Karnataka: ರೈತರಿಗೆ ಸಿಗುತ್ತಿರುವ ಸೌಲಭ್ಯ ನೇಕಾರರಿಗೂ ವಿಸ್ತರಣೆ: ಸಚಿವ ಮುನೇನಕೊಪ್ಪ

By Kannadaprabha NewsFirst Published Jan 17, 2022, 6:00 AM IST
Highlights

*   ರೈತ ಮಕ್ಕಳಿಗೆ ಸ್ಕಾಲರ್‌ಶಿಪ್‌, ಕಿಸಾನ್‌ ಸಮ್ಮಾನ್‌ ರೀತಿ ನೆರವು
*   ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ನೀಡಲು ನಿರ್ಧಾರ
*   ರಾಜ್ಯದಲ್ಲಿ 12 ಲಕ್ಷ ನೇಕಾರರು: ಎಲ್ಲರಿಗೂ ಸಿಗುತ್ತಾ ಸೌಲಭ್ಯ?
 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜ.17): ನೇಕಾರ ಸಮುದಾಯಕ್ಕೆ(Weavers Community) ರಾಜ್ಯ ಸರ್ಕಾರ(Government of Karnataka) ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ. ನೇಕಾರರನ್ನು ರೈತರಂತೆ(Farmers) ಪರಿಗಣಿಸಿ ಅನ್ನದಾತನಿಗೆ ಸಿಗುವ ಸೌಲಭ್ಯಗಳನ್ನು ಅವರಿಗೂ ಕೊಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೇಕಾರರ ಬಹುವರ್ಷಗಳ ಬೇಡಿಕೆಗೆ ಸರ್ಕಾರ ಅಸ್ತು ಎಂದಿದ್ದು, ಆ ಸಮುದಾಯದಲ್ಲಿ ಸಂತಸದ ಹೊನಲು ಹೊಮ್ಮಿಸಿದಂತಾಗಿದೆ.

ಹಗಲಿರಳು ದುಡಿದರೂ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನೇಕಾರರದ್ದು. ಬಟ್ಟೆನೇಯ್ದು ಜನರ ಮಾನ ಕಾಪಾಡುವ ನೇಕಾರನ ಪರಿಸ್ಥಿತಿ ಮಾತ್ರ ಇಂದಿಗೂ ಅಯೋಮಯವೇ ಆಗಿದೆ. ಸರ್ಕಾರ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್‌ಶಿಪ್‌, ‘ಕಿಸಾನ್‌ ಸಮ್ಮಾನ್‌’ನಡಿ ಆರ್ಥಿಕವಾಗಿ ನೆರವು ನೀಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರವನ್ನೂ ಕೊಡುತ್ತದೆ. ನಮಗೂ ರೈತರ ಮಾದರಿಯಲ್ಲೇ ಸೌಲಭ್ಯ ಕಲ್ಪಿಸಿ ಎಂಬ ಬೇಡಿಕೆ ನೇಕಾರರದ್ದಾಗಿತ್ತು. ಇದೀಗ ನೇಕಾರರ ಬೇಡಿಕೆಗೆ ಸರ್ಕಾರ ಬಹುತೇಕ ಅಸ್ತು ಎಂದಿದೆ.

Dharwad: 34 ಖಾಸಗಿ ಶಾಲೆಗಳ ಮಾನ್ಯತೆ ರದ್ದು?

ರೈತರ ಮಕ್ಕಳಿಗೆ ನೀಡುವ ಮಾದರಿಯಲ್ಲೇ ನೇಕಾರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸ್ಕಾಲರ್‌ಶಿಪ್‌(Scholarship), ನೇಕಾರರು ಆತ್ಮಹತ್ಯೆ(Suicide) ಮಾಡಿಕೊಂಡರೆ ಅವರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು. ಕಿಸಾನ್‌ ಸಮ್ಮಾನ ರೀತಿ ನೇಕಾರ ಸಮ್ಮಾನ ಮೂಲಕ ಸಹಾಯಧನ ನೀಡಬೇಕೆಂಬ ಬೇಡಿಕೆ ಇತ್ತು. ಇವುಗಳ ಬಗ್ಗೆ ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಅಧಿವೇಶನದ ವೇಳೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿತ್ತು. ನೇಕಾರ ಸಮುದಾಯದ ಹಲವು ಮುಖಂಡರು, ಮಾಜಿ ಮಂತ್ರಿಗಳು, ಸ್ವಾಮೀಜಿಗಳು, ಸರ್ಕಾರವನ್ನು ಒತ್ತಾಯಿಸಿದ್ದರು. ಸರ್ಕಾರ ಈ ಬಗ್ಗೆ ಚರ್ಚಿಸಿ ಇದೀಗ ನೇಕಾರರ ಬೇಡಿಕೆ ಈಡೇರಿಸಲು ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಸರ್ಕಾರದಿಂದ ಅಂತಿಮ ಆದೇಶ ಹೊರಬೀಳುವುದೊಂದೆ ಬಾಕಿಯಿದೆ ಎಂದು ಮೂಲಗಳು ತಿಳಿಸುತ್ತವೆ.

