ಕರ್ನಾಟಕದ ಇಬ್ಬರು ಡಿಜಿಟಲ್ ಸ್ಟಾರ್ಸ್ ಫೋರ್ಬ್ಸ್ ಪಟ್ಟಿಯಲ್ಲಿ, ಟಾಪ್ 50 ರೊಳಗೆ ಸ್ಥಾನ ಪಡೆದ ಕನ್ನಡಿಗರು!

By Gowthami K  |  First Published Oct 15, 2024, 6:25 PM IST

ಫೋರ್ಬ್ಸ್ ಇಂಡಿಯಾದ ಟಾಪ್ 100 ಡಿಜಿಟಲ್ ಸ್ಟಾರ್ಸ್ 2024 ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಡಿಜಿಟಲ್ ಕ್ರಿಯೇಟರ್ಸ್ ಸ್ಥಾನ ಪಡೆದಿದ್ದಾರೆ. ಚಿಕ್ಕೋಡಿ ಮೂಲದ ಸೋಮಶೇಖರ್ ಮತ್ತು ಬೆಂಗಳೂರಿನ ಅಶ್ವಿನ್ ಪ್ರಭಾಕರ್ ಕ್ರಮವಾಗಿ 44 ಮತ್ತು 48 ನೇ ಸ್ಥಾನದಲ್ಲಿದ್ದಾರೆ.


ಫೋರ್ಬ್ಸ್ ಇಂಡಿಯಾದ ಟಾಪ್ 100 ಡಿಜಿಟಲ್ ಸ್ಟಾರ್ಸ್ 2024 ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ಕರ್ನಾಟಕದ ಇಬ್ಬರು ಡಿಜಿಟಲ್‌ ಕ್ರಿಯೇಟರ್ಸ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹಾಸ್ಯ, ಸೌಂದರ್ಯ, ವ್ಯಾಪಾರ, ಫಿಟ್‌ನೆಸ್, ಆಹಾರ, ತಂತ್ರಜ್ಞಾನ, ಪ್ರಯಾಣ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದವರು ಈ ಪಟ್ಟಿಯಲ್ಲಿದ್ದಾರೆ.

ಚಿಕ್ಕೋಡಿ ಮೂಲದ  ಸೋಮಶೇಖರ್ ಅವರು  TOP 100 ಕ್ರಿಯೇಟರ್‌ಗಳ ಪಟ್ಟಿಯಲ್ಲಿ 44ನೇ ಸ್ಥಾನ ಪಡೆದಿದ್ದು ಕರ್ನಾಟಕದ ನಂಬರ್‌ 1 ಆಗಿದ್ದಾರೆ. 2023ರಲ್ಲೂ ಇವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.  ಇವರು ಟೆಕ್ ಸೋಮ್ಸ್ ಎಂಬ ಯೂಟ್ಯೂಬ್ ಹೊಂದಿದ್ದಾರೆ. ಇದರಲ್ಲಿ ಕನ್ನಡದಲ್ಲಿ ಟೆಕ್‌  ವಿಮರ್ಶೆಗಳನ್ನು ಹಾಕುತ್ತಾರೆ. ಪ್ರತಿ ಹೊಸ ಪೋಸ್ಟ್‌ನಲ್ಲಿ 10,000 ಕ್ಕೂ ಹೆಚ್ಚು ವೀಕ್ಷಣೆ ಮತ್ತು ಉತ್ಸಾಹಭರಿತ ಕಾಮೆಂಟ್‌ ಗಳ ಮೂಲಕ ಜನಪ್ರಿಯವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 355K ಅನುಯಾಯಿಗಳನ್ನು ಹೊಂದಿದ್ದಾರೆ. ಯೂಟ್ಯೂಬ್ ನಲ್ಲಿ 412K ಸಬ್‌ಸ್ಕ್ರೈಬರ್‌ ಹೊಂದಿದ್ದಾರೆ.

Latest Videos

undefined

ಬಾಬಾ ಸಿದ್ದಿಕಿ ಅಂತ್ಯಕ್ರಿಯೆಗೆ ಸ್ನೇಹಿತ ಶಾರುಖ್ ಗೈರಾಗಿದ್ದಕ್ಕೆ ಕಾರಣವಿದು!

