ಗೂಡ್ಸ್‌ ಆಟೋದಲ್ಲಿ ಚಾಲಕನ ಪಕ್ಕ ಕುಳಿತಿದ್ದರೂ ವಿಮೆ ಹಣ: ಹೈಕೋರ್ಟ್

By Kannadaprabha NewsFirst Published Oct 23, 2024, 10:12 AM IST
Highlights

ಸರಕು ಆಟೋ ರಿಕ್ಷಾದಲ್ಲಿ ಸೀಟಿನ ಸಾಮರ್ಥ ಒನ್ ಪ್ಲಸ್ ಒನ್ ಆಗಿರುವುದರಿಂದ ಆಟೋ ಬಳಕೆ ಮಾಡುವ ಕಂಪನಿಯ ಉದ್ಯೋಗಿ ಪ್ರಯಾಣಿಸಲು ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್‌ 

ವೆಂಕಟೇಶ್ ಕಲಿಪಿ 

ಬೆಂಗಳೂರು(ಅ.23):  ಸರಕು ಸಾಗಣೆ ಆಟೋ ರಿಕ್ಷಾದಲ್ಲಿ ಚಾಲಕ ಬಿಟ್ಟು ಮತ್ಯಾರೂ ಪ್ರಯಾಣಿಸಲು ಅವಕಾಶವಿಲ್ಲ ಎಂಬ ಕಾರಣ ಮುಂದೊಡ್ಡಿ ಅಪಘಾತದಲ್ಲಿ ಅಂಗವಿಕಲನಾಗಿದ್ದಕ್ಕೆ ಆಟೋ ರಿಕ್ಷಾ ಬಳಕೆ ಮಾಡುವ ಕಂಪನಿಯ ಉದ್ಯೋಗಿಗೆ ಪರಿಹಾರ ನಿರಾಕರಿಸಿದ್ದ ವಿಮಾ ಕಂಪನಿಯ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್, ದುಪ್ಪಟ್ಟು ಮೊತ್ತ ನೀಡಲು ಆದೇಶಿಸಿದೆ. 

Latest Videos

ಸರಕು ಆಟೋ ರಿಕ್ಷಾದಲ್ಲಿ ಸೀಟಿನ ಸಾಮರ್ಥ ಒನ್ ಪ್ಲಸ್ ಒನ್ ಆಗಿರುವುದರಿಂದ ಆಟೋ ಬಳಕೆ ಮಾಡುವ ಕಂಪನಿಯ ಉದ್ಯೋಗಿ ಪ್ರಯಾಣಿಸಲು ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿದೆ. ಗ್ಯಾಸ್‌ ವಿತರಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಬಂಧ ಶೇ.100ರಷ್ಟು ಉದ್ಯೋಗ ನಿರ್ವಹಣೆ ಸಾಮರ್ಥ್ಯ ಕಳೆದುಕೊಂಡ ವ್ಯಕ್ತಿಯೋರ್ವನಿಗೆ ಅಪಘಾತ ಪರಿಹಾರ ಕ್ಷೇಮು ನ್ಯಾಯಾಧಿಕರಣ ನಿಗದಿಪಡಿಸಿದ್ದ 8 ಲಕ್ಷ ರು. ಪರಿಹಾರ ಮೊತ್ತವನ್ನು 18 ಲಕ್ಷ ರು.ಗೆ ಹೈಕೋರ್ಟ್ ಏರಿಸಿದೆ. ಪರಿಹಾರ ಮೊತ್ತಕ್ಕೆ ಅರ್ಜಿ ಸಲ್ಲಿಸಿದ ದಿನದಿಂದ ಹಣ ಪಾವತಿ ಮಾಡುವವರೆಗೂ ಶೇ.6ರಷ್ಟು ಬಡ್ಡಿನೀಡಬೇಕು ಎಂದು ಆಟೋಗೆ ವಿಮಾ ಪಾಲಿಸಿ ನೀಡಿದ್ದ ಕಂಪನಿಗೆ ನಿರ್ದೇಶಿಸಿದೆ. 

