
ಬೆಂಗಳೂರು(ಸೆ.16): ಚಿತ್ರರಂಗದಲ್ಲಿನ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಣಿ ದ್ವಿವೇದಿ ಪರ ಕಾನೂನು ಹೋರಾಟಕ್ಕೆ ಹಣ ಹೊಂದಿಸಲು ಆಕೆಯ ಪೋಷಕರು ಇದೀಗ ಫ್ಲ್ಯಾಟ್ ಮಾರಾಟಕ್ಕೆ ಇಟ್ಟಿದ್ದಾರೆ. ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಫ್ಲ್ಯಾಟ್‌ನ್ನು ಮಾರಾಟಕ್ಕೆ ಇಡಲಾಗಿದೆ.
"
ಪರಪ್ಪನ ಅಗ್ರಹಾರ ಮಹಿಳಾ ಕೈದಿಗಳ ಕೋಣೆಯಲ್ಲಿ ರಾಗಿಣಿ : ಕೈದಿ ನಂಬರ್..?
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಅವರು, ‘ಫ್ಲ್ಯಾಟ್ ಮಾರಾಟಕ್ಕೆ ಇಟ್ಟಿದ್ದೇವೆ ಎಂದು ಹೇಳಲು ನಮಗೆ ಯಾವುದೇ ಮುಜುಗರವಿಲ್ಲ. ಕಾನೂನು ಹೋರಾಟಕ್ಕೆ ಹಣ ಒದಗಿಸಬೇಕು. ಕಠಿಣ ಪರಿಸ್ಥಿತಿಯಲ್ಲಿ ಫ್ಲ್ಯಾಟ್ ಮಾರಾಟ ಮಾಡುತ್ತಿರುವುದು ನಮಗೆ ಅವಮಾನವಲ್ಲ’ ಎಂದರು.
ಪರಪ್ಪನ ಅಗ್ರಹಾರ ಮಹಿಳಾ ಕೈದಿಗಳ ಕೋಣೆಯಲ್ಲಿ ರಾಗಿಣಿ : ಕೈದಿ ನಂಬರ್..?
‘ಮನೆ ಮಾರುವ ವಿಷಯನ್ನು ಆನ್‌ಲೈನ್‌ನಲ್ಲಿ ಹಾಕಿದ್ದೇವೆ. ನಮಗೆ ನಮ್ಮ ಮಗಳನ್ನು ಕಾಪಾಡುವುದು ಮುಖ್ಯ. ಫ್ಲ್ಯಾಟ್ ಕೊಳ್ಳಲು ಬ್ಯಾಂಕ್ ಸಾಲ ಪಡೆಯಲಾಗಿದೆ. ಇನ್ನೂ 1ಕೋಟಿ ರು.ಗಳಷ್ಟುಸಾಲ ಬಾಕಿ ಇದೆ. ಪುತ್ರಿ ಹೊರತರಲು ಏನು ಬೇಕಾದರೂ ಮಾಡುತ್ತೇವೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