* ಮಾನವೀಯತೆ ಮೆರೆದ ತಹಸೀಲ್ದಾರ್
* ಅಪಘಾತ: ಇಬ್ಬರಿಗೆ ಗಂಭೀರ ಗಾಯ
* ಅಪರಿಚಿತ ವೃದ್ಧೆ ಸಾವು
ರಾಮನಗರ(ನ.21): ಕೆರೆಗೆ ಕಾರು ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಬೆಂಗಳೂರು(Bengaluru) ದಕ್ಷಿಣ ತಾಲೂಕಿನ ನೆಲಗುಳಿ ಗೇಚ್ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಕಾರಿನಲ್ಲಿದ್ದ ಐವರ ಪೈಕಿ ಹಾವೇರಿಯ ನಿವಾಸಿಗಳಾದ ಕಲ್ಲಪ್ಪ (25), ಕಿರಣ್(22) ಹಾಗೂ ಬೀದರಿನ ಪುಂಡಲೀಕ (29) ಮೂವರು ಮೃತಪಟ್ಟಿದ್ದಾರೆ(Death).
ಸೋಮನಹಳ್ಳಿಯ ಕಂಪನಿಯೊಂದರಲ್ಲಿ ಕಳೆದ 1 ವರ್ಷದಿಂದ ಕೆಲಸ ಮಾಡುತ್ತಿದ್ದ ಕಲ್ಲಪ್ಪ, ಪುಂಡಲೀಕ, ಕಿರಣ್, ಅಂಬರೀಷ್ ಹಾಗೂ ಮಂಜುನಾಥ್ ಐವರು ಸ್ನೇಹಿತರು ಎಲ್ಲಾ ಒಟ್ಟುಗೂಡಿ ರಾತ್ರಿ ಊಟಕ್ಕೆಂದು ಸೋಮನಹಳ್ಳಿಯ ಡಾಬಾವೊಂದಕ್ಕೆ ತೆರಳಿದ್ದರು. ಊಟ ಆದ ನಂತರ ಐವರು ಸ್ನೇಹಿತರು ಮರಳಿ ಹಿಂತಿರುಗುವಾಗ ನೆಲಗುಳಿ ಸಮೀಪದ ಕೆರೆಯ(Lake) ತಡೆಗೋಡೆಗೆ ಕಾರು ಡಿಕ್ಕಿ(Collision) ಹೊಡೆದು ಉರುಳಿ ಬಿದ್ದಿದೆ.
ಈ ವೇಳೆ ಐವರ ಪೈಕಿ ಅಂಬರೀಷ್ ಹಾಗೂ ಮಂಜುನಾಥ್ ಕಾರ್ ಡೋರ್ ತೆಗೆದು ಈಜಿ(Swiimming) ದಡ ಸೇರಿದ್ದಾರೆ. ಇನ್ನುಳಿದ ಮೂವರು ಬದುಕಿರಬಹುದು ಎಂದು ಇಬ್ಬರೂ ಸಾರ್ವಜನಿಕರ ಸಹಾಯ ಪಡೆದು ಹುಡುಕಾಟಕ್ಕಾಗಿ ಪುನಃ ಕೆರೆಗೆ ಇಳಿದಿದ್ದಾರೆ. ಈ ವೇಳೆ ಕಲ್ಲಪ್ಪ, ಪುಂಡಲೀಕ ಮತ್ತು ಕಿರಣ್ ಮೂವರು ಮೃತಪಟ್ಟಿರುವುದು ಗೊತ್ತಾಗಿದೆ. ಕಲ್ಲಪ್ಪ ಹಾಗೂ ಪುಂಡಲೀಕ ಅವರ ಶವವನ್ನು(Deadbody) ಸಾರ್ವಜನಿಕರ ಸಹಾಯದಿಂದ ಹೊರತೆಗೆಯಲಾಗಿದೆ.
Shivamogga: ಗಾಯಾಳುಗಳ ನೆರವಿಗೆ ಗೃಹ ಸಚಿವ, ತಮ್ಮದೆ ಕಾರಿನಲ್ಲಿ ಕಳಿಸಿದರು
ಮತ್ತೊಂದು ಶವಕ್ಕಾಗಿ ಹುಡುಕಾಟ
ಮತ್ತೊರ್ವ ಮೃತ ಕಿರಣ್ ಶವ ದೊರಕದ ಕಾರಣ ಅಗ್ನಿಶಾಮಕ ಸಿಬ್ಬಂದಿಗಳು ಶವಕ್ಕಾಗಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಕಗ್ಗಲೀಪುರ ಪೋಲೀಸರು(Police) ಸೇರಿದಂತೆ ಇನ್ನಿತರ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಸತತ ಮಳೆಯಿಂದ ಕೆರೆ ಭರ್ತಿಯಾಗಿದೆ. ಇದರಿಂದ ಸ್ವಲ್ಪ ಮಟ್ಟಿನ ಅಡಚಣೆಯುಂಟಾಗಿದೆ. ಈ ಸಂಬಂಧ ಕಗ್ಗಲೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
ಲಾರಿ ಪಲ್ಟಿ: ಚಾಲಕ ಸಾವು, ಕ್ಲೀನರ್‌ಗೆ ಗಾಯ
ರೋಣ: ಪಾಟಿಗಲ್ಲು (ನೆಲಹಾಸು ಕಪ್ಪು ಕಲ್ಲು) ತುಂಬಿದ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ಚಾಲಕ ಮೃತಪಟ್ಟಿದ್ದು, ಕ್ಲೀನರ್ ಗಾಯಗೊಂಡ ಘಟನೆ ತಾಲೂಕಿನ ಯಾವಗಲ್ಲ ಗ್ರಾಮದ ಕುಡಿಯುವ ನೀರಿನ ಕೆರೆ ಸಮೀಪ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದೆ.
