Latest Videos

ಕೋಲಾರ: ನಕಲಿ ದಾಖಲೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

By Kannadaprabha NewsFirst Published Aug 29, 2023, 11:15 PM IST
Highlights

ಜಿಲ್ಲಾದ್ಯಂತ ಒತ್ತುವರಿಯಾಗಿರುವ ಸಾವಿರಾರು ಎಕರೆ ಅರಣ್ಯ ಭೂಮಿ ಹಾಗೂ ಕೆರೆಗಳಿಗೆ ದಾಖಲೆಗಳನ್ನು ಸೃಷ್ಟಿಮಾಡಿ ಕೊಟ್ಟಿರುವ ಕಂದಾಯ, ಸರ್ವೇ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕೆಲಸದಿಂದ ವಜಾಗೊಳಿಸಬೇಕೆಂದು ರೈತಸಂಘದಿಂದ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮೇ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.

ಶ್ರೀನಿವಾಸಪುರ (ಆ.29) :  ಜಿಲ್ಲಾದ್ಯಂತ ಒತ್ತುವರಿಯಾಗಿರುವ ಸಾವಿರಾರು ಎಕರೆ ಅರಣ್ಯ ಭೂಮಿ ಹಾಗೂ ಕೆರೆಗಳಿಗೆ ದಾಖಲೆಗಳನ್ನು ಸೃಷ್ಟಿಮಾಡಿ ಕೊಟ್ಟಿರುವ ಕಂದಾಯ, ಸರ್ವೇ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕೆಲಸದಿಂದ ವಜಾಗೊಳಿಸಬೇಕೆಂದು ರೈತಸಂಘದಿಂದ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮೇ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.

ಶ್ರೀನಿವಾಸಪುರ ತಾಲೂಕಿನಾದ್ಯಂತ ಒಂದು ವಾರದಿಂದ ಅರಣ್ಯಾಧಿಕಾರಿಗಳ ಕಾರ್ಯಾಚರಣೆಯಿಂದ ಒತ್ತುವರಿದಾರರಲ್ಲಿ ನಡುಕ ಒಂದು ಕಡೆ ಉಂಟಾದರೆ ಮತ್ತೊಂದು ಕಡೆ ಹತ್ತಾರು ವರ್ಷಗಳ ಹಿಂದೆ ಲಕ್ಷಾಂತರ ಹಣವನ್ನು ಲಂಚವಾಗಿ ಪಡೆದು ಅರಣ್ಯ ಭೂಮಿ, ಕೆರೆ ಅಂಗಳಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿರುವ ಕಂದಾಯ ಸರ್ವೇ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದು ಸಾವಿರಾರು ಜನ ರೈತರು ಬದುಕು ಬೀದಿಗೆ ಬೀಳಲು ಕಂದಾಯ ಸರ್ವೇ ಅಧಿಕಾರಿಗಳೇ ಮೂಲ ಕಾರಣಕರ್ತರೆಂದು ರೈತಸಂಘ ಮರಗಲ್‌ ಶ್ರೀನಿವಾಸ್‌ ಉಪವಿಭಾಗಾಧಿಕಾರಿಗೆ ವಿವರಿಸಿದರು.

ಕೋಲಾರ: ಅರಣ್ಯ ಇಲಾಖೆಯ ತೆರವು ಕಾರ್ಯಚರಣೆ ವಿರುದ್ದ ಹೊಗಳಗೆರೆ ಗ್ರಾಮಸ್ಥರು ಆಕ್ರೋಶ

ಭೂಮಿ ಒತ್ತುವರಿ ಮಾಡಬೇಡಿ

ಬರಗಾಲದಲ್ಲಿ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಬೆಳೆದಂತಹ ಬೆಳೆಯನ್ನು ನಿರ್ಧಾಕ್ಷಿಣ್ಯವಾಗಿ ನಾಶಪಡಿಸಿ ಅರಣ್ಯಾಧಿಕಾರಿಗಲು ಜಮೀನು ವಶಪಡಿಸಿಕೊಂಡಿದ್ದಾರೆ. ಮುಂದಿನ ಭವಿಷ್ಯ ನೋಡದೆ ಸರ್ಕಾರಿ ಅರಣ್ಯ ಹಾಗೂ ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡರೆ ಎಂದಾದರೂ ತೆರವು ಮಾಡಲೇಬೇಕು ಎಂಬುದನ್ನು ರೈತರು ಸಹ ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.

ಅರಣ್ಯ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಒತ್ತುವರಿ ಕಾರ್ಯಾಚರಣೆ ಮುಂದುವರಿಸಬೇಕು. ಸ್ಥಳೀಯ ಮಾಜಿ ಶಾಸಕರು ಹಾಗೂ ಅವರ ಬೆಂಬಲಿಗರು ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿಯನ್ನು ಸಹ ತೆರವುಗೊಳಿಸುವ ಮುಖಾಂತರ ಎಲ್ಲರಿಗೂ ಒಂದೇ ನ್ಯಾಯ ಎಂಬುದನ್ನು ಅಧಿಕಾರಿಗಳು ಮಾಡಿ ತೋರಿಸಬೇಕೆಂದು ಆಗ್ರಹಿಸಿದರು.

ಕ್ರಮ ಕೈಗೊಳ್ಳುವುದಾಗಿ ಎಸಿ ಭರವಸೆ

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ, ಅರಣ್ಯ ಭೂಮಿ ಕೆರೆ ಜಮೀನುಗಳಿಗೆ ಅಕ್ರಮ ದಾಖಲೆ ಸೃಷ್ಟಿಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾ ತಹಸೀಲ್ದಾರರಿಗೆ ನೋಟಿಸ್‌ ನೀಡಿ ವರದಿ ತರಿಸಿಕೊಂಡು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.

ಕೋಲಾರ ಮತ್ತೊಂದು ಮರ್ಯಾದಾ ಹತ್ಯೆ: ಅನ್ಯ ಜಾತಿ ಯುವಕನ ಪ್ರೀತಿಸಿದ ಮಗಳನ್ನೇ ಕೊಲೆಗೈದ ವೆಂಕಟೇಶ್‌ಗೌಡ

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌, ಮಂಗಸಂದ್ರ ವೆಂಕಟೇಶಪ್ಪ, ಕುವ್ವಣ್ಣ, ನರಸಿಂಹಯ್ಯ, ನಾರಾಯಣಗೌಡ, ಗೋವಿಂದಪ್ಪ, ಯಾರಂಘಟ್ಟಗಿರೀಶ್‌ ಇದ್ದರು.

click me!