Bengaluru city: ಟ್ರಾಫಿಕ್ ನಿಯಮ ಪಾಲಿಸದ ಡೆಲಿವರಿ ಬಾಯ್‌್ಸಗೆ ಪೊಲೀಸ್‌ ಬಿಸಿ!

Published : Feb 21, 2023, 04:32 AM IST
Bengaluru city: ಟ್ರಾಫಿಕ್ ನಿಯಮ ಪಾಲಿಸದ ಡೆಲಿವರಿ ಬಾಯ್‌್ಸಗೆ ಪೊಲೀಸ್‌ ಬಿಸಿ!

ಸಾರಾಂಶ

) ಸಂಚಾರ ನಿಯಮ ಉಲ್ಲಂಘನೆ ಹಿನ್ನಲೆಯಲ್ಲಿ ಆ್ಯಪ್‌ ಆಧಾರಿತ ಆಹಾರ ಪೂರೈಕೆ ಹಾಗೂ ಸರಕು ಸೇವಾ ಕಂಪನಿಗಳ ಡೆಲವರಿ ಬಾಯ್‌ಗಳಿಗೆ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದು, ಈ ಸಂಬಂಧ ಸೋಮವಾರದಿಂದ ನಗರ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ.

ಬೆಂಗಳೂರು (ಫೆ.21) ಸಂಚಾರ ನಿಯಮ ಉಲ್ಲಂಘನೆ ಹಿನ್ನಲೆಯಲ್ಲಿ ಆ್ಯಪ್‌ ಆಧಾರಿತ ಆಹಾರ ಪೂರೈಕೆ ಹಾಗೂ ಸರಕು ಸೇವಾ ಕಂಪನಿಗಳ ಡೆಲವರಿ ಬಾಯ್‌ಗಳಿಗೆ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದು, ಈ ಸಂಬಂಧ ಸೋಮವಾರದಿಂದ ನಗರ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ.

ಮೊದಲ ದಿನವೇ ನೂರಕ್ಕೂ ಅಧಿಕ ಆಲ್‌ಲೈನ್‌ ಫುಡ್‌ ಡೆಲವರಿ ಬಾಯ್‌(Online Food Delivery Boy) ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಹಳೆ ಬಾಕಿ ವಸೂಲಿಗೆ ಕೆಲವರಿಗೆ ನೋಟಿಸ್‌ ನೀಡಿದ್ದಾರೆ.

 

ಫುಡ್ ಡೆಲಿವರಿ ಜೊತೆ ಗಾಂಜಾ ಡೆಲಿವರಿಗೂ ಸೈ, ಮೂವರು ಡೆಲಿವರಿ ಬಾಯ್ಸ್ ವಶಕ್ಕೆ!

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ವಿಶೇಷ ಆಯುಕ್ತ (ಸಂಚಾರ) ಡಾಎಂ.ಸಲೀಂ(Dr M Saleem) ಅವರು, ಸಂಚಾರ ನಿಯಮ ಉಲ್ಲಂಘನೆ(Violation of traffic rules) ಸಂಬಂಧ ಆ್ಯಪ್‌ ಆಧಾರಿತ ಆನ್‌ಲೈನ್‌ ಕಂಪನಿಗಳ ಸರಕು ಹಾಗೂ ಆಹಾರ ಪೂರೈಸುವವರ ಮೇಲೆ ಅಧಿಕ ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದರು.

ಅಲ್ಲದೆ ಇತ್ತೀಚೆಗೆ ಹಳೇ ಪ್ರಕರಣಗಳು ದಂಡ ಪಾವತಿಗೆ ನೀಡಿದ್ದ ಶೇ.50 ರಷ್ಟುವಿನಾಯತಿ ಅವಕಾಶವನ್ನು ಬಹುತೇಕ ಕಂಪನಿಗಳ ಡೆಲಿವರಿ ಬಾಯ್‌ಗಳು ಬಳಕೆ ಮಾಡಿಕೊಂಡಿಲ್ಲ. ಸಿಗ್ನಲ್‌ ಜಂಪ್‌, ಚಾಲನೆ ವೇಳೆ ಮೊಬೈಲ್‌ ಬಳಕೆ, ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರ ಹಾಗೂ ಹೆಲ್ಮಟ್‌ ಧರಿಸದೆ ಚಾಲನೆ ಸೇರಿದಂತೆ ಹಲವು ಸಂಚಾರ ನಿಯಮಗಳನ್ನು ಇವರು ಉಲ್ಲಂಘಿಸಿದ್ದಾರೆ ಎಂದು ಸಲೀಂ ತಿಳಿಸಿದರು.

ಹಲವು ಬಾರಿ ಆ್ಯಪ್‌ ಆಧಾರಿತ ಸರಕು ಸೇವಾ ಹಾಗೂ ಆಹಾರ ಪೂರೈಕೆ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಿ ಸಂಚಾರ ನಿಯಮ ಪಾಲಿಸುವಂತೆ ಸೂಚಿಸಲಾಗಿತ್ತು. ಹೀಗಿದ್ದರೂ ಆ ಕಂಪನಿಗಳ ಸಿಬ್ಬಂದಿ ಕಾನೂನು ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್‌ಗಳ ಮೇಲೆ ವಿಶೇಷ ಕಾರ್ಯಾರಣೆ ಹಮ್ಮಿಕೊಳ್ಳಲಾಗಿದೆ. ಸಂಚಾರ ಪೊಲೀಸರು ಡೆಲಿವರಿ ಬಾಯ್‌ಗಳ ವಾಹನಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿಪರಿಶೀಲಿಸುತ್ತಿದ್ದಾರೆ. ಹಳೆ ದಂಡ ಬಾಕಿ ಇದ್ದರೆ ಅವರಿಗೆ ನೋಟಿಸ್‌ ಕೊಡಲಾಗುತ್ತಿದೆ ಎಂದು ವಿಶೇಷ ಆಯುಕ್ತರು ತಿಳಿಸಿದರು.

ಡೆಲಿವರಿ ಬಾಯ್ಸ್‌ಗೆ ಫಸ್ಟ್‌ ಡೇ ಫಸ್ಟ್‌ ಶೋ ಫ್ರೀ 'Dear Sathya' ನಟ ಆರ್ಯನ್ ಸಂತೋಷ್‌ ಜೊತೆ ಚಿಟ್ ಟಾಟ್

ಸಂಚಾರ ನಿಯಮಗಳನ್ನು ಆ್ಯಪ್‌ ಆಧಾರಿತ ಆಹಾರ ಪೂರೈಕೆ ಹಾಗೂ ಸರಕು ಸೇವಾ ಕಂಪನಿಗಳ ಬಹುತೇಕ ಡೆಲವರಿ ಬಾಯ್‌ಗಳು ಪಾಲಿಸುತ್ತಿಲ್ಲ. ತಮ್ಮ ಗ್ರಾಹಕರಿಗೆ ವಸ್ತುಗಳನ್ನು ಪೂರೈಸುವ ಧಾವಂತದಲ್ಲಿ ಕಂಪನಿಗಳ ಸಿಬ್ಬಂದಿ ಕಾನೂನು ಉಲ್ಲಂಘನೆ ಸಹಿಸುವುದಿಲ್ಲ.

-ಡಾ ಎಂ.ಸಲೀಂ, ವಿಶೇಷ ಪೊಲೀಸ್‌ ಆಯುಕ್ತ (ಸಂಚಾರ).

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