ರಾಷ್ಟ್ರಪತಿ ಆಗಮನ: ಇಂದು, ನಾಳೆ ನಂದಿಬೆಟ್ಟ ಪ್ರವೇಶ ನಿಷಿದ್ಧ

By Ravi Janekal  |  First Published Jul 2, 2023, 1:15 PM IST

ಇತಿಹಾಸ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಜು.2 ಮತ್ತು 3 ರಂದು ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಿ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಆದೇಶ ಹೊರಡಿಸಿದ್ದಾರೆ. 


ಚಿಕ್ಕಬಳ್ಳಾಪುರ (ಜು.2): ಇತಿಹಾಸ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಜು.2 ಮತ್ತು 3 ರಂದು ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಿ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಆದೇಶ ಹೊರಡಿಸಿದ್ದಾರೆ. 

ಜು.3 ರಂದು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಆಯೋಜಿಸಿರುವ ಖಾಸಗಿ ಕಾರ್ಯಕ್ರಮಕ್ಕೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು(The president of india Droupadi Murmu) ಮತ್ತಿತರ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆ ಭದ್ರತಾ ದೃಷ್ಠಿಯಿಂದ ನಂದಿ ಗಿರಿಧಾಮಕ್ಕೆ ಮತ್ತು ಸ್ಕಂದಗಿರಿಗೆ ಬರುವ ಪ್ರವಾಸಿಗರಿಗೆ ಜು.2ರ ಬೆಳಗ್ಗೆ 6 ಗಂಟೆಯಿಂದ ಜು.3ರ ಸಂಜೆ ಆರು ಗಂಟೆಯವರೆಗೂ ಭಾರತೀಯ ದಂಡ ಸಂಹಿತೆ ಕಲಂ 144 ಅನ್ವಯ ನಿಷೇಧ ಹೇರಿರುವುದಾಗಿ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಆದೇಶ ಹೊರಡಿಸಿದ್ದಾರೆ. 

Tap to resize

Latest Videos

ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್‌

ಈ ಎರಡು ದಿನಗಳ ಕಾಲ ಪ್ರವಾಸಿಗರು ನಂದಿಗಿರಿ ಮತ್ತು ಸ್ಕಂದಗಿರಿಧಾಮಗಳತ್ತ ಬಾರದಂತೆ ಡಿಸಿ ಮನವಿ ಮಾಡಿದ್ದಾರೆ.

ಗೌರವ ಡಾಕ್ಟರೇಟ್‌ಗೆ ಆರು ಗಣ್ಯರ ಆಯ್ಕೆ

ಚಿಕ್ಕಬಳ್ಳಾಪುರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ವಿಜಯ್‌ ಶಂಕರ್‌ ಶುಕ್ಲಾ, ತುಳಸಿಗೌಡ ಸೇರಿದಂತೆ ಆರು ಮಂದಿಗೆ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ.

 

ಸುರಿನಾಮ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು: ಪ್ರಧಾನಿ ಮೋದಿ ಶುಭ ಹಾರೈಕೆ

ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಜು. 3ರಂದು ಸೋಮವಾರ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸಂಜೆ ನಡೆಯಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಎರಡನೇ ವರ್ಷದ ಘಟಿಕೋತ್ಸವದಲ್ಲಿ ತಮ್ಮ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಆರು ಪ್ರಖ್ಯಾತ ಭಾರತೀಯರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಿದ್ದಾರೆ.

click me!