ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಕುರಿತಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗವು ಅಧ್ಯಯನ ನಡೆಸಿ ವರದಿ ಸಿದ್ದಪಡಿಸಿದೆ. ಕಳೆದ 15 ವರ್ಷಗಳ ಪ್ರವಾಹ ಪರಿಸ್ಥಿತಿಯನ್ನಾಧರಿಸಿ ವರದಿಯನ್ನು ಸಿದ್ದಪಡಿಸಲಾಗಿದ್ದು, ಅದರಲ್ಲಿ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಲಾಗಿದೆ.
ಗಿರೀಶ್ ಗದಗ
ಬೆಂಗಳೂರು(ಜೂ.28): ರಾಜ್ಯದಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಸುರಿದಂತೆ 1,763 ಗ್ರಾಮಗಳಲ್ಲಿ ಪ್ರವಾಹಪರಿ ಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ. ಹೀಗಾಗಿ ಪ್ರವಾಹ ಎದುರಿಸಲು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗವು ಗ್ರಾಮ ಪಂಚಾಯತಿ ಮಟ್ಟದಲ್ಲಿ ತಂಡಗಳ ರಚನೆಗೆ ಮುಂದಾಗಿದೆ.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಕುರಿತಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗವು ಅಧ್ಯಯನ ನಡೆಸಿ ವರದಿ ಸಿದ್ದಪಡಿ ಸಿದೆ. ಕಳೆದ 15 ವರ್ಷಗಳ ಪ್ರವಾಹ ಪರಿಸ್ಥಿತಿ ಯನ್ನಾಧರಿಸಿ ವರದಿಯನ್ನು ಸಿದ್ದಪಡಿಸಲಾ ಗಿದ್ದು, ಅದರಲ್ಲಿ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಲಾಗಿದೆ.
Rain in Karnataka: ಮಳೆಯ ನೀರಲ್ಲಿ ವಾಹನ ಸವಾರರ ಪರದಾಟ..! ನಿದ್ರೆಯಲ್ಲೇ ಇದ್ದಾಗಲೇ ಸಮಾಧಿಯಾದ ಅಮಾಯಕರು..!
ಅಧ್ಯಯನದಲ್ಲಿನ ವರದಿಯಲ್ಲಿರುವಂತೆ ಕಳೆದ 10 ವರ್ಷಗಳಲ್ಲಿ 7 ವರ್ಷಗಳು ರಾಜ್ಯದ ಹಲವು ಜಿಲ್ಲೆಗಳು ಪ್ರವಾಹ ಉಂಟಾಗಿದೆ. ಅದರಲ್ಲೂ 2018ರಿಂದ 2022ರವರೆಗೆ ಸತತ ವರ್ಷಗಳ ಕಾಲ ಪ್ರವಾಹ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತಂತೆ ಅಧ್ಯಯನ ನಡೆಸಿರುವ ವಿಪತ್ತು ನಿರ್ವಹಣಾ ವಿಭಾಗವು ರಾಜ್ಯದ 23 ಜಿಲ್ಲೆಗಳ 148 ತಾಲೂಕುಗಳ 717 ಗ್ರಾಮ ಪಂಚಾಯತ್ ವ್ಯಾಪ್ತಿಯ 1,763 ಗ್ರಾಮಗಳು ಪ್ರವಾಹ ಪೀಡಿತ ಗ್ರಾಮಗಳನ್ನಾಗಿ ಗುರುತಿಸಿದೆ. ಆದ ರಲ್ಲಿ 1,003 ಗ್ರಾಮಗಳಲ್ಲಿ ಮಧ್ಯಮ ಪ್ರಮಾಣದ ಪ್ರವಾಹ ಉಂಟಾಗಲಿದ್ದು, 760 ಗ್ರಾಮ ಗಳಲ್ಲಿತೀವ್ರತರವಾದ ಪ್ರವಾಹ ಉಂಟಾಗಲಿದೆ. ಈ ಬಾರಿಯೂ ಭಾರೀ ಮಳೆ ಸುರಿದರೆ ಅಷ್ಟೂ ಗ್ರಾಮಗಳಲ್ಲಿ ಪ್ರವಾಹ ಉಂಟಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಉತ್ತರ ಕರ್ನಾಟಕ ಜಿಲ್ಲೆಗಳಲ್ಲೇ ಹೆಚ್ಚು:
ಹೀಗೆ ಪ್ರವಾಹ ಉಂಟಾಗುವ ಗ್ರಾಮಗಳ ಪೈಕಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಗ್ರಾಮ ಗಳೇ ಹೆಚ್ಚಿವೆ. ಪ್ರಮುಖವಾಗಿ ಕಲಬುರಗಿಯಲ್ಲಿ 238, ಬೆಳಗಾವಿಯಲ್ಲಿ 201, ಬಾಗಲಕೋಟೆ ಯಲ್ಲಿ 192, ಹಾವೇರಿಯಲ್ಲಿ 176, ರಾಯಚೂರು 137 ಗ್ರಾಮಗಳು ಪ್ರವಾಹ ಪೀಡಿತವಾಗಲಿವೆ. ಉಳಿದಂತೆ ಶಿವಮೊಗ್ಗದಲ್ಲಿ 142 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಲಿದ್ದು, ಉಳಿದ 17 ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗ್ರಾಪಂ ಮಟ್ಟದಲ್ಲಿ ತಂಡಗಳ ರಚನೆ:
ಪ್ರವಾಹ ಎದುರಿಸುವ ಗ್ರಾಮಗಳಲ್ಲಿ ರಕ್ಷಣಾ ಕಾರ್ಯ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ತಂಡಗಳನ್ನು ರಚಿಸಲು ಕಂದಾಯ ಇಲಾಖೆ ಮುಂದಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾ ಗಿದೆ. ಆ ತಂಡದಲ್ಲಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಪಶು ಸಂಗೋಪನೆ, ಪೊಲೀಸ್, ಆಗ್ನಿ ಶಾಮಕದಳದಸಿಬ್ಬಂದಿಗಳನ್ನು ನೇಮಿಸುವಂತೆಯೂ ತಿಳಿಸಲಾಗಿದೆ. ಜತೆಗೆ ಅಯಾ ಗ್ರಾಮದಲ್ಲಿನನುರಿತ ಈಜುಗಾರರನ್ನು ಗುರುತಿಸಿ, ಅವರನ್ನು ಪ್ರವಾಹ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಹೇಳಲಾಗಿದೆ.
ಗ್ರಾಪಂ ಮಟ್ಟದಲ್ಲಿ ಅಣಕು ಪ್ರದರ್ಶನ:
ಪ್ರವಾಹ ಪರಿಸ್ಥಿತಿ ಎದುರಿಸಲು ರಚಿಸಲಾಗುವ ಗ್ರಾಪಂ ಮಟ್ಟದ ತಂಡಗಳು ಜುಲೈ 15ರೊಳಗೆ ಕಂದಾಯ ಇಲಾಖೆಯಿಂದ ಕಾರ್ಯಾಗಾರ ವನ್ನೂ ಮಾಡಲಾಗುತ್ತದೆ. ಅದರ ಜತೆಗೆ ಪ್ರವಾಹ ಪರಿಸ್ಥಿತಿ ಎದುರಿಸುವ ಕುರಿತಂತೆ ಗ್ರಾಪಂ ಮಟ್ಟದಲ್ಲಿ ಅಣಕು ಪ್ರದರ್ಶನ ನಡೆ ಸಲೂ ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜು. 15ರೊಳಗೆ ಗ್ರಾಪಂ ಮಟ್ಟದ ತಂಡಗಳ ರಚನೆ, ಕಾರ್ಯಾಗಾರ, ಅಣಕು ಪ್ರದರ್ಶನ ಸೇರಿದಂತೆ ಉಳಿದೆಲ್ಲ ಸಿದ್ಧತೆ ಗಳನ್ನು ಮಾಡಿಕೊಳ್ಳುವಂತೆಯೂ ಕಂದಾಯ ಇಲಾಖೆಯಿಂದ ತಿಳಿಸಲಾಗಿದೆ.
ಮಂಜಿನ ನಗರಿ ಮಡಿಕೇರಿಯ ಈ ಐದು ಬಡಾವಣೆಗಳಲ್ಲಿ ಭೂಕುಸಿತದ ಆತಂಕ!
ಜಿಲ್ಲಾಧಿಕಾರಿಗಳಿಗೆ ನೋಡಲ್ ಅಧಿಕಾರಿಗಳ ನೇಮಕ: ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲು ಜಿಲ್ಲಾಧಿಕಾರಿ ಗಳಿಗೆ ತಿಳಿಸಲಾಗಿದೆ. ತಾಲೂಕು ನೋಡಲ್ ಅಧಿಕಾರಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ತಂಡಗಳೊಂದಿಗೆ 7ರಿಂದ 10 ದಿನಗಳಿಗೊಮ್ಮೆ ಸಭೆ ನಡೆಸಬೇಕು. ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಪ್ರವಾಹ ಪೀಡಿತ ಗ್ರಾಮಗಳು ಹೆಚ್ಚಿರುವ ತಾಲೂಕುಗಳ ಮೇಲೆ ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.
ನದಿ ಪಾತ್ರಗಳಲ್ಲಿ ಪ್ರವಾಹ ಉಂಟಾಗುವ ಗ್ರಾಮಗಳು
* ಕೃಷ್ಣ ಕೊಳ್ಳ: 1490 ಗ್ರಾಮಗಳು
* ಕಾವೇರಿ ಕೊಳ್ಳ: 124 ಗ್ರಾಮಗಳು
* ಪಶ್ಚಿಮ ಘಟ್ಟ ನದಿ: 90 ಗ್ರಾಮ
* ಇತರೆ ನದಿಗಳು: 59 ಗ್ರಾಮಗಳು