ರಾಜ್ಯಾದ್ಯಂತ ಅಬಕಾರಿ ಇಲಾಖೆಯೂ ಒಂದು ದಿನದ ಸಾಂದರ್ಭಿಕ ಲೈಸನ್ಸ್ ನೀಡಲು ಮುಂದಾಗಿದೆ. ಪಾರ್ಟಿ ಆಯೋಜನೆ ಮಾಡುವ ಆಯೋಜಕರಿಗೆ ಅಬಕಾರಿ ಇಲಾಖೆಯ ನಿಯಮದಂತೆ ಒಂದು ದಿನದ ಲೈಸೆನ್ಸ್ ನೀಡಲು ಇದೀಗ ಇಲಾಖೆ ಪ್ರಕಟಣೆ ಹೊರಡಿಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ.25): ಹೊಸ ವರ್ಷ ಆಚರಣೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಇಯರ್ ಎಂಡ್, ಹೊಸ ವರ್ಷ ಆಚರಣೆ, ಕ್ರಿಸ್ಮಸ್ ಹಬ್ಬದ ಅಂಗವಾಗಿ ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ಅಬಕಾರಿ ಇಲಾಖೆಯ ಮೂಲಕ ಪ್ಲಾನ್ ಮಾಡಿದೆ. ವರ್ಷಾಂತ್ಯದಲ್ಲಿ ಸರ್ಕಾರದಿಂದ ತೆರಿಗೆ ಹೆಚ್ಚಿಸಿಕೊಳ್ಳಲು ಹೊಸ ಪ್ಲಾನ್ ನಡೆದಿದೆ, ಅಬಕಾರಿ ಇಲಾಖೆಯಲ್ಲಿನ ಸಿಎಲ್ 5 ಬಾರ್ ಲೈಸೆನ್ಸ್ ಕೊಡಲು ಸರ್ಕಾರ ಮುಂದಾಗಿದೆ.
undefined
ಒಂದು ದಿನ ಲೈಸನ್ಸ್ :
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮಾತ್ರವಲ್ಲ ರಾಜ್ಯಾದ್ಯಂತ ಅಬಕಾರಿ ಇಲಾಖೆಯೂ ಒಂದು ದಿನದ ಸಾಂದರ್ಭಿಕ ಲೈಸನ್ಸ್ ನೀಡಲು ಮುಂದಾಗಿದೆ. ಪಾರ್ಟಿ ಆಯೋಜನೆ ಮಾಡುವ ಆಯೋಜಕರಿಗೆ ಅಬಕಾರಿ ಇಲಾಖೆಯ ನಿಯಮದಂತೆ ಒಂದು ದಿನದ ಲೈಸೆನ್ಸ್ ನೀಡಲು ಇದೀಗ ಇಲಾಖೆ ಪ್ರಕಟಣೆ ಹೊರಡಿಸಿದೆ.
ಹೆಬ್ಬಾಳ್ಕರ್ ಆಣೆ ಪ್ರಮಾಣದ ಸವಾಲು: ಸವದತ್ತಿ ಯಲ್ಲಮನ ಬಳಿ ಹರಕೆ ಹೊತ್ತಿದ್ದೇನೆ, ಸಿ.ಟಿ ರವಿ
ಅಬಕಾರಿ ನಿಯಮದಂತೆ ಸಾಂದರ್ಭಿಕ ಲೈಸನ್ಸ್ ನೀಡಲು ಇಲಾಖೆ ಮುಂದಾಗಿದೆ. ಈ ಮೂಲಕ ಕ್ರಿಸ್ ಮಸ್, ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ತೆರಿಗೆ ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡಿದೆ. ಒಂದು ದಿನದ ಸಾಂದರ್ಭಿಕ ಬಾರ್ ಲೈಸೆನ್ಸ್ ಕೊಡುವುದು ಇದರ ಉದ್ದೇಶವಾಗಿದೆ. ಇಲಾಖೆಯಲ್ಲಿ ಅವಕಾಶ ಇರುವ ಹಿನ್ನೆಲೆಯಲ್ಲಿ ಲೈಸೆನ್ಸ್ ಕೊಡಲಾಗುತ್ತಿದೆ. ಲೈಸೆನ್ಸ್ ಪಡೆಯಲು ಆಸಕ್ತರು ಇಲಾಖೆಯ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಪಾರ್ಟಿ ನಡೆಯುವ ಜಾಗ ನಕ್ಷೆ, ಸ್ಥಳೀಯ ಆಡಳಿತದ ಅನುಮತಿ ಪತ್ರವನ್ನು ಇಲಾಖೆಗೆ ನೀಡಿದರೆ ಇಲಾಖೆಯು ಲೈಸೆನ್ಸ್ ನೀಡುತ್ತಿದೆ.
