ಮಹಿಳಾ ಆಯೋಗ ವಿರೋಧಕ್ಕೂ ಡೋಂಟ್ ಕೇರ್ , 569 ಮದ್ಯದ ಲೈಸೆನ್ಸ್ ಇ-ಹರಾಜು; ಸರ್ಕಾರದ ಖಜಾನೆಗೆ ಬರಲಿದೆಯೇ ₹1,000 ಕೋಟಿ?

Kannadaprabha News, Ravi Janekal |   | Kannada Prabha
Published : Dec 22, 2025, 02:14 PM IST
Excise Department to conduct e auction of 569 licenses

ಸಾರಾಂಶ

ಮದ್ಯ ಮಾರಾಟ ಇಳಿಕೆಯಿಂದಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿರುವ ಅಬಕಾರಿ ಇಲಾಖೆಯು, ರಾಜ್ಯದ 477 ವೈನ್‌ ಶಾಪ್‌ ಹಾಗೂ 92 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಲೈಸೆನ್ಸ್‌ಗಳನ್ನು ಇ-ಹರಾಜು ಮಾಡಲು ಅಧಿಸೂಚನೆ ಹೊರಡಿಸಿದೆ. 

ಬೆಂಗಳೂರು (ಡಿ.22): ಮದ್ಯ ಮಾರಾಟ ಇಳಿಕೆ ಬೆನ್ನಲ್ಲೇ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾದ ಅಬಕಾರಿ ಇಲಾಖೆ, ರಾಜ್ಯದ 569 ವೈನ್‌ ಸ್ಟೋರ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಲೈಸೆನ್ಸ್‌ ಹರಾಜಿಗೆ ಮುಂದಾಗಿದೆ.

477 ವೈನ್‌ ಶಾಪ್‌ ಹಾಗೂ 92 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಲೈಸೆನ್ಸ್‌ಗಳನ್ನು ಇ-ಹರಾಜು ಮಾಡಲು ಅಬಕಾರಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ಹರಾಜು ‘ಪ್ರಕ್ರಿಯೆ’ಯಲ್ಲೇ ಸಾವಿರ ಕೋಟಿ ರುಪಾಯಿಗೂ ಅಧಿಕ ಆದಾಯವನ್ನು ಅಬಕಾರಿ ಇಲಾಖೆ ನಿರೀಕ್ಷಿಸಿದೆ. ಇ-ಹರಾಜಿಗೆ ಮದ್ಯ ಮಾರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾದರೂ ಇದನ್ನು ಪರಿಗಣಿಸದೇ ಇಲಾಖೆ ಹರಾಜಿಗೆ ಸನ್ನದ್ಧವಾಗಿದೆ.

ಪರಿಶಿಷ್ಟ ಜಾತಿಯ ‘ಎ’ ಮತ್ತು ‘ಬಿ’ ವರ್ಗಕ್ಕೆ ತಲಾ ಶೇ.6, ‘ಸಿ’ ವರ್ಗಕ್ಕೆ ಶೇ.5 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.7ರಷ್ಟು ಮೀಸಲಾತಿಯನ್ನು ಹರಾಜಿನಲ್ಲಿ ಕಲ್ಪಿಸಲಾಗಿದೆ. ಡಿ.22ರಿಂದ ಬಿಡ್‌ ನೋಂದಣಿ ಆರಂಭವಾಗಲಿದೆ. ಜ.13 ರಿಂದ 20 ರವರೆಗೂ ನೇರ ಹರಾಜು ನಡೆಯಲಿದೆ. ಇ-ಹರಾಜು ಮತ್ತು ಬಿಡ್ಡಿಂಗ್‌ಗಾಗಿ ನೋಂದಾಯಿಸಿಕೊಳ್ಳುವ ವಿಧಾನ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಮಹಿಳಾ ಆಯೋಗ ವಿರೋಧ:

ಇತ್ತೀಚೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಮದ್ಯದಂಗಡಿಗಳು ಹೆಚ್ಚುತ್ತಿವೆ. ಇದರಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು’ ಎಂದು ಪತ್ರ ಬರೆದ ಬೆನ್ನಲ್ಲೇ 569 ವೈನ್‌ ಸ್ಟೋರ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಸನ್ನದು ಹರಾಜಿಗೆ ಅಧಿಸೂಚನೆ ಹೊರಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ರಿಸ್‌ಮಸ್‌ ಹಿನ್ನಲೆ, ಕೆಸ್ಸಾರ್ಟಿಸಿ ಪ್ರಯಾಣಿಕರಿಗೆ ಗುಡ್‌ನ್ಯೂಸ್‌!
ಆಟವಾಡುತ್ತಿದ್ದ 6 ವರ್ಷದ ಮಗು ಮೊದಲ ಮಹಡಿಯಿಂದ ಬಿದ್ದು ಗಂಭೀರ ಗಾಯ, ಪ್ರಾಣಾಪಾಯದಿಂದ ಪಾರು!