ದೇವನಹಳ್ಳಿಯಲ್ಲಿ ನಿಯೋಜಿಸುತ್ತಿರುವ ಜಿ20 ಶೃಂಗಸಭೆಗೆ ರಾಜ್ಯ ರೈತ ಸಂಘ ವಿರೋಧ

Published : Dec 13, 2022, 05:49 PM IST
ದೇವನಹಳ್ಳಿಯಲ್ಲಿ ನಿಯೋಜಿಸುತ್ತಿರುವ ಜಿ20 ಶೃಂಗಸಭೆಗೆ ರಾಜ್ಯ ರೈತ ಸಂಘ ವಿರೋಧ

ಸಾರಾಂಶ

ಜಾಗತಿಕವಾಗಿ ಭಾರತಕ್ಕೆ ಜಿ.20 ಶೃಂಗಸಭೆಯ ಅತಿಥ್ಯ ಸಿಕ್ಕಿದ್ದು, ಡಿ. 13 ರಿಂದ 17  ರವರೆಗೆ ನಡೆಯಲಿದೆ. ಶೃಂಗಸಭೆಯನ್ನು ಬೆಂಗಳೂರಿನ ದೇವನಹಳ್ಳಿ ಮತ್ತು ರಾಷ್ಟ್ರಾದಾದ್ಯಂತ ನಿಯೋಜಿಸುತ್ತಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ನಡೆಸಿದೆ.

ದಾವಣಗೆರೆ (ಡಿ.13): ಜಾಗತಿಕವಾಗಿ ಭಾರತಕ್ಕೆ ಜಿ.20 ಶೃಂಗಸಭೆಯ ಅತಿಥ್ಯ ಸಿಕ್ಕಿದ್ದು, ಡಿ. 13 ರಿಂದ 17  ರವರೆಗೆ ನಡೆಯಲಿದೆ. ಶೃಂಗಸಭೆಯನ್ನು ಬೆಂಗಳೂರಿನ ದೇವನಹಳ್ಳಿ ಮತ್ತು ರಾಷ್ಟ್ರಾದಾದ್ಯಂತ ನಿಯೋಜಿಸುತ್ತಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ವಿರೋಧಿಸುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದರು. ಈ ಹಿಂದೆ ಜಿ-20 ರಾಷ್ಟ್ರಗಳ  ಶೃಂಗ ಸಭೆಯನ್ನು ಏರ್ಪಡಿಸುವ ಪೂರ್ವಭಾವಿ ಸಭೆಯಲ್ಲಿ ಭಾರತದ 75 ನೇ ವರ್ಷದ ಸ್ವಾತಂತ್ರೋತ್ಸವದ ವರ್ಷಾಚರಣೆಯಲ್ಲಿ ಭಾರತಕ್ಕೆ ಆತಿಥ್ಯವನ್ನು ಏರ್ಪಡಿಸುವ ಅವಕಾಶದ ಪ್ರಧಾನಿಯವರ ಕೋರಿಕೆಯ ಮೇರೆಗೆ ಡಿ. 13 ರಿಂದ 17 ರವರೆಗೆ ಇದೇ ವರ್ಷ ದೇವನಹಳ್ಳಿಯಲ್ಲಿ ಸಕಲ ಬಂದೋಬಸ್ತ್‌  ಏರ್ಪಡಿಸಿರುವುದು ಕನ್ನಡಿಗರ ದೌರ್ಭಾಗ್ಯದ ಸಂಗತಿಯಾಗಿದೆ. ಇದನ್ನು ವಿರೋಧಿಸಿ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಂದೆ  ಕಾರ್ಯಕರ್ತರು ಕಪ್ಪು ಪಟ್ಟಿಯನ್ನು ಧರಿಸಿ  ಪ್ರತಿಭಟಿಸುವ ಮೂಲಕ ಖಂಡಿಸಿದರು.

