
ಯಲ್ಲಾಪುರ (ಜೂ.4) ಕೈಗಾ ವಿದ್ಯುತ್ ಲೈನ್‌ನಲ್ಲಿ ಭಾರಿ ಪ್ರಮಾಣದ ಬೆಂಕಿ ಕಂಡು ಬಂದಿದ್ದು, ಲೈನ್ ಸಮೀಪದ ಜನರು ರಾತ್ರೋ ರಾತ್ರಿ ಮನೆ ಬಿಡುವಂತಾದ ಘಟನೆ ಶನಿವಾರ ರಾತ್ರಿ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ವಾಗಳ್ಳಿಯಲ್ಲಿ ಗುರುವಾರ ರಾತ್ರಿಯಿಂದ ಕೈಗಾ ಗ್ರೇಡ್ ಲೈನ್‌ಗೆ ಕಾರ್ಬನ್ ಕಟ್ಟಿದ್ದರಿಂದ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಕೈಗಾ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ ಬೆಂಕಿ ಬೀಳದಂತೆ ಭಾನುವಾರ ಲೈನ್ ಸರಿಪಡಿಸಿದರು. ಸುಮಾರು 240 ಮೆಗಾವ್ಯಾಟ್ ವಿದ್ಯುತ್ ಹರಿಯುವ ಲೈನ್ ಇದಾಗಿದ್ದು, ಒಂದು ವೇಳೆ ಲೈನ್ ತುಂಡಾಗಿ ಬಿದ್ದರೆ ಅರ್ಧ ಕಿ.ಮೀ. ಸುತ್ತಮುತ್ತ ಸುಟ್ಟು ಕರಕಲಾಗುವ ಸಾಧ್ಯತೆ ಇದೆ ಎಂಬ ಭಯದಲ್ಲಿ ಜನರು ರಾತ್ರೋ ರಾತ್ರಿ ಮನೆ ಬಿಟ್ಟು ಹೊರ ಹೋಗುವಂತಾಗಿದೆ.
ಕೈಗಾ ಲೈನ್‌ನಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡ ಗ್ರಾಮ ಲೆಕ್ಕಾಧಿಕಾರಿ ಈಶ್ವರ್ ಪಟಗಾರ ಮುಂಜಾಗ್ರತಾ ಕ್ರಮವಾಗಿ ಲೈನ್ ಸಮೀಪದ ಮನೆಗಳಿಂದ ಜನರನ್ನು ಹೊರ ಹೋಗುವಂತೆ ತಿಳಿಸಿದ್ದಾರೆ. ಭಾರಿ ಮಳೆ ಸುರಿಯುತ್ತಿದ್ದರಿಂದ ಯಾವುದೇ ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಜನರ ಜೀವದ ಜತೆ ಯಾವುದೇ ಅಧಿಕಾರಿಗಳು ಆಟವಾಡದಿರಲಿ. ಈ ಸಮಸ್ಯೆ ಬಗ್ಗೆ ದೂರವಾಣಿ ಮೂಲಕ ಕೈಗಾ ಅಧಿಕಾರಿಗಳ ಗಮನಕ್ಕೆ ತಂದಾಗ ಇದು ಗ್ರಿಡ್‌ನವರಿಗೆ ಸಂಬಂಧಿಸಿದ್ದು, ನಮಗೆ ಸಂಬಂಧಿಸಿದ್ದಲ್ಲ ಎಂದು ಜಾರಿಕೊಳ್ಳುವ ಯತ್ನ ಮಾಡಿದ್ದಾರೆ. ಸಂಬಂಧಿಸಿದವರಿಗೆ ಮಾಹಿತಿ ನೀಡುವ ಕನಿಷ್ಠ ಪ್ರಜ್ಞೆ ಹಾಗೂ ಮಾನವೀಯತೆಯನ್ನು ಕೈಗಾ ಅಧಿಕಾರಿಗಳು ಇಟ್ಟುಕೊಳ್ಳಲಿಲ್ಲ.
- ವಿನಾಯಕ ಕೋಮಾರ, ಗ್ರಾಮಸ್ಥ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