ಗೃಹ ಲಕ್ಷ್ಮೀ ನೋಂದಣಿಯಲ್ಲಿ ಹಾವೇರಿ ಜಿಲ್ಲೆ ಫಸ್ಟ್‌

By Kannadaprabha News  |  First Published Aug 29, 2023, 10:25 PM IST

ಕುಟುಂಬದ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರು. ನೇರ ವರ್ಗಾವಣೆಯ ಸರ್ಕಾರದ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗೆ ಆ.30ರಂದು ಚಾಲನೆ ದೊರೆಯಲಿದ್ದು, ಈ ಯೋಜನೆಯಡಿ ನೋಂದಾಯಿಸಿಕೊಂಡವರಲ್ಲಿ ಹಾವೇರಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿವೆ.


ಹಾವೇರಿ (ಆ.29) :  ಕುಟುಂಬದ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರು. ನೇರ ವರ್ಗಾವಣೆಯ ಸರ್ಕಾರದ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗೆ ಆ.30ರಂದು ಚಾಲನೆ ದೊರೆಯಲಿದ್ದು, ಈ ಯೋಜನೆಯಡಿ ನೋಂದಾಯಿಸಿಕೊಂಡವರಲ್ಲಿ ಹಾವೇರಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿವೆ.

ರಾಜ್ಯದಲ್ಲಿರುವ 1,33,61,915 ಚೀಟಿದಾರರಲ್ಲಿ 1,10,95,092 ಜನರು ಗೃಹ ಲಕ್ಷ್ಮಿ ಯೋಜನೆ(Gruhalakshmi scheme)ಗೆ ನೋಂದಣಿ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 3,94,090 ಪಡಿತರ ಚೀಟಿಗಳಿದ್ದು, ಈ ಪೈಕಿ 3,48,824(ಶೇ.88) ಫಲಾನುಭವಿಗಳು ಗೃಹ ಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಶೇ.68 ನೋಂದಣಿಯಾಗಿದ್ದು, ಕೊನೆಯ ಸ್ಥಾನದಲ್ಲಿದೆ. ಚಿತ್ರದುರ್ಗ ಜಿಲ್ಲೆ ಕೂಡ ಹಾವೇರಿ ಜಿಲ್ಲೆಯಲ್ಲಷ್ಟೇ, ಶೇ.88ರಷ್ಟು ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲಿರುವ 405281 ಪಡಿತರ ಚೀಟಿದಾರ ಪೈಕಿ 355774 ಜನರು ಗೃಹ ಲಕ್ಷ್ಮಿ ನೋಂದಣಿ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಶೇ.88ರಷ್ಟು ರೇಶನ್‌ ಕಾರ್ಡ್‌ದಾರರು ಈ ಯೋಜನೆ ಫಲಾನುಭವಿಗಳಾಗಲು ನೋಂದಾಯಿಸಿಕೊಂಡಿದ್ದಾರೆ. ಮಂಡ್ಯದ 4,78,678 ಕಾರ್ಡುದಾರರ ಪೈಕಿ 419747 ಜನರು ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

Tap to resize

Latest Videos

undefined

ಶಕ್ತಿ ಯೋಜನೆಯ ಉಚಿತ ಬಸ್‌ಗಳನ್ನು ಕಿತ್ತುಕೊಂಡ ಗೃಹಲಕ್ಷ್ಮಿ:ನಾಳೆ ಊರಿಗೆ ಹೋಗೋರಿದ್ರೆ ಕ್ಯಾನ್ಸಲ್‌ ಮಾಡಿ

ಉತ್ತಮ ಪ್ರತಿಕ್ರಿಯೆ:

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 317032, ನಗರ ಪ್ರದೇಶದಲ್ಲಿ 77758 ಪಡಿತರ ಚೀಟಿದಾರರಿದ್ದು, ಗ್ರಾಮೀಣ ಪ್ರದೇಶದ2,83757 ಹಾಗೂ ನಗರದ ಪ್ರದೇಶದ 65067 ಪಡಿತರ ಚೀಟಿದಾರರು ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಾಗಲು ಹೆಸರು ನೋಂದಾಯಿಸಿಕೊಂಡಿದ್ದಾರೆ.

ತಾಲೂಕುವಾರು ವಿವರದಂತೆ ಬ್ಯಾಡಗಿ ತಾಲೂಕಿನಲ್ಲಿ 31,931, ಹಾನಗಲ್ ತಾಲೂಕಿನಲ್ಲಿ 58,691, ಹಾವೇರಿ ತಾಲೂಕಿನಲ್ಲಿ 59,338, ಹಿರೇಕೆರೂರು ತಾಲೂಕಿನಲ್ಲಿ 26,837, ರಾಣಿಬೆನ್ನೂರ ತಾಲೂಕಿನಲ್ಲಿ 68,749, ರಟ್ಟಿಹಳ್ಳಿ ತಾಲೂಕಿನಲ್ಲಿ 27,268, ಸವಣೂರ ತಾಲೂಕಿನಲ್ಲಿ 35,213 ಹಾಗೂ ಶಿಗ್ಗಾಂವಿಯಲ್ಲಿ 41,096 ಸೇರಿ 3,49,123 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ.

254 ಸ್ಥಳಗಳಲ್ಲಿ ಉದ್ಘಾಟನೆ:

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ, ನಗರ ಪ್ರದೇಶದ ವಾರ್ಡ್‌ವಾರು ಒಳಗೊಂಡಂತೆ 254 ಸ್ಥಳಗಳಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಸಮಾರಂಭದ ಸಿದ್ಧತೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡುವ ಮೂಲಕ ಮುಖ್ಯಮಂತ್ರಿಗಳು ಆ.30 ರಂದು ಮೈಸೂರಿನಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಸಮಾರಂಭದ ನೇರ ಪ್ರಸಾರಕ್ಕೆ ಜಿಲ್ಲೆಯ 254 ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯ 223 ಗ್ರಾಪಂಗಳು, 9 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ 31 ವಾರ್ಡ್‌ಗಳು ಸೇರಿದಂತೆ ಜಿಲ್ಲೆಯ 254 ಸ್ಥಳಗಳಲ್ಲಿ ಗೃಹಲಕ್ಷ್ಮೀ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಬ್ಯಾಡಗಿ ಕ್ಷೇತ್ರದ ಕಬ್ಬೂರ ಪಂಚಾಯಿತಿ ಹಾಗೂ ರಾಣಿಬೆನ್ನೂರ ನಗರಸಭೆ ವ್ಯಾಪ್ತಿಯಲ್ಲಿ ಆಯಾ ತಾಲೂಕಾ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಗೃಹಲಕ್ಷ್ಮಿಯರ ಮನೆಮುಂದೆ ಅರಳಿದ 'ನಾ ಯಜಮಾನಿ' ರಂಗೋಲಿ: ನಾಳೆ ಮಹಿಳೆಯರ ಖಾತೆಗೆ 2000 ರೂ. ವರ್ಗ

ಗೃಹಲಕ್ಷ್ಮೀ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಹಬ್ಬದ ಸಂಭ್ರಮದ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. 254 ಸ್ಥಳಗಳಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಗುತ್ತಿದೆ. ಜತೆಗೆ ಅಲ್ಲಿ ಸಿಎಂ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಗೆ ಈಗಾಗಲೇ ಎಲ್ಲ ಸಿದ್ಧತೆ ಮಾಡಲಾಗಿದೆ.

-ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

click me!