ಕೊಲೆ ಕೇಸ್: ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಸಂಕಷ್ಟ

By Web DeskFirst Published Apr 10, 2019, 9:15 PM IST
Highlights

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಲಕರ್ಣಿಗೆ ಸಂಕಷ್ಟ ಎದುರಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕಲಕರ್ಣಿ ವಿರುದ್ಧ ಎಫ್. ಐ. ಆರ್. ದಾಖಲಾಗಿದೆ.

ಧಾರವಾಡ, [ಏ.10]: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಸಂಕಷ್ಟಗೆ ಸಂಕಷ್ಟ ಎದುರಾಗಿದೆ.

ಯೋಗೀಶ್ ಗೌಡ ಸಹೋದರ ಗುರುನಾಥ್ ಗೌಡ ದಾಖಲಿಸಿದ್ದ ಖಾಸಗಿ ದೂರಿನಿಂದ ಕೋರ್ಟ್ ನಿರ್ದೇಶನದಂತೆ ಧಾರವಾಡ ಉಪನಗರ ಪೊಲೀಸರು ಎಫ್. ಐ.ಆರ್ ದಾಖಲಿಸಿದ್ದಾರೆ.

ಧಾರವಾಡ ದೋಸ್ತಿ ಅಭ್ಯರ್ಥಿ ಕುಲಕರ್ಣಿ ವಿಚಾರಣೆ ಸಾಧ್ಯತೆ, ಯಾವ ಪ್ರಕರಣ?

ಮೊದಲ ಆರೋಪಿ ಡಿವೈಎಸ್ಪಿ ತುಳಜಪ್ಪು ಸುಲ್ಪಿ, 2ನೇ ಆರೋಪಿ ಡಿವೈಎಸ್ಪಿ ಚಂದ್ರಶೇಖರ ಮತ್ತು ವಿನಯ್ ಕುಲಕರ್ಣಿ  3ನೇ ಆರೋಪಿಯಾಗಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಬೆಂಬಲಿಗರು ಭಾಗಿಯಾಗಿದ್ದರು ಎನ್ನಲಾಗಿತ್ತು.

ಇನ್ನು, ಕೊಲೆ ಕೇಸ್ ನಲ್ಲಿ ಸಾಕ್ಷ್ಯ ನಾಶ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಯೋಗೀಶ್ ಗೌಡ ಸಹೋದರ ಗುರುನಾಥ್ ಗೌಡ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. 

ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.  2016ರ ಜೂನ್ 15ರಂದು ನಡೆದಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದ ಕೇಸ್ ಧಾರವಾಡ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗಿತ್ತು. 

ಧಾರವಾಡ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿದಿರುವ ವಿನಯಕ್ ಕುಲಕರ್ಣಿಗೆ ಲೋಕಸಭಾ ಹೊಸ್ತಿಲಲ್ಲೇ ಯೋಗೀಶ್ ಗೌಡ ಕೊಲೆ ಪ್ರಕರಣ  ಮತ್ತೆ ಚಿಗುರೊಡೆದಿರುವುದು ಭಾರೀ ಹೊಡೆತಬಿದ್ದಿದೆ.

click me!