ದೇಶದ ಪ್ರಧಾನಮಂತ್ರಿಗಳು ಈವರೆಗೆ ಅಂಬಾನಿ, ಆದಾನಿಯವರನ್ನು ಆರ್ಥಿಕವಾಗಿ ಬಲಪಡಿಸಿದ ಮುಂದುವರಿದ ಭಾಗವಾಗಿ ಅಂಬಾನಿ, ಆದಾನಿ, ಪತಂಜಲಿ  ಆರ್ಥಿಕ ವ್ಯವಹಾರಗಳ ಮುಖಾಂತರ ಜಾಗತಿಕವಾಗಿ ಭಾರತವನ್ನು ಆರ್ಥಿಕ ದಿವಾಳಿತನಕ್ಕೆ ತಳ್ಳುವಂತಹ ಹುನ್ನಾರಗಳೇ ಈ ಶೃಂಗ ಸಭೆಗಳಾಗಿವೆ. ಕೋವಿಡ್-19 ಕಾಲದಲ್ಲಿ ದೇಶದ ಜಿಡಿಪಿ ನೆಲಕಚ್ಚಿದ್ದು ವಿಶ್ವಕಂಡ ಸಂಗತಿ. ಈಗಲೂ ಚೇತರಿಸಿಕೊಳ್ಳಲಾರದ ಭಾರತದಲ್ಲಿ ಶೇ.85 ರಷ್ಟು ಜಿಡಿಪಿ ಚೇತರಿಕೆ ಕಂಡಿರುವ ಮತ್ತು ಶೇ. 1 ರಷ್ಟು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ  ನಮ್ಮಂತಹ ರಾಷ್ಟ್ರಗಳ  ಆರ್ಥಿಕ ಚೇತರಿಕೆಯ ಉದ್ದೇಶ ಹೊಂದಿದ್ದಾರೆ ಎಂಬುದು ಗಾಳಿಗೋಪುರವಾಗಿದೆ ಎಂದರು.

ಭಾರತಕ್ಕೆ ಜಿ20 ಶೃಂಗಸಭೆ ಅಧ್ಯಕ್ಷತೆ; ಐತಿಹಾಸಿಕ ಗೋಳಗುಮ್ಮಟಕ್ಕೆ ದೀಪಾಲಂಕಾರ

ನಮ್ಮ ದೇಶ ಸ್ವಾವಲಂಬಿಯಾಗಿ ಬದುಕುವ ಎಲ್ಲಾ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿರುವುದರಿಂದ  ಈ ಎಲ್ಲವನ್ನು ನಮ್ಮವರ ಮುಖಾಂತರವೇ ಕೊಳ್ಳೆ ಹೊಡೆಯುವ ಜಿ-20 ರಾಷ್ಟ್ರಗಳ  ಒಳ ಹುನ್ನಾರಗಳನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮನವರಿಕೆ ಮಾಡಿಕೊಂಡಿದೆ. 'ಒಂದು ಭೂಮಿ-ಒಂದು ಕುಟುಂಬ-ಒಂದು ಭವಿಷ್ಯ' ಎಂಬ ಘೋಷವಾಕ್ಯವನ್ನು ಮತ್ತು ಅದರ ಒಳ ಮರ್ಮಗಳನ್ನು ಅರ್ಥೈಸಿಕೊಂಡಾಗ ಭಾರತದಂತಹ ವೈವಿಧ್ಯಮಯವಾದ ಭಾಷೆ, ಸಂಸ್ಕೃತಿ ಜನಜೀವನ ಮುಂತಾದ ಅನೇಕತೆಯಲ್ಲಿನ ಏಕತೆಗೆ ಧಕ್ಕೆ ತರುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

G20 Summit: ಜಿ20 ಅಧ್ಯಕ್ಷತೆ ಅವಧಿ ಭಾರತಕ್ಕೆ ನಿರ್ಣಾಯಕ

ಆದ ಕಾರಣ ದೇವನಹಳ್ಳಿಯಲ್ಲಿ ಆಯೋಜಿಸಿರುವ ಶೃಂಗ ಸಭೆಯನ್ನು ಖಂಡಿಸುತ್ತಾ ಮುಂದಿನ ವರ್ಷ ದೇಶದ ನಾನಾ ಭಾಗದಲ್ಲಿ ಆಯೋಜಿಸಿರುವ ಶೃಂಗ ಸಭೆಗಳನ್ನು ರೈತ ಸಂಘ ವಿರೋಧಿಸುತ್ತದೆ  ಎಂದು ಈ ಮುಖಾಂತರ ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳು, ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ರಾಜ್ಯ ಕಾರ್ಯಾಧ್ಯಕ್ಷರಾದ ಸಿದ್ದವೀರಪ್ಪ ಹೊನ್ನೂರು ಮುನಿಯಪ್ಪ ಜಿಲ್ಲಾ ಕಾರ್ಯಧ್ಯಕ್ಷ  ರುದ್ರಮುನಿ ಇನ್ನಿತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