'ನಾನು ಡಿಕೆ ಸುರೇಶ್ ಪತ್ನಿ..' Instagram ನಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಎಫ್ಐಆರ್

Published : May 01, 2025, 10:52 AM ISTUpdated : May 01, 2025, 11:48 AM IST
'ನಾನು ಡಿಕೆ ಸುರೇಶ್ ಪತ್ನಿ..' Instagram ನಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಎಫ್ಐಆರ್

ಸಾರಾಂಶ

ಮಾಜಿ ಸಂಸದ ಡಿಕೆ ಸುರೇಶ್(DK Suresh) ಅವರ ಪತ್ನಿ ಎಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆಯ ವಿರುದ್ಧ ರಾಮನಗರ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪವಿತ್ರ ಎಂಬ ಮಹಿಳೆಯ ವಿರುದ್ಧ ಡಿಕೆ ಸುರೇಶ್ ಅವರ ವಕೀಲ ಪ್ರದೀಪ್ ದೂರು ದಾಖಲಿಸಿದ್ದಾರೆ.

ರಾಮನಗರ (ಮೇ.1): ಮಾಜಿ ಸಂಸದ ಡಿಕೆ ಸುರೇಶ್(DK Suresh) ಅವರ ಪತ್ನಿ ಎಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆಯ ವಿರುದ್ಧ ರಾಮನಗರ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪವಿತ್ರ ಎಂಬ ಮಹಿಳೆಯ ವಿರುದ್ಧ ಡಿಕೆ ಸುರೇಶ್ ಅವರ ವಕೀಲ ಪ್ರದೀಪ್ ದೂರು ದಾಖಲಿಸಿದ್ದಾರೆ.

ಏಪ್ರಿಲ್ 8, 2025 ರಂದು ಆರೋಪಿ ಮಹಿಳೆ, ಡಿಕೆ ಸುರೇಶ್ ಅವರ ಫೋಟೊದೊಂದಿಗೆ ತನ್ನ ಫೋಟೊವನ್ನು ಎಡಿಟ್ ಮಾಡಿ, ತಾನು ಅವರ ಪತ್ನಿ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕೃತ್ಯವನ್ನು ದುರುದ್ದೇಶದಿಂದ ಮಾಡಿ, ಡಿಕೆ ಸುರೇಶ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ವಕೀಲ ಪ್ರದೀಪ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ ಮೇಲೆ ರಾಜಣ್ಣಂಗೆ ಪ್ರೀತಿ ಜಾಸ್ತಿ, ಪೆಟ್ಟು ಬಿದ್ದಷ್ಟು ಡಿಕೆಶಿಗೆ ಒಳಿತಾಗುವುದು: ಡಿಕೆ ಸುರೇಶ್

ರಾಮನಗರ ಸೆನ್ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯ ಕೃತ್ಯವನ್ನು ಖಂಡಿಸಲಾಗಿದೆ.
ತನಿಖೆಯ ಮುಂದಿನ ಹಂತದಲ್ಲಿ ಏನಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ಶಾಸಕರ ತೇಜೋವಧೆ ನಿಲ್ಲಿಸದಿದ್ದರೆ ಪೊರಕೆ ಚಳವಳಿ

