ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಸಂಸದ: ರಾತ್ರಿ ವೇಳೆಯೂ ಶಿವಮೊಗ್ಗ ನಿಲ್ದಾಣದಿಂದ ಹಾರಲಿವೆ ವಿಮಾನಗಳು!

Published : Oct 26, 2023, 08:23 PM IST
ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಸಂಸದ: ರಾತ್ರಿ ವೇಳೆಯೂ ಶಿವಮೊಗ್ಗ ನಿಲ್ದಾಣದಿಂದ ಹಾರಲಿವೆ ವಿಮಾನಗಳು!

ಸಾರಾಂಶ

ಶಿವಮೊಗ್ಗ ವಿಮಾನ ನಿಲ್ದಾಣ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಸಜ್ಜಾಗುತ್ತಿದೆ. ರಾತ್ರಿ ವೇಳೆಯೂ ಇಲ್ಲಿಂದ ಹಾರಲಿವೆ ವಿಮಾನಗಳು! ಡಿಸೆಂಬರ್ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣ ತನ್ನ ಸಂಚಾರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.   

ಶಿವಮೊಗ್ಗ (ಅ.26): ಶಿವಮೊಗ್ಗ ವಿಮಾನ ನಿಲ್ದಾಣ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಸಜ್ಜಾಗುತ್ತಿದೆ. ರಾತ್ರಿ ವೇಳೆಯೂ ಇಲ್ಲಿಂದ ಹಾರಲಿವೆ ವಿಮಾನಗಳು! ಡಿಸೆಂಬರ್ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣ ತನ್ನ ಸಂಚಾರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ರಾತ್ರಿ ವೇಳೆಯೂ ಇಲ್ಲಿಂದ ವಿಮಾನಗಳ ಹಾರಾಟ ಶುರುವಾಗಲಿದೆ. 

ಈ ನಿಟ್ಟಿನಲ್ಲಿ ಈಗಾಗಲೇ ನೈಟ್ ಲ್ಯಾಂಡಿಂಗ್‌ಗೆ 2ನೇ ಹಂತದ ಒಪ್ಪಿಗೆಯೂ ಸಿಕ್ಕಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 4 ಮಾರ್ಗಗಳಿಗೆ ವಿಮಾನಯಾನ ಸೇವೆಗೆ ಅನುಮತಿ ಸಿಕ್ಕಿದ್ದು, ಈಗಾಗಲೇ ಶಿವಮೊಗ್ಗ-ಬೆಂಗಳೂರು ಸಂಚಾರ ಆರಂಭವಾಗಿದೆ. ನವೆಂಬರ್ 25 ರಿಂದ ಹೈದರಾಬಾದ್, ಗೋವಾ, ತಿರುಪತಿಗೂ ಇಲ್ಲಿಂದ ವಿಮಾನ ಸಂಚಾರ ಆರಂಭವಾಗಲಿದೆ.
 


ಪ್ರಯೋಜನವೇನು?: ಬೆಂಗಳೂರು- ಶಿವಮೊಗ್ಗ- ಬೆಂಗಳೂರು ನಡುವೆ ಇಂಡಿಗೋ ವಿಮಾನ ಸಂಚಾರ ಮಾಡುತ್ತಿದೆ. ಹಬ್ಬದ ದಿನಗಳಲ್ಲಿ ಶೇ.80-85ರಷ್ಟು ಆಸನಗಳು ಭರ್ತಿಯಾಗುತ್ತಿದ್ದು, ಇನ್ನೊಂದು ವಿಮಾನ ಸಂಜೆ ಹೊತ್ತಿನಲ್ಲಿ ಸಂಚರಿಸಲು ಸಿದ್ಧವಿದೆ. ಆದರೆ, ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಇಲ್ಲದ್ದಕ್ಕೆ ಸಮಸ್ಯೆಯಾಗಿದೆ.

ರಾಮನ ಹೆಸರಿದ್ದರೆ ಕಾಂಗ್ರೆಸ್ಸಿಗರಿಗೆ ಅಲರ್ಜಿನಾ: ಸಿ.ಪಿ.ಯೋಗೇಶ್ವರ್

ಇನ್ನಷ್ಟು ವಿಮಾನಗಳ ಸಂಚಾರ: ಪ್ರಮುಖವಾಗಿ ನಾಲ್ಕು ಮಾರ್ಗಗಳಿಗೆ ವಿಮಾನಯಾನ ಸೇವೆ ನೀಡುವಂತೆ ಕೋರಲಾಗಿತ್ತು. ಅದರಂತೆ, ಈಗಾಗಲೇ ಬೆಂಗಳೂರು ಸಂಚಾರ ಆರಂಭವಾಗಿದೆ. ನವೆಂಬರ್‌ 25 ರಿಂದ ಹೈದರಾಬಾದ್‌, ಗೋವಾ, ತಿರುಪತಿಗೆ ವಿಮಾನ ಸಂಚಾರ ಆರಂಭವಾಗಲಿದೆ. ಅದನ್ನು ಸ್ಟಾರ್‌ ಏರ್‌ನವರೇ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಉಡಾನ್‌ ಅಡಿ ಶಿವಮೊಗ್ಗದಿಂದ ಕೊಲ್ಕತ್ತಾ, ದಿಲ್ಲಿ, ಮುಂಬಯಿಗೆ ವಿಮಾನ ಸೇವೆ ನೀಡುವಂತೆ ಕೋರಿದ್ದು, ಅವುಗಳು ಆರಂಭವಾಗಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!