ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಲ್ಲದೇ ಇನ್ನು 17 ಮಂದಿ ವಿರುದ್ಧವೂ ಎಫ್‌ಐಆರ್ ದಾಖಲು ಮಾಡಲಾಗಿದೆ.
ಬೆಂಗಳೂರು (ಏ.20): ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರನ್ನು ಬೆದರಿಸುತ್ತಿರುವ, ಬಸ್‌ಗಳ ಮೇಲೆ ಕಲ್ಲು ತೂರಿ ಹಾನಿ ಮಾಡಲು ಪ್ರಚೋದಿಸಿದ ಕಾರಣಕ್ಕಾಗಿ ಸಾರಿಗೆ ನೌಕರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೋಡಿಹಳ್ಳಿ ಸೇರಿ 17 ಜನರ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
undefined
ಕರ್ನಾಟಕದಲ್ಲಿ ನಿಲ್ಲದ ಸಾರಿಗೆ ಮುಷ್ಕರ; ಖಾಸಗಿ ಬಸ್ ಮಾಲೀಕರಿಂದ ಸುಲಿಗೆ!
ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ವಿಭಾಗದ ವಿಭಾಗೀಯ ಭದ್ರತಾ ನಿರೀಕ್ಷಕ ಕೆ.ಎಂ. ಮುನಿಕೃಷ್ಣ ನೀಡಿರುವ ದೂರನ್ನು ಆಧರಿಸಿ, ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನಿವೃತ್ತ ನೌಕರ ಆನಂದ್, ನಿರ್ವಾಹಕಿ ಚಂಪಕಾವತಿ ಹಾಗೂ ಇತರರ ವಿರುದ್ಧ ಅಕ್ರಮವಾಗಿ ನೌಕರರನ್ನು ಮುಷ್ಕರದಲ್ಲಿ ಭಾಗಿಯಾಗುವಂತೆ ಪ್ರರೇಪಿಸಿರುವ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.