ಸಿದ್ದರಾಮಯ್ಯ ಪದೇಪದೆ ಒಂದು ಮಾತು ಹೇಳ್ತಿರ್ತಾರೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ಯಾವಾಗಲೂ ಹೇಳ್ತಿರ್ತಾರೆ. ಎಲ್ಲಿದೆ ಸರ್ವ ಜನಾಂಗದ ತೋಟ? ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲೂ ಹಲವು ಕಡೆ ಅಡೆತಡೆಗಳಾದವು, ಕಲ್ಲು ತೂರಾಟ ನಡೆಸಿದರು ಇದೇನಾ ಶಾಂತಿಯ ತೋಟ? ಕಾಂಗ್ರೆಸ್ ಓಲೈಕೆ ರಾಜಕಾರಣದ ವಿರುದ್ಧ ಮಾಜಿ ಸಿಎಂ ಕಿಡಿಕಾರಿದರು
ಹಾವೇರಿ (ಜ.28): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ಸರ್ಕಾರ ರಕ್ಷಣೆ ಕೊಡ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ಮಂಡ್ಯದಲ್ಲಿ ಹನುಮ ಧ್ವಜ ತೆರವುಗೊಳಿಸಿರುವ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪದೇಪದೆ ಒಂದು ಮಾತು ಹೇಳ್ತಿರ್ತಾರೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ಯಾವಾಗಲೂ ಹೇಳ್ತಿರ್ತಾರೆ. ಎಲ್ಲಿದೆ ಸರ್ವ ಜನಾಂಗದ ತೋಟ? ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲೂ ಹಲವು ಕಡೆ ಅಡೆತಡೆಗಳಾದವು, ಅರೆಸ್ಟ್ ಆಗಿವೆ. ಎಲ್ಲ ಕಡೆ ಸಮಸ್ಯೆ ಆಗುತ್ತಿದೆ. ರಾಮಮಂದಿರ ಶೋಭಾಯಾತ್ರೆ ವೇಳೆ ಕಲ್ಲು ತೂರಿದ್ದಾರೆ. ಇಂಥ ಸಮಾಜಘಾತುಕರನ್ನು ಬಂಧಿಸುವ ಬದಲು ಸರ್ಕಾರ ಅಂತವರಿಗೆ ರಕ್ಷಣೆ ನೀಡುತ್ತಿದ್ದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ಏನು ನಡ್ತೀದೆ? 'ಬಿಜೆಪಿ ಸಂಸದರನ್ನು ಗೆಲ್ಲಿಸಿ' ಎಂದ ಶಾಮನೂರು ಪರ ಎಂಬಿ ಪಾಟೀಲ್ ಬ್ಯಾಟಿಂಗ್!
ಕಾಂಗ್ರೆಸ್ಸಿನ ಒಲೈಕೆ ರಾಜಕಾರಣದ ಪರಮಾವಧಿ:
ಸರ್ಕಾರ ಒಲೈಕೆ ರಾಜಕಾರಣ ಮಾಡುತ್ತಿದೆ. ದಲಿತರ ಮಹಿಳೆ ಮೇಲೆ, ಅಲ್ಪಸಂಖ್ಯಾತ ಮಹಿಳೆ ಮೇಲೆ ದೌರ್ಜನ್ಯ ನಡೆದರೂ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ ಮಹಿಳೆಯರ ಮೇಲಿನ ದೌರ್ಜನ್ಯಗಳು ಶೇ.30% ರಷ್ಟು ಹೆಚ್ಚಳ ಆಗಿದೆ. ಕಾನೂನು ಕೈಗೆತ್ತಿಕೊಂಡವರು ನಿರ್ಭಿಡೆಯಿಂದ ವ್ಯವಹಾರ ಮಾಡ್ತಿದ್ದಾರೆ. ಬಿಹಾರದ ಜಂಗಲ್ ರಾಜ್ ರೀತಿ ನಮ್ಮ ರಾಜ್ಯದಲ್ಲೂ ಉಂಟಾಗಿದೆ. