟ್ಟಿದ್ದು ಅಂಬೇಡ್ಕರ್. ಇಂತಹ ವ್ಯವಸ್ಥೆ ಯಶಸ್ವಿಯಾಗಿ ಪರಿಶಿಷ್ಟ ಜಾತಿ-ಪಂಗಡಗಳು, ಹತ್ತಾರು ಜಾತಿಗಳು, ಅಲ್ಪಸಂಖ್ಯಾತರು, ಹಿಂದುಳಿದವರು ಒಂದಾಗಬೇಕು ಎಂದು ತಿಳಿಸಿದರು.

RSS ಅಸ್ಪೃಶ್ಯರನ್ನು ಪಂಚಮ ಗುಂಪಿಗೆ ಸೇರಿಸಿದ್ದೀರಿ

1924ರಲ್ಲಿ ಬಹಿಷ್ಕೃತ ಹಿತಕಾರಿಣಿ ಸಭೆಯ ನಂತರ ಆರೆಸ್ಸೆಸ್ ಹುಟ್ಟಿತು. 1925ರಲ್ಲಿ ಆರೆಸ್ಸೆಸ್ ಹುಟ್ಟಿತು. ಬಾಬಾ ಸಾಹೇಬ್ ಅಂಬೇಡ್ಕರ್ ಬಹಿಷ್ಕೃತ ಹಿತಕಾರಣಿ ಸಭೆ ಹುಟ್ಟುಹಾಕಿದ ನಂತರ ಸಂಘ ಜನ್ಮ ತಾಳಿತು. ಆರೆಸ್ಸೆಸ್ ನಿಲುವು ಏನು ಅಂದರೆ ಅದು ಮನುವಾದ. ನಾವು ಆರೆಸ್ಸೆಸ್ಸನ್ನು ವಿರೋಧಿಸುತ್ತಿಲ್ಲ. ನೀವು ವರ್ಣ, ಅಷ್ಟಧರ್ಮ ಇಟ್ಟಿದ್ದೀರಿ. ಅಸ್ಪೃಶ್ಯತೆ ಜೀವಂತ ಇಟ್ಟಿದ್ದೀರಿ. ಶ್ರೇಣೀಕೃತ ವ್ಯವಸ್ಥೆ ಜೀವಂತವಾಗಿಟ್ಟಿದ್ದೀರಿ. ಅಸ್ಪೃಶ್ಯರನ್ನು ಪಂಚಮ ಗುಂಪಿಗೆ ಸೇರಿಸಿದ್ದೀರಿ. ಮಹಿಳೆಯರನ್ನು ಪ್ರತ್ಯೇಕವಾಗಿ ನೋಡುತ್ತಿದ್ದೀರಿ. ವಿ ಅಫೋಸ್‌ ಐಡಿಯಾಲಾಜಿ ಆಫ್ ಮನುವಾದ ಎಂದು ಆರೆಸ್ಸೆಸ್‌ ಗೆ ವಿರೋಧಿಸುವುದಿಲ್ಲ ಎನ್ನುತ್ತಲೇ ಸಂಘದ ವಿಚಾರವನ್ನು ಅವರು ಖಂಡಿಸಿದರು.

ಇಂದಿಗೂ ಮನುವಾದವನ್ನು ಪಾಲಿಸಿಕೊಂಡು ಬಂದು, ದೇಶದ ಅಭಿವೃದ್ಧಿಗೆ ಕುಂಠಿತವಾದ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದ ಆಶಯಗಳ ವಿರುದ್ಧವಾಗಿ ಮನುವಾದದ ವಿಚಾರಗಳನ್ನು ಅನುಷ್ಟಾನ ಮಾಡಿದ್ದರು ಎಂದು ಬೇಸರ ತೋರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಹಿರಿಯ ನಟ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಆಹ್ವಾನ!
ಹಣಕಾಸು ಇಲಾಖೆ ಹೇಳಿದರೂ ₹1000 ಕೋಟಿಗೂ ಅಧಿಕ ಟೆಂಡರ್‌ ಉಲ್ಲಂಘನೆ: ಸತೀಶ್ ಜಾರಕಿಹೊಳಿಗೆ ಬಿಗಿಯಾದ ಇ.ಡಿ ಉರುಳು?