ರಸ್ತೆಯಲ್ಲಿನ ಗುಂಡಿ ತಪ್ಪಿಸುವ ವೇಳೆ ಆಯಾ ತಪ್ಪಿ ಲಾರಿ ಪಲ್ಟಿಯಾಗಿದ್ದು, ಚಾಲಕ ರಾಮಯ್ಯ (43) ಲಾರಿ ಅವಶೇಷದಡಿ ಸಿಲುಕಿ ಮೃತಪಟ್ಟಿದ್ದಾರೆ. ಕ್ಲೀನರ್ ರಾಮಜಿಗೆ ಕೈ, ಕಾಲು, ತಲೆಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶದ(Andhra Pradesh) ಅನಂತಪುರ(Anantapur) ಜಿಲ್ಲೆ ತಾಡಪತ್ರಿ ಪಟ್ಟಣದಿಂದ ಪಾಟಿಗಲ್ಲು (ನೆಲಹಾಸು ಕಪ್ಪು ಕಲ್ಲು) ತುಂಬಿಕೊಂಡು ನರಗುಂದ ಮಾರ್ಗವಾಗಿ ಮುನವಳ್ಳಿ ಗ್ರಾಮಕ್ಕೆ ಲಾರಿ ತೆರಳುತ್ತಿದ್ದು, ಯಾವಗಲ್ಲ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ರೋಣ(Ron) ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಅಪರಿಚಿತ ವೃದ್ಧೆ ಸಾವು
ದಾಬಸ್‌ಪೇಟೆ: ಅಪರಿಚಿತ ವೃದ್ಧೆಯೊಬ್ಬರಿಗೆ ಅಪಘಾತವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಂಪುರ ಹೋಬಳಿಯ ಹಳೇನಿಜಗಲ್ ಗ್ರಾಮದ ಸಮೀಪ ಇರುವ ಪೆಟ್ರೋಲ್ ಬಂಕ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು-ಬೆಂಗಳೂರು ರಸ್ತೆಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಹಳೆನಿಜಗಲ್ ಪೆಟ್ರೋಲ್ ಬಂಕ್ ಮುಂಭಾಗ ಸುಮಾರು 75 ವರ್ಷ ವಯಸ್ಸಿನ ಅಪರಿಚಿತ ವೃದ್ಧೆ ಯಾವುದೊ ವಾಹನದ ಚಾಲಕ ಅಪಘಾತವುಂಟು ಮಾಡಿದ್ದು, ಅಪರಿಚಿತ ಹೆಂಗಸು ರಸ್ತೆಯ ಮೇಲೆ ಬಿದ್ದಾಗ ಆಕೆಯ ತಲೆಯ ಮೇಲೆ ವಾಹನದ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೃತದೇಹ ಚಿದ್ರ ಚಿದ್ರವಾಗಿದೆ. ವಾಹನದ ಚಾಲಕ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೆ ಹೊರಟು ಹೋಗಿರುತ್ತಾನೆ. ಅಪರಿಚಿತ ವೃದ್ಧೆಯ ಮೃತದೇಹವೂ ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Yadgir| ಆಟೋಗೆ ಲಾರಿ ಡಿಕ್ಕಿ, 2 ತಿಂಗಳ ಮಗು ಸೇರಿ ಮೂವರ ದುರ್ಮರಣ
ಅಪಘಾತ: ಇಬ್ಬರಿಗೆ ಗಂಭೀರ ಗಾಯ
ಚಿಂಚೋಳಿ: ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಕಾರು-ಬೈಕ್ ಮಧ್ಯೆ ಅಪಘಾತ ಸಂಭಸಿದ್ದರಿಂದ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಚಂದ್ರಕಾಂತ ಸಂಗಪ್ಪ ಶಾಂದಾರ, ರಾಜಕುಮಾರ ಸೈಬಣ್ಣ ಲಾವಾಡಿ ಘಟನೆಯಲ್ಲಿ ಗಾಯಗೊಂಡವರು. ಬೈಕ್ ಸವಾರರು ಸುಲೇಪೇಟ ಗ್ರಾಮಕ್ಕೆ ಹೋಗಿ ಮರಳಿ ತಮ್ಮ ಗ್ರಾಮದತ್ತ ಬರುತ್ತಿದ್ದಾಗ ತೆಲಂಗಾಣದ ಕಾರು ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ಸುಲೇಪೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾನವೀಯತೆ ಮೆರೆದ ತಹಸೀಲ್ದಾರ್:
ದಸ್ತಾಪೂರ ಗ್ರಾಮದ ಮಾರ್ಗವಾಗಿ ಕಚೇರಿ ಕೆಲಸಕ್ಕೆ ಕಲಬುರಗಿಗೆ ಹೊರಟಿದ್ದ ಚಿಂಚೋಳಿ ತಹಸೀಲ್ದಾರ್ ಅಂಜುಮ ತಬಸುಮ್ ಅವರು ಅಪಘಾತದಿಂದ(Accident) ನರಳುತ್ತಿದ್ದ ಗಾಯಾಳುಗಳಿಗೆ ಉಪಚರಿಸಿ ಆ್ಯಂಬುಲೆನ್ಸ್(Ambulance) ಮೂಲಕ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.