ಕೈಮಗ್ಗ, ಪವರ್‌ ಲೂಮ್‌ ಎಲ್ಲ ಸೇರಿ ರಾಜ್ಯದಲ್ಲಿ 12 ಲಕ್ಷ ಜನರು ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಕುಟುಂಬಗಳಿಗೂ ಈ ಸೌಲಭ್ಯಗಳು ದೊರೆಯುತ್ತವೆಯೋ ಅಥವಾ ಕೈಮಗ್ಗ ನೇಕಾರರಿಗಷ್ಟೇ ಈ ಸೌಲಭ್ಯ ಲಭ್ಯವಾಗುತ್ತದೋ ಎಂಬುದನ್ನು ಸರ್ಕಾರದ ಆದೇಶ ಬಂದ ಮೇಲೆ ಗೊತ್ತಾಗಲಿದೆ.

ನೇಕಾರರಲ್ಲಿ ಸಂತಸ:

ನೇಕಾರರ ಬಹುವರ್ಷದ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿರುವುದು ನೇಕಾರರಲ್ಲಿ ಸಂತಸವನ್ನುಂಟು ಮಾಡಿದೆ. ಸಮ್ಮಾನ್‌ ಯೋಜನೆ, ಸ್ಕಾಲರ್‌ಶಿಪ್‌ ದೊರೆಯಲಿದೆ. ಜತೆಗೆ ನೇಕಾರರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರವೂ ದೊರೆಯಲಿದೆ. ಇದು ನೇಕಾರರಿಗೆ ಅನುಕೂಲ ಕಲ್ಪಿಸಿದಂತಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಉಸಿರಾಡುವಂತಾಗುತ್ತದೆ ಎಂಬ ಅಭಿಪ್ರಾಯ ನೇಕಾರರದ್ದು.

Dharwad: ಬ್ರಿಟಿಷ್‌ ಸರ್ಕಾರದಲ್ಲೇ ಸ್ಥಾಪಿತವಾದ ಡಿಮ್ಹಾನ್ಸ್‌ ಮೇಲ್ದರ್ಜೆಗೇರಿಸುವುದ್ಯಾವಾಗ?

ನಿರ್ಧಾರ ಕೈಗೊಂಡಾಗಿದೆ

ಹೌದು, ನೇಕಾರರನ್ನು ರೈತರೆಂದು ಭಾವಿಸಿ ಅವರಿಗೂ ಸ್ಕಾಲರ್‌ಶಿಪ್‌, ನೇಕಾರ ಸಮ್ಮಾನ್‌ ರೀತಿ ನೆರವು ನೀಡಲಾಗುವುದು. ನೇಕಾರರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಂತಿಮ ಆದೇಶ ಹೊರಡಿಸುವುದೊಂದೆ ಬಾಕಿಯಿದೆ ಅಂತ ಜವಳಿ, ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ(Shankar Patil Munenkoppa) ತಿಳಿಸಿದ್ದಾರೆ. 

ಹಣವಿಲ್ಲದೆ ಮೇವಿನ ಬೀಜದ ಕಿಟ್‌ಗಳಿಗೆ ಬರ

ಕಳೆದ ವರ್ಷ ಅತಿಯಾದ ಮಳೆಯಿಂದಾಗಿ(Rain) ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಪೈರು ನಾಶವಾಗಿದ್ದು(Corp Loss), ಈ ಬಾರಿ ಜಾನುವಾರುಗಳಿಗೆ(Livestock) ಮೇವಿನ ಕೊರತೆ ಕಾಡುವ ಸಂಭವವಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಮೇವಿನ ಬೀಜದ ಮಿನಿ ಕಿಟ್‌ ವಿತರಿಸುವುದು ಅಗತ್ಯವಾಗಿದೆ. ಕಿಟ್‌ ವಿತರಿಸಲು ಪಶು ಸಂಗೋಪನಾ ಇಲಾಖೆಯೇನೋ ಸಿದ್ಧವಾಗಿದೆ. ಆದರೆ ಅನುದಾನದ ಕೊರತೆ ಕಾಡುತ್ತಿದೆ. ಮತ್ತೊಂದೆಡೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ)ಯಡಿ ಕೇಂದ್ರ ಸರ್ಕಾರ(Central Government) ಕಳೆದೆರಡು ವರ್ಷದಿಂದ ಅನುದಾನವನ್ನೇ ನೀಡಿಲ್ಲದಿರುವುದೂ ಸಂಕಷ್ಟ ಉಂಟುಮಾಡಿದೆ.
 

click me!