ಕರ್ನಾಟಕದಲ್ಲಿ ಡೆಡ್ಲಿ ವೈರಸ್ ಅಟ್ಟಹಾಸ: ಇಲ್ಲಿದೆ ಏ.19ರ ಅಂಕಿ-ಸಂಖ್ಯೆ

By Suvarna NewsFirst Published Apr 19, 2021, 7:53 PM IST
Highlights

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಸಾವಿನ ಸಂಖ್ಯೆಯಲ್ಲೂ ಗಣನೀಯವಾಗಿ ಏರುತ್ತಿದೆ. ಇಲ್ಲಿದೆ ಏ.19ರ ಅಂಕಿ-ಸಂಖ್ಯೆ...

ಬೆಂಗಳೂರು, (ಏ.19): ಕರ್ನಾಟಕದಲ್ಲಿ ಕೊರೋನಾ ವೈರಸ್​ ಸೋಂಕಿನ ಪ್ರಸರಣ ದಿನೇದಿನೆ ಏರಿಕೆಯಾಗುತ್ತಿದೆ. ಇಂದು (ಸೋಮವಾರ) 15,785 ಜನರಿಗೆ ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, 146 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,76,850ಕ್ಕೆ ಏರಿಕೆಯಾಗಿದ್ರೆ, ಒಟ್ಟು ಮೃತರ ಸಂಖ್ಯೆ 13,497ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಅರ್ಧ ಬಂದ್..ಬಂದ್..: ಹರಿದಾಡುತ್ತಿರುವ Fake ಮಾರ್ಗಸೂಚಿ

ಇನ್ನು ಕಳೆದ 24 ಗಂಟೆಗಳಲ್ಲಿ 7098 ಜನರು ಸೇರಿದಂತೆ ಇದುವರೆಗೆ 10,21,250 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 1,42,084 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಡೆಡ್ಲಿ ವೈರಸ್ ಕಾಟ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಡ್ಲಿ ವೈರಸ್ ತನ್ನ ಅಟ್ಟಹಾಸ ಮುಂದುವರೆಸಿದ್ದು, ಬೆಂಗಳೂರಿನಲ್ಲಿ 9618 ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 556253 ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಕಿಲ್ಲರ್ ಕೊರೋನಾಗೆ 97 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 5220 ಕ್ಕೆ ಏರಿಕೆಯಾಗಿದೆ

click me!