'ಪ್ರಧಾನಿ ಮೋದಿ ಏನಾದ್ರು ನನ್ನ ಕೈಗೆ ಸಿಕ್ಕರೆ ಕಾಲಲ್ಲಿರೋದು ತಗೊಂಡು ಹೊಡ್ತೀನಿ' ಎಂದು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡ, ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ.
ಚಿತ್ರದುರ್ಗ (ಮಾ.11): 'ಪ್ರಧಾನಿ ಮೋದಿ ಏನಾದ್ರು ನನ್ನ ಕೈಗೆ ಸಿಕ್ಕರೆ ಕಾಲಲ್ಲಿರೋದು ತಗೊಂಡು ಹೊಡ್ತೀನಿ' ಎಂದು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡ, ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ.
ಹಿರಿಯೂರಲ್ಲಿ ಸಮುದಾಯ ಭವನ ಉದ್ಘಾಟನೆ ವೇಳೆ ಮಾತಿನ ಭರದಲ್ಲಿ ಪ್ರಧಾನಿ ವಿರುದ್ಧ ಅವಾಚ್ಯವಾಗಿ ನಿಂದಿಸಿದ್ದ ಮಂಜುನಾಥ್. 'ಚುನಾವಣೆ ಬಂದಾಗ ಸಿಲಿಂಡರ್ ಬೆಲೆ 100 ಕಡಿಮೆ ಮಾಡಿದ್ದಾನೆ. ಈಗ್ಯಾಕಲೇ ಕಡಿಮೆ ಮಾಡ್ತೀಯಾ? ಅಂತಾ ಈ ದೇಶದ ಪ್ರಜೆಗಳಾಗಿ ನಾವೆಲ್ಲ ಪ್ರಧಾನಿಯನ್ನ ಪ್ರಶ್ನೆ ಮಾಡಬೇಕು. ಇಷ್ಟು ದಿನ 95 ಸಾವಿರ ಒಂದು ಲಕ್ಷ ಮುಖಕ್ಕೆ ಹೊಡೆದು ಕಿತ್ಕೊಂಡು ಈಗ 100 ಫ್ರೀ ಅಂತಿದ್ದಾನೆ. 465 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1200 ರೂ ಯಾಕೆ ಮಾಡಿದ ನಾವಿದನ್ನು ಪ್ರಶ್ನೆ ಮಾಡಬೇಕು ಲಕ್ಷಾಂತರ ರೂಪಾಯಿ ನಮ್ಮ ದೋಚಿ ಈಗ ಚುನಾವಣೆ ಕಡಿಮೆ ಮಾಡ್ತೀಯಾ. ನನ್ನ ಕೈಗೆ ಸಿಕ್ಕರೆ ಕಾಲಲ್ಲಿರೋದು ತಗೊಂಡು ಹೊಡ್ತೀನಿ ಎಂದು ನಿಂದಿಸಿದ್ದರು.
undefined
Loksabha election 2024: ಹೈಕಮಾಂಡ್ ನನಗೆ ಮತ್ತೊಮ್ಮೆ ಅವಕಾಶ ಕೊಡುತ್ತೆ: ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಜಿಎಸ್ ಮಂಜುನಾಥ ವಿರುದ್ಧ ಆಕ್ರೋಶ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಧಾನಿ ಹುದ್ದೆಗೆ ಅಪಮಾನ, ಶಾಂತಿ ಕದಡುವ ಹೇಳಿಕೆ ನೀಡಿರುವ ಜಿಎಸ್ ಮಂಜುನಾಥ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಚಿತ್ರದುರ್ಗ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ ಅವರು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಲೋಕಸಭೆ ಚುನಾವಣೆ 2024: 2 ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಗೆ ಸಂಪನ್ಮೂಲ ಅಡ್ಡಿ