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇವರು ಎಸ್‌ಐಟಿ ರಚನೆ ಮಾಡಲಿಲ್ಲ. ಹೀಗಾಗಿ ನಾವೇ ಒಂದು ಪಿಐಎಲ್ ಹಾಕುತ್ತೇವೆ. ಅತ್ಯಾಚಾರ ಮಾಡಿದವರು ಯಾವ ಕೋಮಿನವರು ಎಂಬುದರ ಕೇಸ್ ದಾಖಲಿಸುತ್ತದೆ. ಮುಸ್ಲಿಂ ಓಲೈಕೆಯಿಂದಲೇ, ಏನೇ ಮಾಡಿದರೂ ಶಿಕ್ಷೆಯಾಗುವುದಿಲ್ಲ ಕನಿಷ್ಠ ಪಕ್ಷ ಬಂಧಿಸುವುದಿಲ್ಲ ಎಂಬುದು ದುಷ್ಕರ್ಮಿಗಳಿಗೆ ಗೊತ್ತಿರುವುದರಿಂದ ಇಂಥ ಕೃತ್ಯಗಳು ಪದೇಪದೆ ನಡೆಯುತ್ತಿದೆ. ಇದು ತುಂಬಾ ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ಚಿತ್ರದುರ್ಗದಲ್ಲಿ ಸರ್ಕಾರದಿಂದ ಶೋಷಿತರ ಸಮಾವೇಶ ನಡೆಯುತ್ತಿರುವ ವಿಚಾರ ಸಂಬಂಧ ಮಾತನಾಡಿದ ಅವರು, ಅಹಿಂದ ವರ್ಗಗಳನ್ನೇ ಮೆಟ್ಟಿಲು ಮಾಡಿಕೊಂಡು ಎರಡು ಸಲ ಸಿಎಂ ಆಗಿರುವ ಸಿದ್ದರಾಮಯ್ಯ ಆ ಸಮುದಾಯಗಳಿಗೆ ಏನು ಮಾಡಿದ್ರು ಎಂಬುದು ಮೊದಲು ಹೇಳಲಿ. ಹಿಂದುಳಿದ ವರ್ಗ, ಎಸ್ಸಿ ಎಸ್ಟಿ ಜನಾಂಗಕ್ಕೆ ಏನು ಮಾಡಿದ್ರಿ? ದಲಿತರಿಗೆ ಮೀಸಲಿಟ್ಟ 11300 ಕೋಟಿ ರೂಪಾಯಿ ಹಣ ಡೈವರ್ಟ್ ಮಾಡಿದ್ರಿ. ದಲಿತರ ಹಣ ಡೈವರ್ಟ್ ಯಾಕೆ ಮಾಡಿದ್ರಿ? ದಲಿತರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದಲಿತರಿಗೆ ನ್ಯಾಯ ಒದಗಿಸಿದ್ದೇ ನಾವು. ನಮ್ಮ ಅಧಿಕಾರಾವಧಿಯಲ್ಲಿ ದಲಿತರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಾಗ ಅದನ್ನು ಕಾಂಗ್ರೆಸ್ ಅವರು ಚುನಾವಣೆ ಸ್ಟಂಟ್ ಎಂದರು. ನಮ್ಮ ಆಡಳಿತ ಅವಧಿಯಲ್ಲಿ ಎಸ್ ಸಿ ಎಸ್ ಟಿ ಜನಾಂಗಗಳಿಗೆ ನ್ಯಾಯ ಒದಗಿಸಿದ್ದೇವೆ. ಶಿಕ್ಷಣ, ಉದ್ಯೋಗಕ್ಕಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ. ಅವರ ಸರ್ಕಾರ ಇದೆ, ಕೇವಲ ಸಮಾವೇಶ ಮಾಡ್ತಿದ್ದಾರೆ. ಆದರೆ ಅಸೆಂಬ್ಲಿ ಚುನಾವಣೆಯಲ್ಲಿ ಪಡೆದ ಲಾಭ ಈಗ ಪಡೆಯಲು ಆಗಲ್ಲ ಎಂದರು.
ಇನ್ನು ಗಂಗಾವತಿ ಶಾಸಕ ಜನಾರ್ದನರೆಡ್ಡಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿರುವ ವಿಚಾರ ಸಂಬಂಧ ಮಾತನಾಡಿದ ಬೊಮ್ಮಾಯಿ, ಜನಾರ್ದನರೆಡ್ಡಿ ಮೊದಲು ನಮ್ಮ ಬಿಜೆಪಿಯಲ್ಲೇ ಇದ್ದವರು. ಹೀಗಾಗಿ ಸಹಜವಾಗಿ ಅವರು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದರು.