ಬಸ್‌ಗಳಲ್ಲಿ ಸ್ತ್ರೀಯರ ‘ಶಕ್ತಿ ಪ್ರದರ್ಶನ’: ವೃದ್ಧೆಗೆ ಕಪಾಳಮೋಕ್ಷ ಮಾಡಿದ ಲೇಡಿ ಕಂಡಕ್ಟರ್

By Kannadaprabha News  |  First Published Jun 24, 2023, 10:48 AM IST

ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ನಿರ್ವಾಹಕಿಯೊಬ್ಬಳು ವೃದ್ಧೆಗೆ ಕಪಾಳಮೋಕ್ಷ ಮಾಡಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಬಸ್‌ ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿತ್ತು. ವೃದ್ಧೆ ಕುಂದಗೋಳದಲ್ಲಿ ಬಸ್‌ ಹತ್ತಿದ್ದಳು. 


ಹುಬ್ಬಳ್ಳಿ (ಜೂ.24): ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ನಿರ್ವಾಹಕಿಯೊಬ್ಬಳು ವೃದ್ಧೆಗೆ ಕಪಾಳಮೋಕ್ಷ ಮಾಡಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಬಸ್‌ ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿತ್ತು. ವೃದ್ಧೆ ಕುಂದಗೋಳದಲ್ಲಿ ಬಸ್‌ ಹತ್ತಿದ್ದಳು. ಮಾರ್ಗಮಧ್ಯೆ ಶರೇವಾಡ ಬಳಿ ನಿರ್ವಾಹಕಿ ಪ್ರಯಾಣಿಕರ ಬಳಿ ಟಿಕೆಟ್‌ ತೆಗೆಯುತ್ತಿದ್ದಾಗ ಸ್ವಲ್ಪ ಸರಿದುಕೊಳ್ಳುವಂತೆ ವೃದ್ಧೆಗೆ ಗದರಿದಳು ಎನ್ನಲಾಗಿದೆ. ಇದೇ ವಿಷಯವಾಗಿ ಮಾತಿಗೆ, ಮಾತು ಬೆಳೆದು ಇಬ್ಬರೂ ಪರಸ್ಪರ ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡರು. 

ಈ ವೇಳೆ, ವೃದ್ಧೆಗೆ ನಿರ್ವಾಹಕಿ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನು ನೋಡುತ್ತಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೃದ್ಧೆ ಎಂಬುದನ್ನು ನೋಡದೆ, ಪ್ರಯಾಣಿಕರ ಸಮ್ಮುಖದಲ್ಲಿಯೇ ಕಪಾಳ ಮೋಕ್ಷ ಮಾಡಿದ ನಿರ್ವಾಹಕಿಯ ಮೇಲೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tap to resize

Latest Videos

ಚಂದ್ರಗುತ್ತಿಯ ರೇಣುಕಾಂಬ ದೇವಾಲಯದ ಹುಂಡಿ​ಯ​ಲ್ಲಿ 70.60 ಲಕ್ಷ ಕಾಣಿಕೆ ಸಂಗ್ರಹ

ಸೀಟಿಗಾಗಿ ಇಬ್ಬರು ಮಹಿಳೆಯರ ಕಾದಾಟ: ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಿಂದಾಗಿ ಬಸ್‌ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದ್ದು, ಸೀಟಿಗಾಗಿ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ಶುಕ್ರವಾರ ಭಾಲ್ಕಿಯಿಂದ ಹಳ್ಳಿಖೇಡ್‌ಗೆ ಹೊರಟಿದ್ದ ಬಸ್‌ನಲ್ಲಿ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದ ಬಳಿ ಮಹಿಳೆಯರಿಬ್ಬರು ಕುಳಿತುಕೊಳ್ಳುವ ಸೀಟಿಗಾಗಿ ಕಿತ್ತಾಟ ನಡೆಸಿದ್ದಾರೆ. ಈ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಮಹಿಳೆಯರನ್ನು ಸಾರ್ವಜನಿಕರು ಸುಮ್ಮನಾಗಿಸಿದ್ದಾರೆ. ಮಹಿಳೆಯರು ಜಗಳ ಮಾಡಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಸ್‌ನಲ್ಲಿ ಮಹಿಳೆಯರ ರಶ್‌: ಬಸ್‌ನಲ್ಲಿ ವಿಪರೀತ ರಶ್‌ ಇದ್ದು, ಪ್ರಯಾಣಿಸಲು ಸಾಧ್ಯವಾಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಬಸ್‌ ತಡೆದು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಿಂದಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ, ಶುಕ್ರವಾರ ಬೆಳಗ್ಗೆ ಕೆರಕಲಮಟ್ಟಿಯಿಂದ ಬಾದಾಮಿಗೆ ತೆರಳುವ ಬಸ್‌ನಲ್ಲಿ ರಶ್‌ ಇತ್ತು. ಈ ಬಸ್‌ ತಾಲೂಕಿನ ಶೆಲ್ಲಿಕೇರಿ, ನೀರ ಬೂದಿಹಾಳ, ಗಂಗನಬೂದಿಹಾಳ, ಯಂಡಿಗೇರಿ, ಕೆರಕಲಮಟ್ಟಿಗ್ರಾಮಗಳ ಮೂಲಕ ಬಾದಾಮಿಗೆ ಹೋಗುತ್ತದೆ. 

ಗಂಡನಿಂದ ಚಾಕು ಇರಿತ: ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಮಹಿಳೆಗೆ ಪೊಲೀಸರಿಂದ ಆರೈಕೆ

ರಶ್‌ನಿಂದಾಗಿ ವಿದ್ಯಾರ್ಥಿಗಳಿಗೆ ನಿಲ್ಲಲೂ ಜಾಗವಿರಲಿಲ್ಲ. ಈ ವೇಳೆ, ಆಕ್ರೋಶಗೊಂಡು ವಿದ್ಯಾರ್ಥಿಗಳು ಸುಮಾರು 1 ತಾಸು ಬಸ್‌ ತಡೆದರು. ಈ ಭಾಗದಲ್ಲಿ ಸಾಕಷ್ಟುಬಸ್‌ಗಳಿಲ್ಲದೆ ನಮಗೆ ತೊಂದರೆಯಾಗುತ್ತಿದೆ. ನಿತ್ಯ ಬೆಳಗ್ಗೆ ಶಾಲೆ, ಕಾಲೇಜುಗಳಿಗೆ ತೆರಳಲು, ಸಂಜೆ ವಾಪಸ್‌ ಊರಿಗೆ ಹೋಗಲು ತೊಂದರೆಯಾಗುತ್ತಿದೆ. ಹೆಚ್ಚಿನ ಬಸ್‌ ಬಿಡಿ ಎಂದು ಮನವಿ ಮಾಡಿದರು. ಬಳಿಕ, ಬಸ್‌ ಚಾಲಕ ಮತ್ತು ನಿರ್ವಾಹಕ ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಮನವೊಲಿಸಿದ ಬಳಿಕ ಬಸ್‌ ತೆರಳಲು ಅನುವು ಮಾಡಿಕೊಟ್ಟರು.

click me!