ಇನ್ನು ಎರಡನೇಯದಾಗಿ  TOP 100 ಕ್ರಿಯೇಟರ್‌ಗಳ ಪಟ್ಟಿಯಲ್ಲಿ ಸೋ ಬೆಂಗಳೂರು ಮೂಲಕ ಫೇಮಸ್ ಆಗಿರುವ ಅಶ್ವಿನ್ ಪ್ರಭಾಕರ್ 48 ನೇ ಸ್ಥಾನ ಪಡೆದಿದ್ದಾರೆ. ಮೂಲತಃ ಮಲೆನಾಡಿನವರು ಬೆಂಗಳೂರಿನಲ್ಲಿದ್ದುಕೊಂಡು ಪೂರ್ಣ ಸಮಯದ ಫುಡ್‌ ಬ್ಲಾಗರ್ ಆಗಲು ತಮ್ಮ ಕಾರ್ಪೊರೇಟ್ ವೃತ್ತಿಜೀವನವನ್ನು ತ್ಯಜಿಸಿದ್ದು, 2021-22 ರಲ್ಲಿ, ಅವರು ರಾಜ್ಯದ ಶ್ರೀಮಂತ ಆಹಾರ ಸಂಸ್ಕೃತಿಯನ್ನು ಅನಾವರಣಗೊಳಿಸಲು ಕರ್ನಾಟಕದ 31 ಜಿಲ್ಲೆಗಳಲ್ಲಿ 100 ದಿನಗಳ ಪ್ರಯಾಣ ಬೆಳೆಸಿ ವಿವಿಧ ಆಹಾರ ಪದ್ಧತಿಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಎರಡು ವರ್ಷಗಳ ನಂತರ ಮತ್ತೊಮ್ಮೆ ಕರ್ನಾಟಕ ಸುತ್ತಿ ವೈವಿಧ್ಯ ಆಹಾರಗಳನ್ನು ಪರಿಚಯಿಸಿದ್ದಾರೆ. ಡೈಲಿ ನ್ಯೂಟ್ರಿಷನ್‌ನಿಂದ ಪ್ರಾಯೋಜಕತ್ವ ಕೂಡ ಪಡೆದುಕೊಂಡಿದ್ದು, ಇದು ಎನ್‌ಜಿಒಗಳು, ಅಂಧ ಮಕ್ಕಳ ಶಾಲೆಗಳು, ಅನಾಥಾಶ್ರಮಗಳಿಗೆ ದಿನಸಿ ವಸ್ತುಗಳನ್ನು ದಾನ ಮಾಡಲು ಅವರಿಗೆ ಅನುವು ಮಾಡಿಕೊಟ್ಟಿತು. ಇನ್‌ಸ್ಟಾಗ್ರಾಮ್‌ನಲ್ಲಿ 353K ಅನುಯಾಯಿಗಳನ್ನು ಹೊಂದಿದ್ದಾರೆ. ಯೂಟ್ಯೂಬ್ ನಲ್ಲಿ 27ಸಾವಿರಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ ಹೊಂದಿದ್ದಾರೆ. ಇವರ ವಿಡಿಯೋಗಳು ಉತ್ತಮ ವೀಕ್ಷಣೆ ಹೊಂದಿದೆ

ಇನ್ನು ಫ್ಯಾಷನ್ ಮತ್ತು ಜೀವನಶೈಲಿ ಕಂಟೆಂಟ್‌ ಕ್ರಿಯೇಟರ್‌ ನ್ಯಾನ್ಸಿ ತ್ಯಾಗಿ ಅವರು ಫೋರ್ಬ್ಸ್ ಇಂಡಿಯಾದ ಟಾಪ್ 100 ಡಿಜಿಟಲ್ ಸ್ಟಾರ್ಸ್ 2024 ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 2.9 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ತ್ಯಾಗಿ, ತನ್ನ ಆಕರ್ಷಕವಾದ ಫ್ಯಾಶನ್ ವಿಷಯಕ್ಕಾಗಿ ಮತ್ತು ಕ್ಯಾನೆಸ್ 2024 ರೆಡ್ ಕಾರ್ಪೆಟ್‌ನಲ್ಲಿ ತನ್ನ ಅದ್ಭುತ ನೋಟಕ್ಕಾಗಿ ಮನ್ನಣೆಯನ್ನು ಗಳಿಸಿದರು, ಅಲ್ಲಿ ಅವರು ತಾವೇ ಡಿಸೈನ್ ಮಾಡಿದ ಬಟ್ಟೆ ಧರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚೊಚ್ಚಲ ಪ್ರವೇಶ ಪಡೆದಿದ್ದರು.

BBK11: ಯಾವಾನಾದ್ರೂ ಅಪ್ಪಂಗೆ ಹುಟ್ಟಿದ್ರೆ ನನ್ನ ಕಣ್ಣೆದ್ರು ಬಂದು ಮಾತಾಡಿ: ಜಗದೀಶ್ ಗೆ ಚೈತ್ರಾ ಕುಂದಾಪುರ ಅವಾಜ್!

ಹಾಸ್ಯ ಕಂಟೆಂಟ್ ಕ್ರಿಯೇಟರ್ ಸಾಕ್ಷಿ ಕೇಶ್ವಾನಿ ಎರಡನೇ ಸ್ಥಾನದಲ್ಲಿದ್ದರೆ, ಡ್ಯಾನಿ ಪಂಡಿತ್ ಮೂರನೇ ಸ್ಥಾನ ಪಡೆದರು. 2023ರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಧರ್ನಾ ದುರ್ಗಾ ಈ ವರ್ಷ ನಾಲ್ಕನೇ ಸ್ಥಾನ ಪಡೆದರು. ಐದನೇ ಸ್ಥಾನವನ್ನು ಮಹೇಶ್ ಕೇಶ್ವಾಲಾ ಪಡೆದುಕೊಂಡಿದ್ದು, ಹರ್ಷಿತಾ ಗುಪ್ತಾ ಆರನೇ ಸ್ಥಾನದಲ್ಲಿದ್ದಾರೆ. ರಾಜವರ್ಧನ್ ಗ್ರೋವರ್ ಮತ್ತು ಅಪೂರ್ವ ಮುಖಿಜಾ ಕ್ರಮವಾಗಿ ಏಳು ಮತ್ತು ಎಂಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬ್ಯೂಟಿ ಕಂಟೆಂಟ್ ಕ್ರಿಯೇಟರ್ ತಾರಿಣಿ ಪೇಶಾವಾರಿಯಾ ಒಂಬತ್ತನೇ ಸ್ಥಾನದಲ್ಲಿದ್ದಾರೆ ಮತ್ತು ಕಿರಣ್ ದತ್ತಾ ಮೊದಲ ಹತ್ತರೊಳಗೆ ಸ್ಥಾನಪಡೆದವರಾಗಿದ್ದಾರೆ.

click me!