ಯಾರ ರಾಜಕಾರಣ ಹೇಗೆ ಶುರುವಾಯ್ತು, ಪಾತಕಿಗಳು ಯಾರು ಅನ್ನೋದು ಜನಕ್ಕೆ ಗೊತ್ತು :
ಕಾಫಿನಾಡಿನಲ್ಲಿ ಹೆಚ್ಚಿನ ಬೇಡಿಕೆ :
ಪ್ರವಾಸಿಗರ ಪಾಲಿನ ಸ್ವರ್ಗ ಎನಿಸಿರುವ ಚಿಕ್ಕಮಗಳೂರಿನಲ್ಲಿ ಸಿಎಲ್ 5 ಲೈಸೆನ್ಸ್ ಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.24 ಗಂಟೆಯ ಈ ಲೈಸೆನ್ಸ್ ಗೆ 12 ಸಾವಿರ ರೂಪಾಯಿಗಳ ದರ ನಿಗದಿ ಪಡಿಸಲಾಗಿದೆ. ಇಂದು ಕ್ರಿಸ್ಮಸ್ ಹಬ್ಬದ ಆಚರಣೆ ನಿಮಿತ್ತ ಆರು ಅರ್ಜಿಗಳು ಈಗಾಗಲೇ ಅಬಕಾರಿ ಇಲಾಖೆಗೆ ಸಲ್ಲಿಕೆಯಾಗಿವೆ, ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಸಾಂದರ್ಭಿಕ ಲೈಸನ್ಸ್ ನೀಡಲು ಇಲಾಖೆ ಮುಂದಾಗಿದೆ.
ಹೊಸ ವರ್ಷವನ್ನು ಮಾಗಿಯ ಚಳಿ ಜೊತೆಗೆ ಪ್ರವಾಸಿಗರ ಸ್ವರ್ಗ ಎನಿಸಿರುವ ಚಿಕ್ಕಮಗಳೂರಿನಲ್ಲಿ ಆಚರಣೆ ಮಾಡಲು ಪ್ರವಾಸಿಗರು ಪ್ಲಾನ್ ಹಾಕಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಒಂದು ತಿಂಗಳ ಹಿಂದೆಯೇ ಪ್ರವಾಸಿಗರು ರೂಮ್ ಬುಕಿಂಗ್ ಮಾಡಿಕೊಳ್ಳುತ್ತಾರೆ. ಇದನ್ನು ಅಂದಾಜಿಸಿರುವ ಇಲಾಖೆಯು ಹೋಂ ಸ್ಟೇ , ರೆಸಾರ್ಟ್ ಗಳಿಗೆ ಲೈಸೆನ್ಸ್ ನೀಡಿದರೆ ನಕಲಿ ಮಧ್ಯ ಸೇರಿದಂತೆ ಹೊರ ರಾನ್ಯದ ಮದ್ಯವನ್ನು ತಡೆಗಟ್ಟಬಹುದೆನ್ನುವುದು ಇಲಾಖೆಯ ಲೆಕ್ಕಾಚಾರವಾಗಿದೆ. ಅದಕ್ಕಾಗಿ ರೆಸ್ಟೋರೆಂಟ್, ಹೋಂ ಸ್ಟೇ ರೆಸಾರ್ಟ್, ಹೋಟೆಲ್, ಪಾರ್ಟಿ ಮಾಡುವ ಜಾಗಗಳಿಗೆ ಲೈಸೆನ್ಸ್ ನೀಡಲು ಮುಂದಾಗಿರುವ ಇಲಾಖೆಯ ನಿಯಮಕ್ಕೆ ಮೂಲ ಸನ್ನದುದಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.