ಸೇವೆ ತ್ಯಜಿಸಿ ವರ್ಷದ ಬಳಿಕ ಮಾಜಿ ಐಪಿಎಸ್ ಭಾಸ್ಕರ್ ರಾವ್ ರಾಜೀನಾಮೆ ಅಂಗೀಕಾರ!

By Ravi JanekalFirst Published Dec 13, 2022, 10:07 PM IST
Highlights
  • ಕೊನೆಗೂ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ರಾಜಿನಾಮೆ ಅಂಗೀಕಾರ.
  • ಅಧಿಕೃತವಾಗಿ ಭಾಸ್ಕರ್ ರಾವ್ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸದ ಸರ್ಕಾರ..
  • ಕಳೆದ ವರ್ಷ ಸೆಪ್ಟೆಂಬರ್ 2021 ರಲ್ಲಿ ಅರ್ಜಿ ಸಲ್ಲಿಸಿದ್ದರು.
  • ಇದುವರೆಗೂ ರಾಜೀನಾಮೆಯನ್ನು ಅಂಗೀಕರಿಸಿರಲಿಲ್ಲ.

ಬೆಂಗಳೂರು (ಡಿ.13): ಭಾರತೀಯ ಪೊಲೀಸ್ ಸೇವೆ (IPS) ಮಾಜಿ ಅಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಕಳೆದ ವರ್ಷ ಸೆಪ್ಟೆಂಬರ್ 2021 ರಲ್ಲಿ ಅವರ ಸ್ವಯಂ ನಿವೃತ್ತಿಗೆ (VRS) ಅರ್ಜಿ ಸಲ್ಲಿಸಿಸಿದ್ದರು. ಅದಾಗಿ ಒಂದು ವರ್ಷ ಕಳೆದರೂ ಸರ್ಕಾರ ರಾಜಿನಾಮೆಯನ್ನು ಪ್ರಕ್ರಿಯೆ ಆರಂಭಿಸಿರಲಿಲ್ಲ. ಹೀಗಾಗಿ, ರಾಜೀನಾಮೆ ಅಂಗೀಕಾರ ಆಗದೇ ಅವರು ರಾಜಕೀಯ ಸೇರಿ ವಿವಿಧ ಕಾರ್ಯಗಳನ್ನು ಕೈಗೊಳ್ಳಲು ಸಮಸ್ಯೆ ಉಂಟಾಗಿತ್ತು. ಆದರೆ, ಈಗ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಕೆಲವೇ ತಿಂಗಳು ಬಾಕಿ ಇರುವಂತೆ ಭಾಸ್ಕರ್‌ ರಾವ್‌ ಅವರು ಸಲ್ಲಿಸಿದ್ದ ವಿಆರ್‌ಎಸ್‌ ಅರ್ಜಿಯ ರಾಜ್ಯ ಸರ್ಕಾರ ಅಂಗೀಕರಿಸಿದೆ. ಈ ಮೂಲಕ ಅಧಿಕೃತವಾಗಿ ಭಾಸ್ಕರ್ ರಾವ್ ಅವರನ್ನು ಪೊಲೀಸ್‌ ಸೇವೆಯಿಂದ ಬಿಡುಗಡೆಗೊಳಿಸಿದೆ. 

ಇನ್ನು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದ ವೇಳೆ ಹಲವು ರಾಜಕೀಯ ಮುಖಂಡರೊಂದಿಗೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದರೂ, ನಗರದ ಜನತೆಯೊಂದಿಗೆ ಭಾರಿ ಆತ್ಮೀಯತೆ ಬೆಳೆಸಿಕೊಂಡಿದ್ದರು. ಇದು ಅವರು ಚುನಾವಣೆ ಸೇರುವ ಮುನ್ಸೂಚನೆಯನ್ನು ನೀಡಿತ್ತು. ಇದು ಸತ್ಯವೆನ್ನುವಂತೆ ಕೆಲವೇ ದಿನಗಳಲ್ಲಿ ಪೊಲೀಸ್‌ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಆಮ್‌ ಆದ್ಮಿ ಪಕ್ಷ ಸೇರ್ಪಡೆಯಾದರು. ಪ್ರಸ್ತುತ ಭಾಸ್ಕರ್ ರಾವ್  ಆಮ್ ಆದ್ಮಿ ಪಕ್ಷದ (AAP) ಉಪಾಧ್ಯಕ್ಷರಾಗಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈ ವರ್ಷದ ಏಪ್ರಿಲ್‌ನಲ್ಲಿ ಆಪ್ ಗೆ ಸೇರ್ಪಡೆಗೊಂಡಿದ್ದರು. ಅವರು ಜೂನ್‌ನಲ್ಲಿ ಕರ್ನಾಟಕದ ಎಎಪಿಯ ಉಪಾಧ್ಯಕ್ಷರಾಗಿ (ವಿಪಿ) ನೇಮಕಗೊಂಡರು.

ಜೆಸಿಬಿ’ ಪಕ್ಷಗಳ ಆಡಳಿತ ಸರಿಯಾಗಿದ್ದಿದ್ದರೆ ಆಪ್‌ ಅಗತ್ಯ ಇರಲಿಲ್ಲ

ಸರ್ಕಾರದ ವಿರುದ್ಧವೇ ವಾಗ್ದಾಳಿ:

ಇತ್ತೀಚೆಗೆ ಭಾಸ್ಕರ್‌ ರಾವ್‌ ಅವರು ಬೆಳಗಾವಿಗೆ ತೆರಳಿದ್ದ ವೇಳೆ ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯ ಬಿಜೆಪಿ ಸರ್ಕಾರದ ಸಚಿವರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಾಮೀಲಾಗಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. ಸಚಿವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಏಕೆ ಹಾಕಲಾಗುತ್ತಿದೆ ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಸ್ಪಷ್ಟಪಡಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿದ್ದ ಬಿಟ್‌ ಕಾಯಿನ್‌ ಹಗರಣದ ಪ್ರಕರಣ ಎಲ್ಲಿಗೆ ಬಂತು ಎಂದು ಪ್ರಶ್ನಿಸಿದ ಅವರು, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಇಲ್ಲಿಯವರೆಗೂ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಬಿಜೆಪಿ ನಾಯಕರು ಸರ್ಕಾರ, ಸಿಎಂಗೆ ಅಗೌರವ ತೋರುತ್ತಿದ್ದಾರೆ: ಭಾಸ್ಕರ್ ರಾವ್ ಆಕ್ರೋಶ

click me!