
ಚಿಕ್ಕಮಗಳೂರು (ಜ.4): ತನ್ನ ತಾಯಿಯನ್ನ ಮನೆಗೆ ಕಳಿಸದ್ದಕ್ಕೆ ಕೋಪಗೊಂಡು ಮಾವನ ಮೇಲೆ(ತಾಯಿಯ ಸಹೋದರ) ಮನಸೋ ಇಚ್ಛೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ವಿಜಯಲಕ್ಶ್ಮಿ ಥಿಯೇಟರ್ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಭರತ್, ಬಂಧಿತ ಆರೋಪಿ. ಮಹಾಲಿಂಗನ ದಾಳಿಗೊಳಗಾದ ವ್ಯಕ್ತಿ. ಕಡೂರಲ್ಲಿ ಆಟೋ ಡ್ರೈವರ್ ವೃತ್ತಿ ಮಾಡಿಕೊಂಡಿದ್ದ ಆರೋಪಿ ಭರತ್. ಇತ್ತೀಚೆಗೆ ಕೌಂಟುಂಬಿಕ ಕಾರಣಗಳಿಂದ ಗಂಡನ ಜೊತೆ ಜಗಳ ಮಾಡಿ ತವರು ಮನೆ ಸೇರಿದ್ದ ತಾಯಿ. ಮನೆಗೆ ಮರಳಿ ಬಾರದ ಹಿನ್ನೆಲೆ ತಾಯಿಗೆ ಬರುವಂತೆ ತಿಳಿಸಿದ್ದ. ಹಲವು ಬಾರಿ ತಿಳಿಸಿದರೂ ತಾಯಿ ಬಂದಿರಲಿಲ್ಲ. ಕೊನೆಗೆ ನನ್ನ ತಾಯಿಯನ್ನ ಕಳಿಸುವಂತೆ ಮಾವ (ತಾಯಿಯ ಅಣ್ಣ) ಮಹಾಲಿಂಗನಿಗೂ ತಿಳಿಸಿದ್ದ. ಆದರೆ ಮಾವ ಕಳಿಸಲು ಒಪ್ಪಿರಲಿಲ್ಲ. 'ನನ್ನ ತಂಗಿಗೆ ತಂದೆ-ಮಗ ಸೇರಿ ಹಿಂಸೆ ನೀಡ್ತಿರಾ? ನಿನ್ನೂ ನಿನ್ನ ಅಪ್ಪನನ್ನೂ ಜೈಲಿಗೆ ಹಾಕಿಸ್ತೇನೆ ಎಂದಿದ್ದ ಮಾವ ಮಹಾಲಿಂಗ. ಅಂತೆಯೇ ಡಿ.31 ರಂದು ರಾಮಸ್ವಾಮಿ(ತಂದೆ),ಭರತನ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ದರ್ಗಾ ಲೈಟ್ ವಿವಾದ: ಚಿಕ್ಕಮಗಳೂರಲ್ಲಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ, ಕೆಲಕಾಲ ಬಿಗುವಿನ ವಾತಾವರಣ!
ದೂರು ನೀಡಿದ್ದರಿಂದ ಮಾವನ ಮೇಲೆ ಕೋಪಗೊಂಡಿದ್ದ ಭರತ್, ಜನೆವರಿ 2 ರಂದು ನಡುರಸ್ತೆಯಲ್ಲೇ ಮಚ್ಚಿನಿಂದ ಮಾವನ ಮೇಲೆ ಆರೋಪಿ ಭರತ್ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾನೆ. ಏಕಾಏಕಿ ದಾಳಿಯಿಂದ ಗಂಭೀರ ಗಾಯಗೊಂಡಿರುವ ಮಹಾಲಿಂಗನ ಸ್ಥಿತಿ ಚಿಂತಾಜನಕವಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಭರತ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು. ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