ರಾಮನಗರ: ಶಾಸಕ ಇಕ್ಬಾಲ್ ಹುಸೇನ್ ಅವರ ಜನಪರ ಕಾರ್ಯಗಳನ್ನು ಸಹಿಸದ ಕೆಲ ಸಂಘಟನೆಗಳು ಅವರ ತೇಜೋವಧೆಯಲ್ಲಿ ತೊಡಗಿವೆ. ಇದನ್ನು ನಿಲ್ಲಿಸದಿದ್ದರೆ ಆ ಸಂಘಟನೆಗಳ ಮುಖಂಡರ ಮನೆ ಎದುರು ಪೊರಕೆ ಚಳವಳಿ ನಡೆಸಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಂಪುರ ನಾಗೇಶ್ ಎಚ್ಚರಿಕೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಗಳು ಯಶಸ್ವಿಯಾಗಿರುವುದನ್ನು ಕೆಲ ಸಂಘಟನೆಗಳಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಶಾಸಕ ಎಚ್.ಎ,ಇಕ್ಬಾಲ್ ಹುಸೇನ್‍ರವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.ಸಮಾಜದ ಎಲ್ಲಾ ವರ್ಗಗಳ ಮೇಲೆ ಅಪಾರ ವಿಶ್ವಾಸವನ್ನು ಹೊಂದಿರುವ ಶಾಸಕ ಇಕ್ಬಾಲ್ ಹುಸೇನ್‍ರವರು ದಲಿತ ಸಮುದಾಯದ ಬಗ್ಗೆಯೂ ಅತ್ಯಂತ ಕಳಕಳಿ ಹೊಂದಿರುವ ನಾಯಕ. ಅಂಬೇಡ್ಕರ್ ಜಯಂತಿ ಅಂಗವಾಗಿ ಆನೆಯ ಮೇಲೆ ಅಂಬೇಡ್ಕರ್ ಭಾವಚಿತ್ರವನ್ನಿರಿಸಿ ಮರವಣಿಗೆ ಮಾಡುವ ಮೂಲಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅಲ್ಲದೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಕೀರ್ತಿ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್‍ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಮಹಿಳಾ ದಿನಾಚರಣೆ ಜಿಲ್ಲಾಡಳಿತದ ಕಾರ್ಯಕ್ರಮವೋ ಅಥವಾ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದ ಮಹಿಳಾ ಕಾಂಗ್ರೆಸ್ ಸಮಾವೇಶವೋ ಎಂದು ಕೆಲವರು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೊರೆಯುವ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಶಾಸಕರು ಭಿನ್ನವಾಗಿ ಮಾಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರಿಗೆ ಬಾಗೀನದ ಹೆಸರಲ್ಲಿ ಸೀರೆಗಳನ್ನು ನೀಡಿದ್ದಾರೆ ಅದನ್ನು ಪ್ರಶ್ನಿಸಲು ನಿಮಗೆ ಯಾವ ನೈತಿಕತೆಯಿದೆ ಎಂದು ಸಂಘಟನೆಗಳ ಮುಖಂಡರನ್ನು ಪ್ರಶ್ನಿಸಿದರು.

ಸಹಸ್ರಾರು ಜನರು ಸೇರಿದ ಕಡೆ ಕೆಲವು ಸಣ್ಣಪುಟ್ಟ ದೋಷಗಳಾಗುವುದು ಸಹಜ. ಆತುರದಲ್ಲಿ ಬಲಗೈ ನೋವಿನ ಸಮಸ್ಯೆ ಮಾಡಿಕೊಂಡಿದ್ದ ಓರ್ವ ಮಹಿಳೆಗೆ ಶಾಸಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬೇರೆ ಯಾವ ಮಹಿಳೆಯೂ ನನಗೆ ತೊಂದರೆಯಾಗಿಲ್ಲ. ಆದರೆ ಜಿಲ್ಲಾಡಳಿತಕ್ಕೆ ಅವ್ಯವಸ್ಥೆ ಹಾಗೂ ಕಾರ್ಯಕ್ರಮದ ಸ್ಪಷ್ಟನೆ ಕೇಳಲು ಅವರ್ಯಾರು ಎಂದು ರಾಂಪುರ ನಾಗೇಶ್ ಕೇಳಿದರು.ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಗುವೊಂದು ಮೃತಪಟ್ಟಿದೆ ಎಂಬ ಸುಳ್ಳು ಸುದ್ಧಿಯನ್ನು ಕೆಲವರು ಹರಡುತ್ತಿದ್ದಾರೆ. ಈ ರೀತಿಯ ಯಾವ ಅವಘಡವೂ ಆಗಿಲ್ಲ, ಮಗುವಿನ ಪೋಷಕರು ಯಾವ ಠಾಣೆಯಲ್ಲೂ ದೂರು ಕೊಟ್ಟಿಲ್ಲ, ಒಂದು ವೇಳೆ ಘಟನೆ ಸಂಭವಿಸಿದ್ದರೇ ಆರೋಪ ಮಾಡುವವರು ದೃಢಪಡಿಸಲಿ ಎಂದು ಸವಾಲು ಹಾಕಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!