* ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ಮುಂಚೂಣಿ: ಸಚಿವ ಸುಧಾಕರ್
* ಲಸಿಕೆ ಅಭಿಯಾದಲ್ಲಿ ವಿಶ್ವಕ್ಕೆ ಮಾದರಿಯಾಗುವಂತೆ ಸಾಧನೆ ಮಾಡಿದ ಭಾರತ
* ಕೊರೋನಾ ಮೂರನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಿದ್ಧ
ಬೆಂಗಳೂರು(ಜ.17): ರಾಜ್ಯದಲ್ಲಿ ಶೇ.99ರಷ್ಟು ಜನರು ಮೊದಲ ಡೋಸ್(First Dose) ತೆಗೆದುಕೊಂಡಿದ್ದು, ಲಸಿಕೆ(Vaccine) ನೀಡಿಕೆ ಅಭಿಯಾನದಲ್ಲಿ ಕರ್ನಾಟಕ(Karnataka) ಮುಂಚೂಣಿಯಲ್ಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್(Dr K Sudhakar) ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊರೋನಾ(Coronavirus) ಲಸಿಕೆ ಅಭಿಯಾದಲ್ಲಿ ಭಾರತ(India) ವಿಶ್ವಕ್ಕೆ(World) ಮಾದರಿಯಾಗುವಂತೆ ಸಾಧನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಲಸಿಕಾ ಅಭಿಯಾನಕ್ಕೆ(Vaccine Drive) ಚಾಲನೆ ನೀಡಿ ಒಂದು ವರ್ಷವಾಗಿದ್ದು, ದೇಶದಲ್ಲಿ 156 ಕೋಟಿ ಡೋಸ್ ಲಸಿಕೆಗಳನ್ನು ನೀಡಿ ಸಾಧನೆ ಮಾಡಿದೆ.ರಾಜ್ಯದಲ್ಲಿ ಶೇ.99 ರಷ್ಟು ಜನರು ಮೊದಲ ಡೋಸ್, ಶೇ.83 ಜನರು ಎರಡೂ ಡೋಸ್ ತೆಗೆದುಕೊಂಡಿದ್ದಾರೆ ಎಂದರು.
undefined
Corona 3rd Wave: ಕೋವಿಡ್ ಪ್ರಸರಣದ ಆರ್ ವ್ಯಾಲ್ಯೂ ಇಳಿಕೆ: 3ನೇ ಅಲೆ ತಗ್ಗಿದ ಸೂಚನೆಯೆ?
ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಮತ್ತು ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಹೇಳಿದರು.
3ನೇ ಅಲೆ ಚಿಕಿತ್ಸೆಗೆ ಸಜ್ಜು:
ರಾಜ್ಯ ಸರ್ಕಾರ(Government of Karnataka) ಕೊರೋನಾ ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. 10 ಸಾವಿರ ಗೃಹ ವೈದ್ಯರ ನೇಮಕ ಮಾಡಿದ್ದು, ಇವರು ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದಾಗ ಯಾವ ರೀತಿ ಆರೈಕೆ ಮಾಡಬೇಕು, ಟೆಲಿ ಟ್ರಯಾಜಿಂಗ್ ಹೇಗೆ ಮಾಡಬೇಕು, ಅವರಿಗೆ ನೀಡಬೇಕಾಗಿರುವ ಸಲಹೆ, ಸೂಚನೆಗಳೇನು ಎಂಬ ಬಗ್ಗೆ ತರಬೇತಿ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಅಂತಿಮ ವರ್ಷದ ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಸೇರಿಕೊಳ್ಳಲಾಗುವುದು. ತಂತ್ರಜ್ಞಾನ ಹಾಗೂ ದತ್ತಾಂಶ ಉಪಯೋಗ ಮಾಡಿಕೊಂಡು ಮೂರನೇ ಅಲೆ ನಿಯಂತ್ರಣ ಮಾಡುತ್ತೇವೆ ಎಂದು ತಿಳಿಸಿದರು.