ಮುಸ್ಲಿಂ ಪುರುಷನ 3ನೇ ಮದುವೆ ನೋಂದಣಿಗೆ ಬಾಂಬೆ ಹೈಕೋರ್ಟ್ ಅಸ್ತು

ಪ್ರಕರಣದ ವಿವರ: 

ಉಡುಪಿ ಜಿಲ್ಲೆಯ ಮನೂರು ಗ್ರಾಮದ ನಿವಾಸಿ ರಮೇಶ್ ಪೂಜಾರಿ (49), ಗ್ಯಾಸ್ ವಿತರಣೆ ಏಜೆನ್ಸಿ ಯೊಂದರಲ್ಲಿ ಗ್ಯಾಸ್ ವಿತರಿಸುವ ಕೆಲಸ ಮಾಡುತ್ತಿದ್ದರು. 2005ರಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆಗಾಗಿ ತೆಕ್ಕಟ್ಟೆಯಿಂದ ಕುಂದಾಪುರ ಮಾರ್ಗವಾಗಿ ಸರಕು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕನ ಅತಿ ವೇಗ, ನಿರ್ಲಕ್ಷ್ಯ ಮತ್ತು ಅವಸರದ ಚಾಲನೆಯಿಂದ ಆಟೋ ಆಟೆ ಪಲ್ಟಿ ಹೊಡೆದಿತ್ತು. 

ಘಟನೆಯಿಂದ ರಮೇಶ್ ಗಂಭೀ ಗಂಭೀರವಾಗಿ ಗಾಯಗೊಂಡು ಅಂಗವೈಕಲ್ಯಕ್ಕೆ ತುತ್ತಾಗಿದ್ದು, ಪರಿಹಾರ ಕೋರಿ ಮೋಟಾರು ಅಪಘಾತ ಪರಿಹಾರ ಕ್ಷೇಮು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣವು ರಮೇಶ್‌ ಗೆ ಒಟ್ಟು8,10,639 ರು. ನೀಡುವಂತೆ ವಿಮಾ ಕಂಪನಿಗೆ ಸೂಚಿಸಿತ್ತು. ಈ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ರಮೇಶ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 

ಮತ್ತೊಂದೆಡೆ ವಕೀಲರು ಅಲ್ಲಗಳೆದಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಆರ್‌ಸಿ ಹಾಗೂ ರಿಜಿಸ್ಟರ್ ದಾಖಲೆಗಳ ಪ್ರಕಾರ ಸರಕು ಆಟೋ ರಿಕ್ಷಾ ಸೀಟಿನ ಸಾಮರ್ಥ್ಯ ಒನ್ ಪ್ಲಸ್ ಒನ್ ಆಗಿರುತ್ತದೆ. ಜೊತೆಗೆ ವಿಮಾ ಏಜೆನ್ಸಿ ಯೊಂದಿಗೆ ಮಾಡಿಕೊಂಡು ಒಪ್ಪಂದ ಪ್ರಕಾರ, ಚಾಲಕ ಹಾಗೂ ಏಜೆನ್ಸಿಯ ಉದ್ಯೋಗಿಯಾದ ಕ್ಷೇಮುದಾರ ರಮೇಶ್ ಏಕ ಕಾಲದಲ್ಲಿ ಆಟೋದಲ್ಲಿ ಪ್ರಯಾಣಿಸಬಹುದು. ಹಾಗಾಗಿ, ಆತನಿಗೆ ಪರಿಹಾರ ನೀಡುವ ಹೊಣೆ ವಿಮಾ ಕಂಪನಿಯದ್ದಾಗಿದೆ. ನ್ಯಾಯಾಧಿಕರಣ ನಿಗದಿಪಡಿಸಿರುವ ಪರಿಹಾರ ಮೊತ್ತ ಅಧಿಕವಾಗಿದೆ ಹಾಗೂ ಪರಿಹಾರ ಪಾವತಿ ಹೊಣೆ ತನ್ನ ಮೇಲೆ ಹೊರಿಸಿರುವುದು ಸರಿ ಇಲ್ಲ ಎಂದು ಆಕ್ಷೇಪಿಸಿ ಆಟೋ ವಿಮಾ ಪಾಲಿಸಿ ವಿತರಿಸಿದ್ದ ವಿಮಾ ಕಂಪನಿಯು ಪ್ರತ್ಯೇಕ ಮೇಲ್ಮ ನವಿ ಸಲ್ಲಿಸಿತ್ತು. 

