ತಮಿಳು ಖ್ಯಾತ ನಟ ವಿಜಯ್‌ರಿಂದ ಖರೀದಿಸಿದ್ದ ಕಾರಿಗೆ ದಂಡ

Kannadaprabha News   | Asianet News
Published : Sep 26, 2020, 08:31 AM IST
ತಮಿಳು ಖ್ಯಾತ ನಟ ವಿಜಯ್‌ರಿಂದ ಖರೀದಿಸಿದ್ದ ಕಾರಿಗೆ ದಂಡ

ಸಾರಾಂಶ

ಟಿಂಟೆಡ್‌ ಗ್ಲಾಸ್‌ ಹಾಕಿದ್ದ ಎಸ್‌ಯುವಿ ಕಾರಿಗೆ ದಂಡ| ತಮಿಳುನಾಡಿನ ನಟ ವಿಜಯ್‌ ಅವರಿಂದ ಕಾರು ಖರೀದಿಸಿದ್ದ ವಕೀಲ ಅನೀಶ್‌| ಟಿಂಟೆಡ್‌ ಗ್ಲಾಸ್‌ ತೆಗೆಸದೆ ಚಲಾಯಿಸುತ್ತಿದ್ದ ವಕೀಲ| 

ಬೆಂಗಳೂರು(ಸೆ.26): ಸಂಚಾರ ನಿಯಮ ಉಲ್ಲಂಘಿಸಿ ಟಿಂಟೆಡ್‌ ಗ್ಲಾಸ್‌ ಹಾಕಿದ್ದ ಆರೋಪದ ಮೇರೆಗೆ ವಕೀಲರೊಬ್ಬರ ಎಸ್‌ಯುವಿ ಕಾರಿಗೆ ಕೆ.ಆರ್‌.ಪುರ ಸಂಚಾರ ಠಾಣೆ ಪೊಲೀಸರು ಶುಕ್ರವಾರ ದಂಡ ವಿಧಿಸಿದ್ದಾರೆ.

ಕೆಲ ದಿನಗಳ ಹಿಂದೆ ವಕೀಲ ಅನೀಶ್‌ ತಮಿಳುನಾಡಿನಿಂದ ಬೆಂಗಳೂರಿಗೆ ಬರುವಾಗ ಇನ್‌ಸ್ಪೆಕ್ಟರ್‌ ಎಂ.ಎ.ಮಹಮ್ಮದ್‌ ಅವರಿಗೆ ಕಾರು ಸಿಕ್ಕಿಬಿದ್ದಿದೆ. ಎಸ್‌ಯುವಿ ಕಾರಿಗೆ ಟಿಂಟೆಡ್‌ ಗ್ಲಾಸ್‌ ಹಾಕಿದ್ದರು. ಕೆ.ಆರ್‌.ಪುರ ರೈಲು ನಿಲ್ದಾಣದ ಬಳಿ ಶುಕ್ರವಾರ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್‌ ಮಹಮ್ಮದ್‌, ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಟಿಂಟೆಡ್‌ ಗ್ಲಾಸ್‌ ದೃಢವಾಗಿದೆ. 

ಮೈಸೂರು ಲ್ಯಾಂಪ್ಸ್‌ ಕಾರ್ಖಾನೆ ಸ್ವತ್ತು ಮಾರಾಟದ ವಿರುದ್ಧ ಖಾಸಗಿ ನಿರ್ಣಯ

ಈ ತಪ್ಪಿಗೆ ಕಾರು ಓಡಿಸುತ್ತಿದ್ದ ಅನೀಶ್‌ಗೆ 500 ರು. ದಂಡ ವಿಧಿಸಿದ್ದಾರೆ. ಬಳಿಕ ಸ್ಥಳದಲ್ಲೇ ದಂಡ ಪಾವತಿಸಿ ಅವರು ತೆರಳಿದ್ದಾರೆ. ಇತ್ತೀಚಿಗಷ್ಟೇ ತಮಿಳುನಾಡಿನ ನಟ ವಿಜಯ್‌ ಅವರಿಂದ ವಕೀಲ ಅನೀಶ್‌ ಕಾರು ಖರೀದಿಸಿದ್ದರು. ಟಿಂಟೆಡ್‌ ಗ್ಲಾಸ್‌ ತೆಗೆಸದೆ ಚಲಾಯಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2028ಕ್ಕೆ ನಾನೇ ಸಿಎಂ, 11 ಜೆಸಿಬಿ ಪೂಜೆ ಮಾಡಿ ಪ್ರಮಾಣ ಸ್ವೀಕರಿಸ್ತೀನಿ, ಬೆಳಗಾವಿಯಲ್ಲಿ ಯತ್ನಾಳ್ ಅಬ್ಬರದ ಭಾಷಣ!
ಯತ್ನಾಳ್ ಭಾಷಣಕ್ಕೆ ಟಾಂಗ್ ಕೊಡಲು ಹೋಗಿ ಯಡವಟ್ಟು ಮಾಡಿಕೊಂಡ ಸಚಿವ ಸಂತೋಷ್ ಲಾಡ್!