ಮಕ್ಕಳ ಸಾವು:
ಬೆಳಗಾವಿಯ(Belagavi) ರಾಮದುರ್ಗ(Ramdurg) ತಾಲೂಕಿನಲ್ಲಿ ರೂಬೆಲ್ಲ ಲಸಿಕೆ ಪಡೆದ ಬಳಿಕ ಮೂವರು ಮಕ್ಕಳು ಸಾವನ್ನಪ್ಪಿದ ಪ್ರಕರಣದ ಕುರಿತು ಜಿಲ್ಲಾ ಆರೋಗ್ಯಾಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದ ಅವರು, ಬಳ್ಳಾರಿಯಲ್ಲಿ ಹಾಸ್ಟೆಲ್‌ಗಳನ್ನು ಮುಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಹಾಸ್ಟೆಲ್‌ಗಳಲ್ಲಿ ಕೇಸ್‌ಗಳ ಸಂಖ್ಯೆ ಜಾಸ್ತಿ ಆಗಿರಬಹುದು. ಹೀಗಾಗಿ, ಅಲ್ಲಿನ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭಾರತದ ಲಸಿಕಾ ಅಭಿಯಾನಕ್ಕೆ 1 ವರ್ಷ!
ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ಭಾರತದಲ್ಲಿ ಆರಂಭಿಸಲಾದ ಕೋವಿಡ್ ಲಸಿಕಾ ಅಭಿಯಾನಕ್ಕೆ ಜ.16ರ ಭಾನುವಾರ ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಒಂದು ವರ್ಷದಲ್ಲಿ 156 ಕೋಟಿ ಡೋಸ್ ಲಸಿಕೆ ವಿತರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರ ಮೂಲಕ ಆರಂಭಗೊಂಡ ಅಭಿಯಾನ ಬಳಿಕ 65 ವರ್ಷ ಮೇಲ್ಪಟ್ಟವರು, ವಿವಿಧ ಆರೋಗ್ಯ ಸಮಸ್ಯೆಯಿಂದ ಮೇಲ್ಪಟ್ಟವರಿಗೆ ವಿಸ್ತರಿಸಲಾಯಿತು. ನಂತರ 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡಿಕೆ ಆರಂಭವಾಯಿತು. ಇನ್ನು ಕಳೆದ ಜ.3ರಿಂದ 15-18ರ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಜ.10ರಿಂದ ಮುಂಜಾಗ್ರತಾ ಲಸಿಕೆಯನ್ನು ನೀಡಲಾಗುತ್ತಿದೆ.
Covid Crisis: 231 ದಿನ ಬಳಿಕ ರಾಜ್ಯದಲ್ಲಿ 34047 ಕೋವಿಡ್ ಕೇಸ್
2.68 ಲಕ್ಷ ಕೇಸ್, 402 ಸಾವು
ದೇಶದಲ್ಲಿ ಶನಿವಾರ ಒಂದೇ ದಿನ 2,68,833 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, 402 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ 2.64 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿದ್ದಕ್ಕೆ ಹೋಲಿಸಿದರೆ ಶನಿವಾರ ಸುಮಾರು 4000 ಪ್ರಕರಣಗಳು ಮಾತ್ರ ಏರಿಕೆಯಾಗಿವೆ. ಶನಿವಾರದ ಪಾಸಿಟಿವಿಟಿ ದರ(Positivity Rate) ಶೇ.16.66 ಇದೆ. ಮರಣ ದರ ಶೇ.1.32ರಷ್ಟಿದೆ.
ದೇಶದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 14.17 ಲಕ್ಷಕ್ಕೆ ಏರಿಕೆಯಾಗಿದೆ. ಇದು 223 ದಿನಗಳ ಗರಿಷ್ಠವಾಗಿದೆ. ಈವರೆಗೆ 6041 ಜನರಿಗೆ ಒಮಿಕ್ರೋನ್(Omicron) ಸೋಂಕು ತಗಲಿದೆ. ಕೊರೋನಾದಿಂದ ಗುಣಮುಖರಾಗುವ ದರ ಶೇ.94.83ಕ್ಕೆ ಇಳಿಕೆಯಾಗಿದೆ. ಶನಿವಾರ ಮೃತಪಟ್ಟ 402 ಜನರ ಪೈಕಿ ಕೇರಳದಲ್ಲೇ 199 ಜನರು ಹಾಗೂ ದೆಹಲಿಯಲ್ಲಿ 34 ಜನರು ಮೃತಪಟ್ಟಿದ್ದಾರೆ(Death). ಈವರೆಗೆ ಕೊರೋನಾದಿಂದ ದೇಶದಲ್ಲಿ 1.41 ಲಕ್ಷ ಜನರು ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಅತಿಹೆಚ್ಚು, ಕೇರಳದಲ್ಲಿ 2ನೇ ಅತಿಹೆಚ್ಚು ಹಾಗೂ ಕರ್ನಾಟಕದಲ್ಲಿ 3ನೇ ಅತಿಹೆಚ್ಚು (36956) ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.