ರೇಪ್‌ ಕೇಸ್‌: ಜಾಮೀನು ಅರ್ಜಿ ವಜಾ, ಬೇಲ್‌ ಪಡೆಯಲು ಪ್ರಜ್ವಲ್‌ ರೇವಣ್ಣ ಅರ್ಹರಲ್ಲ ಎಂದ ಹೈಕೋರ್ಟ್‌!

ವಿಮಾ ಕಂಪನಿ ಪರ ವಕೀಲರು, ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ಹಾಗೂ ವಿಮಾ ಕಂಪನಿಯ ಪಾಲಿಸಿ ಪ್ರಕಾರ ಸರಕು ಆಟೋರಿಕ್ಷಾ ಕೇವಲ ಒಂದು ಆಸನ ಸಾಮರ್ಥ್ಯ ಹೊಂದಿರುತ್ತದೆ. ಅದರಂತೆ ಚಾಲಕ ಮಾತ್ರ ಆಟೋದಲ್ಲಿಪ್ರಯಾಣಿಸಬೇಕು. ಮತ್ಯಾವುದೇ ವ್ಯಕ್ತಿಯು ಸರಕು ಆಟೋರಿಕ್ಷಾದಲ್ಲಿ ಪ್ರಯಾಣಿ ಸಲು ಅನುಮತಿ ಇರುವುದಿಲ್ಲ. ಪ್ರಕರಣದಲ್ಲಿ ಚಾಲಕನ ಪಕ್ಕ ಕ್ಷೇಮುದಾರ ರಮೇಶ್ ಕುಳಿತು ಪ್ರಯಾಣಿಸುತ್ತಿದ್ದರು. ಇದು ವಿಮಾ ಕಂಪನಿಯ ಷರತ್ತು ಉಲ್ಲಂಘನೆಯಾಗಿದ್ದು, ಘಟನೆ ಸಂಬಂಧ ಕ್ಷೇಮುದಾರನಿಗೆ ಪರಿಹಾರ ಪಾವತಿಯ ಹೊಣೆ ವಿಮಾ ಕಂಪನಿಯ ಮೇಲಿರುವುದಿಲ್ಲ ಎಂದು ಆಕ್ಷೇಪಿಸಿತ್ತು. 

ಈ ವಾದವನ್ನು ಕ್ಷೇಮುದಾರ ರಮೇಶ್ ಪರ ಘಟನೆಯಿಂದ ಸಂತ್ರಸ್ತನು ಉದ್ಯೋಗ ನಿರ್ವಹಿಸಲಾಗದಷ್ಟು ಅಂಗವೈಕಲ್ಯಕ್ಕೆ (ಶೇ.100) ಒಳಗಾಗಿದ್ದಾನೆ. ಘಟನೆ ನಡೆದಾಗ ಆತನಿಗೆ 30 ವರ್ಷವಾಗಿದ್ದು, ಮಾಸಿಕ 5 ಸಾವಿರ ರು. ವೇತನ ಪಡೆಯುತ್ತಿದ್ದರು. ಪರಿಹಾರ ನಿಗದಿ ಮಾರ್ಗಸೂಚಿಗಳನ್ವಯ ನ್ಯಾಯಾಧಿಕರಣ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿಯಾಗಿ 10 ಲಕ್ಷ ರು. ಪರಿಹಾರ ಪಡೆಯಲು ರಮೇಶ್ ಅರ್ಹರಾಗಿದ್ದಾರೆ ಎಂದು ಆದೇಶಿಸಿದೆ.

click me!